Thursday, December 4, 2025
Google search engine

Homeಸ್ಥಳೀಯಗೃಹಿಣಿಯ ಕತ್ತು ಸೀಳಿ ಪರಾರಿಯಾಗಿದ್ದ ಹಂತಕ 2 ದಿನದ ಬಳಿಕ ಅಂದರ್

ಗೃಹಿಣಿಯ ಕತ್ತು ಸೀಳಿ ಪರಾರಿಯಾಗಿದ್ದ ಹಂತಕ 2 ದಿನದ ಬಳಿಕ ಅಂದರ್

ಚಿಕ್ಕಮಗಳೂರು: ಆಲ್ದೂರು ಸಮಿಪದ ಅರೆನೂರು ಗ್ರಾಮದಲ್ಲಿ ಮನೆಯಲ್ಲಿದ್ದ ಗೃಹಿಣಿಯ ಕತ್ತು ಸೀಳಿ ಕೊಂದು ಪರಾರಿಯಾಗಿದ್ದ ಹಂತಕನನ್ನು 2 ದಿನದ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜನಾರ್ದನ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮದ ತಂದೆ ಮನೆಯ ಹಿಂದೆ ಕೆಲಸ ಮಾಡುವಾಗ ಸಂಧ್ಯಾ (32) ಹತ್ಯೆ ನಡೆದಿತ್ತು. ಪೊಲೀಸರ ತನಿಖೆ ವೇಳೆ ಹತ್ಯೆ ಆರೋಪಿ ಆಕೆಯ ಅತ್ತೆಯ ಮಗನೇ ಎಂದು ತಿಳಿದು ಬಂದಿದೆ. ಇನ್ನೂ ಹಂತಕನ ದಾಳಿಯಿಂದ ರಕ್ತದ ಮಡುವಿನಲ್ಲಿದ್ದ ಸಂಧ್ಯಾ ಜೀವನ್ಮರಣದ ಹೋರಾಟದ ಮಧ್ಯೆ ಗೋಡೆ ಹಿಡಿದು ಏಳಲು ಪ್ರಯತ್ನಿಸಿದ್ದಳು. ಮನೆಯ ಗೋಡೆ ಮೇಲೆ ಆಕೆಯ ಹಸ್ತದ ಗುರುತು ಕೂಡ ಪತ್ತೆಯಾಗಿತ್ತು.

ಸಂಧ್ಯಾಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ನಾಲ್ಕು ವರ್ಷದಿಂದ ಗಂಡನಿಂದ ಬೇರಾಗಿ ತಂದೆ ಮನೆಯಲ್ಲಿ ವಾಸವಿದ್ದಳು. ಕೊಲೆಯಾಗುವ ನಾಲ್ಕು ದಿನಗಳ ಮುಂಚೆ ಸಂಧ್ಯಾ ನಾಪತ್ತೆ ಕೂಡ ಆಗಿದ್ದಳು. ಆಕೆ ತಂದೆ ಆಲ್ದೂರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ, ಕೊಲೆಯಾಗುವ 1 ದಿನದ ಮುಂಚೆ ಆಕೆ ಮನೆಗೆ ವಾಪಸ್ ಆಗಿದ್ದಳು. ಮನೆಗೆ ಹಿಂದಿರುಗಿದ ಮರುದಿನವೇ ಜನಾರ್ಧನ ಮನೆಗೆ ಬಂದು ಕತ್ತು ಸೀಳಿ ನಾಪತ್ತೆಯಾಗಿದ್ದ.

ಇದೀಗ ಆಲ್ದೂರು ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಡಿದ್ದಾರೆ. ಇಬ್ಬರ ನಡುವೆ ಮನಸ್ತಾಪವಾಗಿತ್ತು. ಅದಕ್ಕೆ ಜನಾರ್ಧನ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆಯಿಂದ ಕೊಲೆಗೆ ನಿಖರ ಕಾರಣ ಹೊರಬರಬೇಕಿದೆ.

RELATED ARTICLES
- Advertisment -
Google search engine

Most Popular