Saturday, November 8, 2025
Google search engine

Homeರಾಜ್ಯಸುದ್ದಿಜಾಲಮಾತೃಭಾಷೆ ನಮ್ಮ ಅಸ್ಮಿತತೆ ಹಾಗೂ ಸಂಸ್ಕೃತಿಯ ಪ್ರತಿಬಿಂಬ: ಡಾ.ಬಿ.ಎಸ್.ಜಯ

ಮಾತೃಭಾಷೆ ನಮ್ಮ ಅಸ್ಮಿತತೆ ಹಾಗೂ ಸಂಸ್ಕೃತಿಯ ಪ್ರತಿಬಿಂಬ: ಡಾ.ಬಿ.ಎಸ್.ಜಯ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮಾತೃಭಾಷೆ ನಮ್ಮ ಅಸ್ಮಿತತೆ ಹಾಗೂ ಸಂಸ್ಕೃತಿಯ ಪ್ರತಿಬಿಂಬ ಅದನ್ನು ಕಾಪಾಡಿಕೊಂಡು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದ್ದು ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ನಾವೆಲ್ಲ ದಾರಿ ಕಂಡುಕೊಳ್ಳಬೇಕಿದೆ ಎಂದು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಜಯ ಹೇಳಿದರು.

ಪಟ್ಟಣದ ಎಡತೊರೆ ಬಿಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬಿಳ್ಕೊಡುಗೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ನಮ್ಮ ಭಾಷೆಗೆ ಉಜ್ವಲ ಭವಿಷ್ಯವಿದ್ದು ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಶಿಕ್ಷಣಾರ್ಥಿಗಳು ಹಾಗೂ ಶಿಕ್ಷಕರು ಕೇವಲ ಪುಸ್ತಕದಲ್ಲಿರುವ ವಿಷಯವನ್ನು ಕಲಿಯುವುದಕ್ಕೆ ಹಾಗೂ ಕಲಿಸುವುದಕ್ಕೆ ಮಾತ್ರ ಸೀಮಿತವಾಗದೆ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಜತೆಗೆ ತಮ್ಮ ವಿದ್ಯಾರ್ಥಿಗಳು ಹಾಗೂ ಸಹಪಾಠಿಗಳ ಮಾತನಾಡಿದರೆ ಅದು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ.ಶಿವಲಿಂಗಯ್ಯ ಮಾತನಾಡಿ ಸಮಾಜದಲ್ಲಿ ಶಿಕ್ಷಕರ ಮೇಲೆ ಜವಬ್ಧಾರಿ ಹೆಚ್ಚಾಗಿದ್ದು ನಿಮ್ಮ ಕೊಡುಗೆಯು ಬೇಕಾಗಿದೆ. ಸಮಾಜದಲ್ಲಿರುವ ಕೆಟ್ಟ ಕಳೆಗಳನ್ನು ಕಿತ್ತು ಆಕಲು ನೀವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಪ್ರಮಾಣಿಕತೆ ಹಾಗೂ ಮೌಲ್ಯಗಳನ್ನು ಬಿತ್ತಿ ಬೆಳೆಯಬೇಕು, ಶಿಕ್ಷಕರಲ್ಲಿ ತಾಯಿ ಹೃದಯ ಇರಬೇಕು ಎಂದರು.

ಶಿಕ್ಷಕ ವತ್ತಿಗೆ ಸಮಾಜದಲ್ಲಿ ಬಹಳ ಗೌರವ ಭಾವನೆ ಇದೆ. ಯಾವುದೇ ಸ್ವಾರ್ಥ ವಿಲ್ಲದೇ ಕೆಲಸ ಮಾಡಿದಾಗ ಮಾತ್ರ ಗುರು ಆಗಲು ಸಾದ್ಯ. ನೀವು ಸಂಪಾಧಿಸಿದರಲ್ಲಿ ಸ್ವಲ್ಪ ನಿಮ್ಮ ಮುಂದಿರುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸಹಾಯ ಮಾಡಿದರೆ ಅವರ ಜೀವನಕ್ಕು ಅನುಕೂಲವಾಗಲಿದೆ. ತರಗತಿಯಲ್ಲಿದ್ದಾಗ ಗುರುವಾಗಿ ತರಗತಿ ಹೊರಗಡೆ ಸ್ನೇಹ ಜೀವಿಯಾಗಿರಿ ಎಂದು ಕಿವಿ ಮಾತು ಹೇಳಿದರು.

ನಮ್ಮ ಕನ್ನಡ ಪ್ರಾಚೀನ ಭಾಷೆಯಾಗಿದ್ದು ೨ ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ೮ ಜ್ಞಾನ ಪೀಠ ಪ್ರಶಸ್ತಿಗಳು ಸಂದಿವೆ. ಆದರೆ ಇತ್ತೀಚೆಗೆ ಕನ್ನಡಿಗರು ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಮಾತೃ ಭಾಷೆಯ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದಾರೆ. ವ್ಯವರಿಕ ಭಾಷೆಯಾಗಿ ಇತರೆ ಭಾಷೆಗಳನ್ನು ಬಳಸಿ ಆದರೇ ತಾಯಿ ಭಾಷೆ ಕನ್ನಡವನ್ನು ಎಂದು ಮರೆಯದೆ ಮಾತಮಾಡಬೇಕು ಹಾಗೂ ಇತರ ಭಾಷಿಕರಿಗೆ ಕಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಕುರಿತು ಕಾಲೇಜು ವ್ಯವಸ್ಥಾಪಕ ಲೋಕೇಶ್ ಭರಣಿ, ಪ್ರಾಂಶುಪಾಲೆ ಎನ್.ಎಸ್.ದೀಪ, ಉಪನ್ಯಾಸಕರಾದ ಮಹದೇವ್, ಮಹೇಶ್ವರಿಸ್ವಾಮಿ ಮಾತನಾಡಿದರು. ವೇದಿಕೆಯಲ್ಲಿ ಪ್ರಶಿಕ್ಷಣಾರ್ಥಿಗಳು ವಿವಿಧ ಸಾಂಸ್ಕೃತಿಹ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಗೌರವಾದ್ಯಕ್ಷೆ ಸುಮಜನಾರ್ಧನ್, ಉಪನ್ಯಾಸಕರಾದ ಜಯರತ್ನ, ಮೋಹನಕುಮಾರಿ, ಕೆ.ಬಿ.ಭೀನಾ, ಸಿಬ್ಬಂದಿಗಳಾದ ವಸಂತಮ್ಮ, ಗೀತಮ್ಮ ಸೇರಿದಂತೆ ಇನ್ನಿತರರು ಇದ್ದರು.


RELATED ARTICLES
- Advertisment -
Google search engine

Most Popular