Wednesday, May 21, 2025
Google search engine

HomeUncategorizedರಾಷ್ಟ್ರೀಯಅಕ್ರಮ ಹಣ ವರ್ಗಾವಣೆ: ದೆಹಲಿಯ ಸಚಿವ ರಾಜ್ ಕುಮಾರ್ ಆನಂದ್ ಮನೆ ಮೇಲೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ: ದೆಹಲಿಯ ಸಚಿವ ರಾಜ್ ಕುಮಾರ್ ಆನಂದ್ ಮನೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಗುರುವಾರ ದೆಹಲಿ ಸಚಿವ ಮತ್ತು ಎಎಪಿ ನಾಯಕ ರಾಜ್ ಕುಮಾರ್ ಆನಂದ್ ಅವರ ಮನೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಸಚಿವರ ನಿವೇಶನ ಮತ್ತು ಇತರ ಕೆಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಪಟೇಲ್ ನಗರದ ಶಾಸಕರಾಗಿರುವ ಇವರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಚಿವರಾಗಿದ್ದಾರೆ.

ಇಂದು ಅರವಿಂದ್‌ ಕೇಜ್ರಿವಾಲ್‌ ವಿಚಾರಣೆ

ಮದ್ಯ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ  ಬಳಿಕ ಕೇಜ್ರಿವಾಲ್‌ ಅವರಿಗೆ ಇಡಿ ಸಮನ್ಸ್‌ ನೀಡಿದೆ.

RELATED ARTICLES
- Advertisment -
Google search engine

Most Popular