Tuesday, May 20, 2025
Google search engine

Homeರಾಜ್ಯಸುದ್ದಿಜಾಲಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಪಿಡುಗು ಹೋಗಲಾಡಿಸಲು ಮುಂದಾಗಿ: ಮೋಹನ್ ಕುಮಾರ್

ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಪಿಡುಗು ಹೋಗಲಾಡಿಸಲು ಮುಂದಾಗಿ: ಮೋಹನ್ ಕುಮಾರ್

ಗುಂಡ್ಲುಪೇಟೆ: ಶತಮಾನಗಳಿಂದಲೂ ಇರುವ ಜಾತೀಯತೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆಯಂತಹ ಪಿಡುಗುಗಳನ್ನು ಹೋಗಲಾಡಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮನವಿ ಮಾಡಿದರು. ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಚಾಮರಾಜನಗರ, ತಾಲೂಕು ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಗುಂಡ್ಲುಪೇಟೆ, ಗ್ರಾಮ ಪಂಚಾಯಿತಿ ಹಾಗೂ ಕ್ರಿಯಾ ಪೌಂಡೇಷನ್ ಗುಂಡ್ಲುಪೇಟೆ ಇವರ ಸಹಯೋಗದಲ್ಲಿ ಅಸ್ಪೃಶ್ಯತೆ ನಿಷೇಧ ಮತ್ತು ನಿಯಂತ್ರಣ ಹಾಗೂ ಎಸ್ಸಿ, ಎಸ್ಟಿ ಕಾಯ್ದೆಯ ಮಹತ್ವ ಕುರಿತು ಹಮ್ಮಿಕೊಂಡಿದ್ದ ಒಂದು ದಿನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರ ದಾಸ್ಯದಿಂದ ಮುಕ್ತರಾದ ನಂತರ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಸ್ವಾತಂತ್ರ್ಯ ನಂತರ ಸಂವಿಧಾನದ ಅನುಚ್ಛೇದ ೧೫ರಲ್ಲಿ ಅಸ್ಪೃಶ್ಯತೆ ಪಿಡುಗು ನಿವಾರಣೆ ಸೇರಿದ್ದರು. ಹೀಗಿದ್ದರು ಕೂಡ ಸ್ವಾತಂತ್ರ್ಯ ಬಂದು ೩೦ ವರ್ಷ ಕಳೆದರು ಅಸ್ಪೃಶ್ಯತೆ ಹೆಸರಿನಡಿ ಎಸ್ಟಿ, ಎಸ್ಟಿ ದೌರ್ಜನ್ಯ ನಿಂತಿರಲಿಲ್ಲ. ಇದರನ್ನು ಸರಿಪಡಿಬೇಕು ಎಂಬ ಉದ್ದೇಶದಿಂದ ೧೯೮೯ರಲ್ಲಿ ಎಸ್ಟಿ, ಎಸ್ಟಿ ವರ್ಗದರಿಗೆ ಆಗುವ ದೌರ್ಜನ್ಯ ತಡೆಗಟ್ಟಲು ಕಾಯ್ದೆ ಅದಿನಿಯಮ ಜಾರಿಗೆ ತರಲಾಯಿತು. ೨೦೧೫ ಹಾಗೂ ೨೦೨೦ರಲ್ಲಿಯೂ ಸಹ ಸಾಕಷ್ಟು ತಿದ್ದುಪಡಿಗಳಾಗಿದೆ. ಇದರಡಿ ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಸಿಗಬೇಕು ಎಂದು ಕಾನೂನು ಜಾರಿ ಮಾಡಲಾಯಿತು ಎಂದು ತಿಳಿಸಿದರು.

ದೇವಸ್ಥಾನ, ಹೋಟೆಲ್, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಪ್ರವೇಶ ನಿರಾಕರಿಸುವುದು ಸರಿಯಲ್ಲ. ಈ ಹಿಂದೆ ಕೇವಲ ಕುಲಕಸುಬಿನ ಆಧಾರದ ಮೇಲೆ ನಮ್ಮನ್ನು ಗುರುತಿಸುತ್ತಿದ್ದರು. ಭೂಮಿ ಮೇಲೆ ಗಂಡು-ಹೆಣ್ಣು ಎರಡೇ ಜಾತಿಯಿದ್ದು, ಮೇಲು-ಕೀಳು ಎಂಬುದಿಲ್ಲ. ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿದ್ದು, ಸಮಾಜಮುಖಿಯಾಗಿ ಜೀವಿಸುವ ಮೂಲಕ ಬದಲಾವಣೆಗೆ ಸಹಕಾರ ನೀಡಬೇಕು ಎಂದು ಕೋರಿದರು. ಮಂಗಳ ಗ್ರಹಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಸಂಕುಚಿತ ಮನೋಭಾವ ಬಿಟ್ಟು ಬದುಕುವುದನ್ನು ಪ್ರತಿಯೊಬ್ಬರು ಕಲಿಯಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆ ಹೋಗಲಾಡಿಸಲು ಪ್ರತಿಯೊಬ್ಬರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಕ್ರಿಯಾ ಪೌಂಡೇಷನ್ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿ ಕಾಳಿಂಗಸ್ವಾಮಿ ಸಿದ್ಧಾರ್ಥ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಹುಟ್ಟಿದ ನೆಲದಲ್ಲಿ ಜಾತಿ ವಿನಾಶವಾಗಬೇಕು. ತಂತ್ರಜ್ಞಾನ ಬೆಳೆದು ಚಂದ್ರ ಲೋಕಕ್ಕೆ ಮುಟ್ಟಿರುವ ನಾವು ನಮ್ಮ ಅಕ್ಕಪಕ್ಕದವರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮೀನಾ, ಸದಸ್ಯರಾದ ಶಾಂತಮ್ಮ, ಶಿವನಾಗಮ್ಮ, ಚಾಮುಂಡಿ, ಪಿಡಿಓ ಮಹದೇವಸ್ವಾಮಿ, ಶಾಲಾ ಮುಖ್ಯೋಪಧ್ಯಾಯರಾದ ಕುಮುದಾವಲ್ಲಿ, ಶಿಕ್ಷಕ ಸಂತೋಸ್ ಕುಮಾರ್, ಕ್ರಿಯಾ ಪೌಂಡೇಷನ್ ಬಿ.ಬಸವರಾಜು, ಸಿದ್ದಪ್ಪಾಜಿ ಸೇರಿದಂತೆ ಅಂಗನನಾಡಿ ಮತ್ತು ಆಶಾ ಕಾರ್ಯಕರ್ತೆರು ಹಾಗೂ ಸಂಘ ಸಂಸ್ಥೆ ಪ್ರತಿನಿಧಿಗಳು ಹಾಜರಿದ್ದರು.


RELATED ARTICLES
- Advertisment -
Google search engine

Most Popular