Friday, June 6, 2025
Google search engine

Homeರಾಜ್ಯಸುದ್ದಿಜಾಲಮೈಸೂರು ನಗರ ಪೊಲೀಸ್ ಇಲಾಖೆಯು ಆಯೋಜಿಸಿದ MPPL-5 ಕ್ರಿಕೆಟ್ ಪಂದ್ಯಾವಳಿ: MCP HUNTERS ಚಾಂಪಿಯನ್‌

ಮೈಸೂರು ನಗರ ಪೊಲೀಸ್ ಇಲಾಖೆಯು ಆಯೋಜಿಸಿದ MPPL-5 ಕ್ರಿಕೆಟ್ ಪಂದ್ಯಾವಳಿ: MCP HUNTERS ಚಾಂಪಿಯನ್‌

ಮೈಸೂರು ನಗರ ಪೊಲೀಸ್ ಇಲಾಖೆಯ ಅಧಿಕಾರಿಗಳು & ಸಿಬ್ಬಂದಿಗಳಿಗೋಸ್ಕರ ಪ್ರತಿ ವರ್ಷ MPPL (Myusuru City Police Premier League)ಎಂಬ ಕ್ರಿಕೆಟ್ ಪಂದ್ಯಾವಳಿ ಅನ್ನು ಅಯೋಜಿಸಲಾಗುತ್ತದೆ. ಪೊಲೀಸರು ದೈಹಿಕವಾಗಿ & ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಗಳಿಂದ ಮಾತ್ರ ಸಾಧ್ಯ, ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು ಎಂ. IPS ಕಾನೂನು & ಸುವ್ಯವಸ್ಥೆ, ಶ್ರೀ ಸುಂದರ್ ರಾಜ್ ಕೆ.ಎಸ್. ಅಪರಾಧ & ಸಂಚಾರ ರವರ ಉಪಸ್ಥಿತಿಯಲ್ಲಿ MPPL-5 ಫೈನಲ್ ಪಂದ್ಯಾವಳಿಯು MCP HUNTERS VS MCP BULLS ನಡುವೆ ನಡೆದಿದ್ದು ಜಯದ ಮಾಲೆಯನ್ನು MCP HUNTERS ಅಲಂಕರಿಸಿರುತ್ತಾರೆ. ರನ್ನರ್ ಅಪ್ ಆಗಿ MCP BULLS ಹೊರಹೊಮ್ಮಿರುತ್ತಾರೆ.

ಒಟ್ಟು 11 ತಂಡಗಳು ಭಾಗವಹಿಸಿದ್ದು, 62 ಪಂದ್ಯಗಳು, ಪ್ರತಿ ಪಂದ್ಯವು 8 ಒವರ್ ಗಳ ಪಂದ್ಯಗಳಾಗಿರುತ್ತದೆ. ಪ್ರತಿ ದಿನ ಬೆಳಿಗ್ಗೆ 6.30 ರಿಂದ 8.00 ಗಂಟೆಯವರೆಗೆ 1 ಪಂದ್ಯದಂತೆ ಬಂದೋಬಸ್ತ್ ಕರ್ತವ್ಯದ ದಿನಗಳನ್ನು ಹೊರತುಪಡಿಸಿ ಸತತ 4 ತಿಂಗಳು ಪಂದ್ಯಗಳು ನಡೆದಿರುತ್ತವೆ. ಅಂತಿಮ ಪಂದ್ಯದ ಪುರೋಷೋತ್ತಮವನ್ನು ಶ್ರೀ ಮಲ್ಲೇಶ್, ಸರಣಿಯ ಉತ್ತಮ ಬ್ಯಾಟ್ಸ್ ಮನ್ ಶ್ರೀ ಗಣೇಶ್, ಸರಣಿಯ ಉತ್ತಮ ಬೌಲರ್ ಶ್ರೀ ಪರುಶುರಾಮ್ ಕಾಂಬ್ಲಿ, ಸರಣಿ ಶ್ರೇಷ್ಟ ವಿಜಯ್ ಕುಮಾರ್ ರವರು ಪ್ರಶಸ್ತಿಯನ್ನು ಪಡೆದಿರುತ್ತಾರೆ.

RELATED ARTICLES
- Advertisment -
Google search engine

Most Popular