Thursday, May 22, 2025
Google search engine

HomeUncategorizedರಾಷ್ಟ್ರೀಯಮುಂಬೈ: ದೋಣಿ ಮಗುಚಿ ಓರ್ವ ಮಹಿಳೆ ಸಾವು: ಐವರು ನಾಪತ್ತೆ

ಮುಂಬೈ: ದೋಣಿ ಮಗುಚಿ ಓರ್ವ ಮಹಿಳೆ ಸಾವು: ಐವರು ನಾಪತ್ತೆ

ಮುಂಬೈ: ದೋಣಿಯೊಂದು ಮಗುಚಿ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿ, ಐದು ಮಂದಿ ನಾಪತ್ತೆಯಾದ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಚಮೋರ್ಶಿ ಪೊಲೀಸರ ಪ್ರಕಾರ, ಮೆಣಸಿನಕಾಯಿ ಕತ್ತರಿಸಲು ಏಳು ಮಹಿಳೆಯರು ಚಮೋರ್ಶಿಯ ಘನಪುರ ಘಾಟ್ ಬಳಿ ವನಗಂಗಾ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ದೋಣಿ ಮಗುಚಿ ಬಿದ್ದಿದೆ. ದೋಣಿ ನಡೆಸುತ್ತಿದ್ದವರು ದಡಕ್ಕೆ ಈಜಲು ಯಶಸ್ವಿಯಾದರು, ಆದರೆ ಮಹಿಳೆಯರು ನೀರಿನಲ್ಲಿ ಮುಳುಗಿದ್ದಾರೆ.

ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಸ್ಥಳೀಯ ಈಜುಗಾರರ ಸಹಾಯದಿಂದ ರಕ್ಷಣಾ ತಂಡವು ಉಳಿದ ಮಹಿಳೆಯರ ರಕ್ಷಣೆಗೆ ಪ್ರಯತ್ನ ಪಡುತ್ತಿದೆ.

RELATED ARTICLES
- Advertisment -
Google search engine

Most Popular