Sunday, May 25, 2025
Google search engine

Homeಸ್ಥಳೀಯಹಿರಿಯ ನಟ ದ್ವಾರಕೀಶ್ ಅವರ ನಿಧನಕ್ಕೆ ಸಂತಾಪ ಹಾಗೂ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ...

ಹಿರಿಯ ನಟ ದ್ವಾರಕೀಶ್ ಅವರ ನಿಧನಕ್ಕೆ ಸಂತಾಪ ಹಾಗೂ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪನೆ : ಶಾಸಕ ಜಿ.ಡಿ.ಹರೀಶ್‌ಗೌಡ

ಮೈಸೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರ ಹೆಸರಿನಲ್ಲಿ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ ಸ್ಥಾಪನೆ ಮಾಡಲು ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರು ನಿರ್ಧರಿಸಿದ್ದಾರೆ.

ದ್ವಾರಕೀಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಶಾಸಕ ಜಿ.ಡಿ.ಹರೀಶ್ ಗೌಡ ಅವರು, ಹುಣಸೂರಿನ ಶಾಮರಾವ್ ಮತ್ತು ಜಯಮ್ಮ ಅವರ ಪುತ್ರರಾದ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಸೇವೆ ಸಲ್ಲಿಸುವ ಮೂಲಕ ಕಲಾ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಅಪಾರ ಗೌರವ ಪಡೆದಿದ್ದಾರೆ. ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ದ್ವಾರಕೀಶ್ ಅವರು ಹುಣಸೂರಿನ ಪುತ್ರರಾಗಿರುವುದು ಹೆಮ್ಮೆಯಸಂಗತಿಯಾಗಿದೆ.

ದ್ವಾರಕೀಶ್ ಅವರು ಮೂಲತಃ ಹುಣಸೂರಿನವರು ಆಗಸ್ಟ್ ೧೯, ೧೯೪೨ರಂದು ಶಾಮರಾವ್ ಮತ್ತು ಜಯಮ್ಮ ಅವರ ಪುತ್ರರಾಗಿ ಜನಿಸಿದರು. ನಂತರ ಮೈಸೂರಿನ ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದ ಅವರು ನಂತರ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಮಾಡಿದರು.

ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದರು. ೧೯೬೩ರಲ್ಲಿ ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರ ಜೊತೆಯಲ್ಲಿ ನಟಿಸಿದ್ದಾರೆ. ಚಲನ ಚಿತ್ರ ನಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸೇವೆ ಸಲ್ಲಿಸಿ ಹುಣಸೂರಿನ ಮಗ ರಾಜ್ಯದ ಮನೆಮಾತಾಗಿರುವುದು ಸಂತೋಷ ತಂದಿದೆ.

ಸಂತಾಪ: ಹುಣಸೂರಿನ ಕಲಾವಿದ ದ್ವಾರಕೀಶ್ ಅವರು ಮಂಗಳವಾರ ನಿಧನರಾಗಿದ್ದರಿಂದ ಕನ್ನಡ ಚಲನಚಿತ್ರ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಹಾಗೂ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದ ಪ್ರಾರ್ಥಿಸುತ್ತೇನೆ.

ಪ್ರಶಸ್ತಿ ಸ್ಥಾಪನೆ: ಹುಣಸೂರಿನ ಹಿರಿಯ ನಟ ದ್ವಾರಕೀಶ್ ಅವರು ಚಲನಚಿತ್ರ ಕಲಾ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿ ಜನಾನುರಾಗಿ ಮನೆ ಮಾತಾಗಿದ್ದಾರೆ.ಇವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಪ್ರಕಟ ಮಾಡುವಂತೆ ಮುಖ್ಯಮಂತ್ರಿ ಗಳನ್ನು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರನ್ನು ಒತ್ತಾಯಿಸುತ್ತೇನೆ. ನಾನು ಕೂಡ ನನ್ನ ಹುಣಸೂರು ವಿಧಾನಕ್ಷೇತ್ರದಲ್ಲಿ ಜನಿಸಿದ ಹಿರಿಯ ನಟ ದ್ವಾರಕೀಶ್ ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಾನು ವೈಯಕ್ತಿಕವಾಗಿ 2ಲಕ್ಷ ರೂಗಳ ಮೊತ್ತದ ಹಣವನ್ನು ಠೇವಣಿಯಾಗಿ ಇಟ್ಟು ಪ್ರತಿ ವರ್ಷ ಸಕ್ರಿಯವಾಗಿ ಚಲನಚಿತ್ರ ವಿಭಾಗದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಹಿರಿಯ ನಟ ದ್ವಾರಕೀಶ್ ಹೆಸರಿನಲ್ಲಿ KWJU ನಲ್ಲಿ ರಾಜ್ಯ ಮಟ್ಟದ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಈ ಕೋರಿದ್ದೇನೆಂದು ಪತ್ರಿಕಾ ಹೇಳಿಕೆಯಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಅವರು ತಿಳಿಸಿದ್ದಾರೆ.

ಕೆಯುಡಬ್ಲ್ಯೂಜೆ ಅಭಿನಂದನೆ

ಖ್ಯಾತ ಚಿತ್ರನಟ ಮತ್ತು ನಿರ್ದೇಶಕ ದ್ವಾರಕೀಶ್ ಹೆಸರಿನಲ್ಲಿ ಕೆಯುಡಬ್ಲ್ಯೂಜೆ ಯಲ್ಲಿ ದತ್ತಿನಿಧಿ ಸ್ಥಾಪಿಸಲು ಅವರ ಅಭಿಮಾನಗಳ ಪರವಾಗಿ ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಅವರು ಮುಂದೆ ಬಂದಿರುವುದು ಸ್ವಾಗತಾರ್ಹ. ಪ್ರತಿ ವರ್ಷವೂ ದ್ವಾರಕೀಶ್ ಹೆಸರಿನಲ್ಲಿ ಸಿನಿಮಾ ಬಗ್ಗೆ ವರದಿ ಮಾಡುವ ಕ್ರಿಯಾಶೀಲ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೆಯುಡಬ್ಲ್ಯೂಜೆ ಯಲ್ಲಿ ನಟ ಮತ್ತು ನಿರ್ದೇಶಕ ದ್ವಾರಕೀಶ್ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ಸ್ಥಾಪನೆ ಮಾಡಲು ಮುಂದೆ ಬಂದಿರುವ ಶಾಸಕ ಹರೀಶ್ ಗೌಡ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular