Monday, November 3, 2025
Google search engine

Homeರಾಜ್ಯಸುದ್ದಿಜಾಲ2028ಕ್ಕೆ ಸವದಿ ಸೋಲಿಸುವುದೇ ನನ್ನ ಗುರಿ: ಮಾಜಿ ಸಚಿವ ರಮೇಶ್ ಶಪಥ.

2028ಕ್ಕೆ ಸವದಿ ಸೋಲಿಸುವುದೇ ನನ್ನ ಗುರಿ: ಮಾಜಿ ಸಚಿವ ರಮೇಶ್ ಶಪಥ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ಅಥಣಿ ಸಹಕಾರ ಚುನಾವಣೆಯಲ್ಲಿ ಸಣ್ಣ ಮಗುವಿಗೆ ಹೊಟ್ಟೆ ನೋವು ಬಂದರೆ ಹೇಗೆ ಕಿರಚಾಡುತ್ತಾರೆ ಹಾಗೆ ಸವದಿಯ ನೋವಿನ ಮೇಲೆ ಕೈ ಇಟ್ಟಿದ್ದೇ‌ನೆ. 2028ಕ್ಕೆ ಲಕ್ಷ್ಮಣ ‌ಸವದಿಯನ್ನು ಸೋಲಿಸಿಯೇ ಸೋಲಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಪಥ ಮಾಡಿದರು.
ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿರಗೆ ಮಾತನಾಡಿದರು. ಅಥಣಿ ಸಹಕಾರ ಕ್ಷೇತ್ರದಲ್ಲಿ ಸೋಲು ಆಗುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು. 18 ಸಾವಿರ ಮತಗಳಿದ್ದು ಕೃಷ್ಣಾ ಸಹಕಾರ ಕ್ಷೇತ್ರದಲ್ಲಿ ಶಾಸಕ ಸವದಿ ಅವರು ಐದುವರೆ ಸಾವಿರ ಮತಗಳಿಗೆ ತಂದಿಟ್ಟಿದ್ದಾರೆ. ಅದರ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ರಮೇಶ್ ಕತ್ತಿ ಇವತ್ತಿಗೂ ನನ್ನ ಆತ್ಮೀಯ. ಅವನಿಗೂ ನನಗೂ ಯಾವುದೇ ವೈಷಮ್ಯ ಇಲ್ಲ. ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೇಜಾರ ಆಗಿದೆ. ಆದರೆ ರಮೇಶ್ ಕತ್ತಿ ಹುಚ್ಚ ಹಾಗೆ ಮಾತನಾಡಬಾರದೀತ್ತು. ನಾನು ಹುಕ್ಕೇರಿ ವಿದ್ಯುತ್ ಸಹಕಾರ ಕ್ಷೇತ್ರ ಚುನಾವಣೆ ಮಾಡಬೇಡಿ ಎಂದಿದ್ದೆ. ಆದರೆ ಚುನಾವಣೆ ಆಯಿತು. ನಾನು ವಿದೇಶ ಪ್ರವಾಸದಲ್ಲಿದೆ. ದಯವಿಟ್ಟು ರಮೇಶ ಕತ್ತಿ ಅವರು ಮಾತಿನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ರಾಜಕೀಯ ಜೀವನದಲ್ಲಿ ಸಾಕಷ್ಟು ಹೊಡೆತ ಬಿಳುತ್ತದೆ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ನವೆಂಬರ್ ಕ್ರಾಂತಿಯ ಬಗ್ಗೆ ನಮ್ಮ ಪಕ್ಷದವರು ಯಾಕೆ ಚರ್ಚೆ ಮಾಡುತ್ತಿದ್ದಾರೆ. ತಿಳಿಯುತ್ತಿಲ್ಲ. ಡಿ.ಕೆ.ಶಿವಕುಮಾರ ಅವರನ್ನಾದರೂ‌ ಸಿಎಂ ಮಾಡಲಿ ಅಥವಾ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ನಮಗೆ ಯಾಕೆ ಬೇಕು. ನಾವು ವಿರೋಧ ಪಕ್ಷ ಕೆಲಸ ಮಾಡಿಕೊಂಡು ಹೋದರೆ ಸಾಕು ಎಂದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಬಿಜೆಪಿಯಿಂದ ಉಚ್ಚಾಟಣೆಯಾದಾಗಿನಿಂದಲೂ ಬಿಜೆಪಿಗೆ ಮರಳಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಹೇಳಿದ್ದೆ. ವಿಜಯೇಂದ್ರ ಮುಂದುರೆಸಿದರೆ ಮಾತ್ರ ಬೇರೆ ಪಕ್ಷ ಕಟ್ಟುವುದಾಗಿ ಹೇಳಿದ್ದಾರೆ. ಯತ್ನಾಳ ಉಚ್ಚಾಟಣೆಯಾಗಿ 8 ತಿಂಗಳು ಕಳೆದಿದೆ. ಯತ್ನಾಳ ರಾಜ್ಯ ರಾಜಕಾರಣದಲ್ಲಿ ಮೇಲೆ ಬಂದಿದ್ದಾರೆ. ವಿಜಯೇಂದ್ರ ಎಷ್ಟು ಕೇಳಗೆ ಬಂದಿದ್ದಾನೆ ಎನ್ನುವುದನ್ನು ತುಲನೆ ಮಾಡಿ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಪಕ್ಷಕ್ಕೆ ಯಾರು ಅನಿವಾರ್ಯ ಅಲ್ಲ. ಯತ್ನಾಳ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಆದರೆ ಯತ್ನಾಳ ಅವರನ್ನು ಬಿಜೆಪಿ ಅವರನ್ನು ಕಳೆದುಕೊಳ್ಳಬಾರದು ಎಂದರು.
ನಮ್ಮದ್ದು ಯಡಿಯೂರಪ್ಪನ ವಿರುದ್ಧ ನಾವು ಎಂದಿಗೂ ಮಾತನಾಡಿಲ್ಲ. ವಿಜಯೇಂದ್ರನಿಂದಲೇ ಬಿಜೆಪಿ ಪಕ್ಷ ಹಾಳಾಗುತ್ತಿದೆ. ಇದು ನಮಗೂ ನೋವಿದೆ. ಅವರ ಬದಲಾವಣೆ ಮಾಡುವ ಹೋರಾಟದ ಬಗ್ಗೆ ಈಗ ಮಾಧ್ಯಮದ ಮುಂದೆ ಚರ್ಚೆ ಮಾಡುವುದಿಲ್ಲ ಎಂದರು.
ರೈತರು ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ‌ಮಾಡುವ ಕುರಿತು ‌ರೈತರು ನಡೆಸುತ್ತಿರುವ ಹೋರಾಟದ ಪರವಾಗಿ ನಾನು ಇದ್ದೇನೆ. ರೈತರಿಗೆ ನ್ಯಾಯ ಸಿಗಬೇಕು. ಸರಕಾರ ಆದಷ್ಟು ಬೇಗ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದರು.

RELATED ARTICLES
- Advertisment -
Google search engine

Most Popular