Monday, October 6, 2025
Google search engine

Homeಸ್ಥಳೀಯಮೊಬೈಲ್ ಬಳಕೆ ಮಕ್ಕಳ ಕ್ರಿಯಾಶೀಲತೆಗೆ ಅಡ್ಡಿಯಾಗುತ್ತಿದೆ : ಡಾ. ಎಂ. ಕಿಶೋರ್

ಮೊಬೈಲ್ ಬಳಕೆ ಮಕ್ಕಳ ಕ್ರಿಯಾಶೀಲತೆಗೆ ಅಡ್ಡಿಯಾಗುತ್ತಿದೆ : ಡಾ. ಎಂ. ಕಿಶೋರ್

ವರದಿ ಎಡತೊರೆ ಮಹೇಶ್

ಮೈಸೂರು : ಹಾರ್ಟ್ ಸಂಸ್ಥೆ ಮೈಸೂರು, ಮೈಸೂರು ಇಂಟರ್ನ್ಯಾಷನಲ್ ಸ್ಕೂಲ್ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಜೆ ಎಸ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಕಿಶೋರ್ ರವರು ಮಾತನಾಡಿ, ಮಕ್ಕಳು ಮೊಬೈಲ್ ನಿಂದ ಅಂತರವನ್ನು ಕಂಡುಕೊಂಡರೆ ನಿಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಹೋರ ತೆಗೆಯಲು ಸಾಧ್ಯವಾಗುತ್ತದೆ ಎಂದರು.

ಮೈಸೂರು ಇಂಟರ್ನ್ಯಾಷನಲ್ ಶಾಲೆಯ 8, 9, 10ನೇ ತರಗತಿ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,
ನಮ್ಮ ದೇಶದಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಈ ದೇಶದ ಮೊದಲ ಪ್ರಜೆಯಾದರು, ಅವರ ಆಲೋಚನೆ ಮೂಲಕ ಖ್ಯಾತಿ ಪಡೆದರು, ನೋಬಲ್ ಪ್ರಶಸ್ತಿ ವಿಜೇತ ಸಿ. ವಿ. ರಾಮನ್ ಶ್ರೇಷ್ಠ ವಿಜ್ಞಾನಿಗಳಾದರು, ಸುಧಾಮೂರ್ತಿ ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಪದ್ಮ ಭೂಷಣ, ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾದರು, ಉತ್ತಮ ಸಾಹಿತ್ಯದ ಮೂಲಕ ಕನ್ನಡ ಜ್ಞಾನಪೀಠ ಪ್ರಸ್ತಿಯನ್ನು ಕುವೆಂಪು ತಮ್ಮದಾಗಿಸಿಕೊಂಡರು, ಇನ್ನು ಹಲವಾರು ಮಹನೀಯರು ಹಲವಾರು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ.

ತಾವು ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಬೇಕು, ಪ್ರತಿಯೊಂದು ಕೆಲಸದಲ್ಲೂ ಹೊಸತನವನ್ನು ಹುಡುಕಬೇಕು, ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದರತ್ತ ಸಾಗುತ್ತಿರಬೇಕು, ವಿದ್ಯಾರ್ಥಿಗಳ ಗಮನ ಒಳ್ಳೆಯ ಅಭ್ಯಾಸ ಮತ್ತು ಹವ್ಯಾಸಗಳ ಕಡೆ ಇರಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ತಂದೆ ತಾಯಂದಿರು ಮಕ್ಕಳನ್ನು ಊಟ ಮಾಡಿಸಲು, ಆಟ ಆಡಿಸಲು ಮೊಬೈಲ್ ನೀಡಿ ತಮ್ಮ ಕೆಲಸಕಾರ್ಯ ಮಾಡಲು ಮುಂದಾಗುತ್ತಾರೆ. ಇದರಿಂದ ಮಕ್ಕಳು ಮೊಬೈಲ್ ವ್ಯಸನಕ್ಕೆ ತುತ್ತಾಗುತ್ತಾರೆ, ಮಕ್ಕಳ ಎಲ್ಲ ಚಟುವಟಿಕೆಗಳು ಫೋನ್ ನಲ್ಲೆ ನಡೆದು ಒಳ್ಳೆ ಹವ್ಯಾಗಳಿಗಿಂತ ಮಕ್ಕಳು ರೀಲ್ಸ್, ಇಸ್ಟಾಗ್ರಮ್, ಫೇಸ್ಬುಕ್ ದಾಸರಾಗುತ್ತಾರೆ, ಮೊಬೈಲ್ ಬಳಕೆಯಿಂದ, ಅಲ್ಲಿ ಬರುವ ಚಿತ್ರಗಳನ್ನು ನೋಡಿ, ಬೀಡಿ, ಸಿಗರೇಟ್ ಸೇವನೆ, ಗುಟ್ಕಾ, ಗಾಂಜಾ, ಇನ್ನಿತರ ಆನ್ ಲೈನ್ ಗೇಮ್, ಸ್ಕ್ಯಾಮ್ ಗಳಿಗೆ ಬಲಿಯಾಗುತ್ತಾರೆ. ಮುಂದುವರಿದು ಇನೋಸೆಂಟ್ ಮಕ್ಕಳು ಮೊಬೈಲ್ ಬಳಕೆ ಸಂಧರ್ಭದಲ್ಲಿ ಫೋಟೋ, ವಿಡಿಯೋ ಸೆಂಡ್ ಆಗಿ ಪಶ್ಚಾತಾಪ ಪಡುತ್ತಾರೆ. ಇದರಿಂದ ಮಕ್ಕಳು ಮತ್ತು ಪೋಷಕರಿಗೆ ತುಂಬಲಾರದ ನಷ್ಟ ಸಂಭವಿಸಬಹುದು ಎಂದು ತಿಳಿಸಿದರು.

ಮಕ್ಕಳ ಒಳಗೆ ಇರುವ ಪ್ರತಿಭೆಯನ್ನು ಹೊರ ತರಲು ಚಿತ್ರ ಬಿಡಿಸುವ ಕಲೆ ಉತ್ತಮ, ಮಕ್ಕಳು ಮೊಬೈಲ್ ನೋಡಿ ಚಿತ್ರ ಬರೆಯುವ ಬದಲು ತಮ್ಮ ಕೈ ಚಳಕದ ಮೂಲಕ ಚಿತ್ರಬಿಡಿಸುವುದು, ಇದರಿಂದ ಮಕ್ಕಳಿಗೆ ಹೊಸತನ ಏಕಾಗ್ರತೆ, ಹೆಚ್ಚಾಗುತ್ತದೆ, ಚಿತ್ರ ಬರೆಯುವ ಮೂಲಕ ರವಿ ವರ್ಮಾ ಹೆಸರುವಾಸಿಯಾದರು.
ಮಕ್ಕಳು ಹೊರಗಡೆ ಬಂದು ದಿನಕ್ಕೆ ಒಂದು ಘಂಟೆಯಾದರು ಆಟವಾಡಬೇಕು, ಇದರಿಂದ ಹೊರಗಿನ ಪ್ರಪಂಚದಲ್ಲಿ ಇರುವ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ ಇದಕ್ಕೆ ಪರಿಹಾರವನ್ನು ಹುಡುಕಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಪ್ರೀತಿ ವಿನ್ಸೆಂಟ್, ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ, ಶಾಲೆಯ ಶಿಕ್ಷಕರು ಮಕ್ಕಳು ಇದ್ದರು.

RELATED ARTICLES
- Advertisment -
Google search engine

Most Popular