Sunday, May 25, 2025
Google search engine

Homeಅಪರಾಧಮುಂಬೈ: ಜೈಲಿನೊಳಗೆ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ ಖಾನ್‌ ಹತ್ಯೆ

ಮುಂಬೈ: ಜೈಲಿನೊಳಗೆ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ ಖಾನ್‌ ಹತ್ಯೆ

ಮುಂಬೈ: 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ಅಪರಾಧಿ ಮುನ್ನಾ ಅಲಿಯಾಸ್‌ ಮೊಹಮ್ಮದ್‌ ಅಲಿ ಖಾನ್‌ (59ವರ್ಷ) ಎಂಬಾತನನ್ನು ಜೈಲಿನಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಲ್ಲಾಪುರದ ಕಲಂಬಾ ಸೆಂಟ್ರಲ್‌ ಜೈಲ್‌ ನಲ್ಲಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಬಾತ್‌ ರೂಂನಲ್ಲಿ ಸ್ನಾನ ಮಾಡುವ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಇತರ ಕೈದಿಗಳು ಮೊಹಮ್ಮದ್‌ ಅಲಿಯಾಸ್‌ ಮನೋಜ್‌ ಕುಮಾರ್‌ ಭವಾರ್‌ ಲಾಲ್‌ ಗುಪ್ತಾನನ್ನು ಕೊಂದಿರುವುದಾಗಿ ತಿಳಿಸಿದ್ದಾರೆ.

ಸರಣಿ ಬಾಂಬ್‌ ಸ್ಫೋಟದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಖಾನ್‌ ನನ್ನು ಕೆಲವು ವಿಚಾರಣಾಧೀನ ಕೈದಿಗಳು ಡ್ರೈನೇಜ್‌ ನ ಕಬ್ಬಿಣದ ಪೈಪ್‌ ಗೆ ತಲೆಯನ್ನು ಹೊಡೆದಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆತನನ್ನು ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿ ವಿವರಿಸಿದೆ.

ಸಹ ಕೈದಿಗಳಾದ ಪ್ರತೀಕ್‌ ಅಲಿಯಾಸ್‌ ಪಿಲ್ಯಾ ಸುರೇಶ್‌ ಪಾಟೀಲ್‌, ದೀಪಕ್‌ ನೇತಾಜಿ ಖೋಟ್‌, ಸಂದೀಪ್‌ ಶಂಕರ್‌ ಚವಾಣ್‌, ರಿತುರಾಜ್‌ ವಿನಾಯಕ್‌ ಇನಾಂದಾರ್‌ ಮತ್ತು ಸೌರಭ್‌ ವಿಕಾಸ್‌ ಖಾನ್‌ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಐದು ಜನರ ಮೇಲೂ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಕೊಲ್ಹಾಪುರ ಪೊಲೀಸರು ತಿಳಿಸಿದ್ದಾರೆ. 1993ರ ಮಾರ್ಚ್‌ 12ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದರು.

RELATED ARTICLES
- Advertisment -
Google search engine

Most Popular