Sunday, September 7, 2025
Google search engine

Homeರಾಜ್ಯಸುದ್ದಿಜಾಲನಗರ ಸೇವಕ ಸಂದೀಪ ಜೀರಗ್ಯಾಳ ಕಾರ್ಯಕ್ಕೆ ಪಾಲಿಕೆ ಆಯುಕ್ತೆ ಶುಭ ಬಿ. ಮೆಚ್ಚುಗೆ

ನಗರ ಸೇವಕ ಸಂದೀಪ ಜೀರಗ್ಯಾಳ ಕಾರ್ಯಕ್ಕೆ ಪಾಲಿಕೆ ಆಯುಕ್ತೆ ಶುಭ ಬಿ. ಮೆಚ್ಚುಗೆ

ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ

ಬೆಳಗಾವಿ: ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 32 ನಗರ ಸೇವಕ ಸಂದೀಪ ಜೀರಗ್ಯಾಳ ಅವರು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ನಗರ ಸೇವಕರಿಗೆ ಪ್ರತಿ ವರ್ಷ 50 ರಿಂದ 60 ಲಕ್ಷ ವಾರ್ಡ್ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ನಗರ ಸೇವಕರು ವಾರ್ಡುಗಳ ವಿವಿಧ ಕಾಮಗಾರಿಗಳನ್ನು ಕೈಗೊಂಡು ಮಾದರಿ ವಾರ್ಡುಗಳಾಗಿ ಅಭಿವೃದ್ಧಿ ಪಡಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಬಿ ಅವರು ಕರೆ ನೀಡಿದರು . ಹನುಮಾನ ನಗರದ ವೃತ್ತದ ಬಳಿಯಲ್ಲಿ ಶನಿವಾರ (ಸೆ.06) ನಗರ ಸೇವಕರ ಅನುದಾನದಲ್ಲಿ ಖರಿಸಿದರ ಅಂದಾಜು 3 ಲಕ್ಷದ ವೆಚ್ಚದ ಗ್ರಾಸ್ ಕಟಿಂಗ್, ಗಿಡ ಕಟಾವು, ಪ್ರೆಷರ್ ವಾಶರ್ ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು. ಪ್ಲಾಸಿಟಿಕ್ ಮುಕ್ತ ವಾರ್ಡ್ ನಿರ್ಮಾಣಕ್ಕೆ ಇಲ್ಲಿನ ನಗರ ಸೇವಕರು ನಿರಂತರ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಇದಕ್ಕೆ ಬೆಂಬಲ ಕೊಟ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು. ವಾರ್ಡ್ ನಂಬರ್ 32 ನಗರ ಸೇವಕರು ಪರಿಸರ ಕಾಳಜಿ ವಹಿಸಿ ಕೆಲಸ ಮಾಡುವತ್ತ ನಗರ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರ ಸೇವಕರು ತಮ್ಮ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆಯಾದಲ್ಲಿ ಅಂತವುಗಳನ್ನು ಮಹಾನಗರ ಪಾಲಿಕೆಯ ಗಮನಕ್ಕೆ ತರಬೇಕು ಎಂದು ಪಾಲಿಕೆ ಆಯುಕ್ತೆ ಶುಭ. ಬಿ ಹೇಳಿದರು.

ಸ್ವಚ್ಛತೆಗೆ ಮೊದಲ ಆದ್ಯತೆ ಕೊಟ್ಟು ರಸ್ತೆ, ಚರಂಡಿಗಳ ಸ್ವಚ್ಛತೆ, ಹೆಚ್ಚುವರಿ ಗಿಡ ಕೊಂಬೆಗಳ ಕಟಾವು ಸೇರಿದಂತೆ ಇತರೆ ಉಪಯೋಗಕ್ಕೆ ಅಗತ್ಯ ಪರಿಕರಗಳನ್ನು ಸುಮಾರು ಮೂರು ಲಕ್ಷದ ಅನುದಾನದಲ್ಲಿ ಖರೀದಿಸಲಾಗಿದೆ ಎಂದು ವಾರ್ಡ್ ನಂಬರ್ 32 ನಗರ ಸೇವಕ ಸಂದೀಪ ಜೀರಗ್ಯಾಳ ಹೇಳಿದರು.

ನಗರ ಸೇವಕರು ತಮ್ಮ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಯಾವುದೇ ತೊಂದರೆಯಾಗದಂತೆ ವಾರ್ಡ್ ವ್ಯಾಪ್ತಿಯಲ್ಲಿ ನಿರಂತರ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಜನಸ್ನೇಹಿಯಾಗಬೇಕು ಎಂದು ಸಂದೀಪ ಜೀರಗ್ಯಾಳ ಹೇಳಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ, ಆರೋಗ್ಯ ನಿರೀಕ್ಷಕ ಸಂತೋಷ ಕಾಂಬಳೆ ಸೇರಿದಂತೆ ಮುಖಂಡರು, ಹಿರಿಯ ನಾಗರಿಕರು, ವಿವಿಧ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು

RELATED ARTICLES
- Advertisment -
Google search engine

Most Popular