Monday, May 11, 2026
Google search engine

Homeದೇಶಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಮನವಿ ಬೆನ್ನೆಲೆ ಬಂಗಾರದ ಬೆಲೆ ಭಾರೀ ಇಳಿಕೆ!

ಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಮನವಿ ಬೆನ್ನೆಲೆ ಬಂಗಾರದ ಬೆಲೆ ಭಾರೀ ಇಳಿಕೆ!

ಮುಂಬೈ: ದೇಶದ ಆರ್ಥಿಕ ಹಿತದೃಷ್ಟಿಯಿಂದ ಭಾರತೀಯರು ಒಂದು ವರ್ಷದವರೆಗೆ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಪ್ರಧಾನಿಯವರ ಈ ಮನವಿಯ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

ಬೆಳಗ್ಗೆ 9:40ರ ವೇಳೆಗೆ ಜೂನ್‌ ತಿಂಗಳ ಚಿನ್ನದ ಫ್ಯೂಚರ್‌ ಕಾಂಟ್ರಾಕ್ಟ್‌ 574 ರೂ. (.38%) ರೂ. ಇಳಿಕೆಯಾಗಿದೆ 1,53,669 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ. ಆದರೆ ಬೆಳ್ಳಿಯ ದರ ಏರಿಕೆಯಾಗಿದೆ. ಜೂನ್‌ ಫ್ಯೂಚರ್‌ 698 ರೂ. (.26%) ಏರಿಕೆಯಾಗಿದ್ದು 2,65,957 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ. ಈ ದರ ಇಂದು ಸಂಜೆ ಮಾರುಕಟ್ಟೆ ಕೊನೆಯಾಗುವ 3:30ರ ವೇಳೆಗೆ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ.

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದೆ. ಈ ಸವಾಲುಗಳನ್ನು ಎದುರಿಸಲು ಭಾರತೀಯರು ಸಿದ್ಧರಾಗಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular