Tuesday, December 2, 2025
Google search engine

HomeUncategorizedರಾಷ್ಟ್ರೀಯಪ್ರಧಾನಿ ಮೋದಿಗೆ ಮೋಹನ್‌ ಭಾಗವತ್‌ ಪ್ರಶಂಸೆ

ಪ್ರಧಾನಿ ಮೋದಿಗೆ ಮೋಹನ್‌ ಭಾಗವತ್‌ ಪ್ರಶಂಸೆ

ಪುಣೆ : ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ವಿಶ್ವ ನಾಯಕರು ಎಚ್ಚರಿಕೆಯಿಂದ ಆಲಿಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದು, ಆರ್‌ಎಸ್‌‍ಎಸ್‌‍ನ 100ನೇ ವರ್ಷಾಚರಣೆ ಹಿನ್ನೆಲೆ ಪುಣೆಯಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಭಾರತದ ಶಕ್ತಿ ಪ್ರಕಟವಾಗುತ್ತಿರುವುದರಿಂದ ದೇಶವು ತನ್ನ ಸರಿಯಾದ ಸ್ಥಾನವನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಜಯಂತಿಗಳು ಅಥವಾ ಶತಮಾನೋತ್ಸವಗಳಂತಹ ಮೈಲಿಗಲ್ಲುಗಳನ್ನು ಆಚರಿಸಲು ಎದುರು ನೋಡಬಾರದು, ಆದರೆ ನಿಗದಿತ ಸಮಯದೊಳಗೆ ನೀಡಲಾದ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೂ ಸಂಘವು ಅದನ್ನೇ ಮಾಡುತ್ತಿದೆ. ಸಂಘವು 100 ವರ್ಷಗಳನ್ನು ಪೂರೈಸಿದ್ದರೂ, ಸವಾಲುಗಳನ್ನು ಮತ್ತು ಅನೇಕ ಬಿರುಗಾಳಿಗಳನ್ನು ಎದುರಿಸಿದ್ದರೂ, ಇಡೀ ಸಮಾಜವನ್ನು ಒಂದುಗೂಡಿಸುವ ಕಾರ್ಯವು ಏಕೆ ಇಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದು ಎಂದು ಹೇಳಿದ್ದಾರೆ.

ಅದಲ್ಲದೇ ಭಾರತವು ಉದಯಿಸಿದಾಗ, ಜಾಗತಿಕ ಸಮಸ್ಯೆಗಳು ಬಗೆಹರಿಯುತ್ತವೆ, ಸಂಘರ್ಷಗಳು ಕಡಿಮೆಯಾಗುತ್ತವೆ ಮತ್ತು ಶಾಂತಿ ನೆಲೆಸುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ ಎಂದು ಆರ್‌ಎಸ್‌‍ಎಸ್‌‍ ನಾಯಕ ಅಭಿಪ್ರಾಯಪಟ್ಟರು. ಜಾಗತಿಕ ಮಟ್ಟದಲ್ಲಿ ಭಾರತದ ಬೆಳೆಯುತ್ತಿರುವ ನಿಲುವನ್ನು ಎತ್ತಿ ತೋರಿಸುತ್ತಾ, ಪ್ರಧಾನಿ ಅವರ ಮಾತನ್ನು ಜಾಗತಿಕವಾಗಿ ಏಕೆ ತೀವ್ರವಾಗಿ ಕೇಳಲಾಗುತ್ತಿದೆ? ಭಾರತದ ಶಕ್ತಿ ಈಗ ಸರಿಯಾಗಿದ ಹಾದಿಯಲ್ಲಿದೆ ಎಂದು ಹೇಳಿದರು.

ನಮ್ಮ ಅಡಿಪಾಯವು ವೈವಿಧ್ಯದ ಮೂಲಕ ಏಕತೆಯಲ್ಲಿದೆ. ನಾವು ಒಟ್ಟಿಗೆ ನಡೆಯಬೇಕು ಮತ್ತು ಅದಕ್ಕಾಗಿ ಧರ್ಮ ಅತ್ಯಗತ್ಯ. ಭಾರತದಲ್ಲಿ, ಎಲ್ಲಾ ತತ್ವಶಾಸ್ತ್ರಗಳು ಒಂದೇ ಮೂಲದಿಂದ ಹುಟ್ಟಿಕೊಂಡಿವೆ. ಏಕೆಂದರೆ ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ ಮತ್ತು ನಾವು ಸಾಮರಸ್ಯದಿಂದ ಮುಂದುವರಿಯಬೇಕು ಎಂದು ಭಾಗವತ್‌ ಈ ಮುಖೇನ ಪ್ರತಿಪಾದಿಸಿದ್ದಾರೆ.

RELATED ARTICLES
- Advertisment -
Google search engine

Most Popular