Wednesday, May 21, 2025
Google search engine

Homeಸ್ಥಳೀಯ೫ ಯೋಜನೆಗಳನ್ನು ಫಲಾನುಭವಿಗಳಿಗೆ ಸಿಗುವಂತೆ ಮಾಡುವುದೇ ನನ್ನ ಮೊದಲ ಕರ್ತವ್ಯ

೫ ಯೋಜನೆಗಳನ್ನು ಫಲಾನುಭವಿಗಳಿಗೆ ಸಿಗುವಂತೆ ಮಾಡುವುದೇ ನನ್ನ ಮೊದಲ ಕರ್ತವ್ಯ

ನಂಜನಗೂಡು : ಸರ್ಕಾರದ ೫ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡುವುದೇ ನನ್ನ ಮೊದಲ ಕರ್ತವ್ಯ ನಂತರದಲ್ಲಿ ಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಕಳಪೆ ಕಾಮಗಾರಿಗಳನ್ನು ಸರಿಪಡಿಸುವುದು ಎಂದು ಶಾಸಕ ದರ್ಶನ್ ದೃವನಾರಾಯಣ ಹೇಳಿದರು.ಅವರು ಪತ್ರಿಕ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತಾ ಈಗ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆ ನಾಮ್ಮ ಸರ್ಕಾರ ನೀಡಿರುವ ೫ ಗ್ಯಾರಂಟಿಗಳನ್ನು ಕ್ಷೇತ್ರದ ಅರ್ಹ ಎಲ್ಲ ಫಲಾನುಭವಿಗಳಿಗೂ ಸೇರುವಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ ಯಾವ ಫಲನುಭವಿ ಸಹ ನಮ್ಮ ಗ್ಯಾರಂಟಿಯಿಂದ ವಂಚಿತರಾಗಬಾರದು. ಕ್ಷೇತ್ರದಲ್ಲಿ ಈಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ನಾವು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಗಮನಿಸಿದೇನೆ ವಂಚಿತ ಪ್ರದೇಶಗಳಿಗೆ ಮೊದಲು ಮೂಲಭತ ಸೌಕರ್ಯಗಳನ್ನು ಒದಗಿಸಬೇಕು. ನಂತರದಲ್ಲಿ ಕ್ಷೇತ್ರದಲ್ಲಿ ನಡೆದಿರುವ ಕಳಪೆ ಕಾಮಗಾರಿಗಳನ್ನು ಸರಿಪಡಿಸಬೇಕು ಸಂಬಂಧಪಟ್ಟ
ಗೊತ್ತಿಗೆ ದಾರರನ್ನು ಕರೆಸಿ ರಸ್ತೆ ಚರಂಡಿ ಕಟ್ಟಡಗಳ ಗುಣಮಟ್ಟವನ್ನು ಪರಿಶೀಲಿಸಿ ಕಳಪೆಕಾಮಗಾರಿಗಳನ್ನು ಸರಿ ಮಾಡಬೇಕು. ನಾನು ಉಚ್ಚ ನ್ಯಾಯಾಲಯದಲ್ಲಿ ಅಬ್ಯಾಸ ಮಾಡಬೇಕಾದರೆ ವಿಧಾನ ಸೌಧವನ್ನು ದೂರದಿಂದ ನೋಡಿದೆ ಎಂದು ಒಳಗೆ ಹೋಗಿರಲ್ಲಿಲ ಮೊದಲ ಭಾರಿ ಒಳಗೆ ಹೋಗಬೇಕಾದರೆ ನನ್ನಗೆ ತಂದೆ ತಾಯಿ ಇಬ್ಬರೂ ಇರಲಿಲ್ಲ ತುಂಬಾ ಭಯವಾಗುತ್ತಿತ್ತು ಪ್ರಮಾಣವಚನ ಸ್ವೀಕರಿಸುವಾಗ ಕೈಯಲ್ಲೆಲ್ಲಾ ನಡಕ ಉಂಟಾಗಿತ್ತು ಎಂದು ಮೊದಲ ಬಾರಿಗೆ ವಿಧಾನಸೌಧಕ್ಕೆ ತೆರಳಿದ ಅನುಭವವನ್ನು ಹಂಚಿಕೊಂಡರು.ನಾನು ನಗರ ಸಭೆ ಹಿಂಭಾಗದಲ್ಲಿರುವ ಮಾರುಕಟ್ಟೆಗೆ ಬೇಟಿ ನೀಡಿದೆ ಅದು ಸಂಪೂರ್ಣವಾಗಿ ಆಳಾಗಿದೆ ಅದರ ಗುಣಮಟ್ಟ ತಿಳಿಯಲು ಅಧಿಕಾರಿಗಳಿಗೆ ಸೂಚನೆ ನೀಡಿದೇನೆ ಕಟ್ಟಡದ ತಳ ಭಾಗದಲ್ಲಿ ಮಳೆ ಬಂದರೆ ನೀರು ಹೋಗಲು ದಾರಿ ಇಲ್ಲ ಗೋಡೆಗಳು ಹಾಳಾಗಿದೆ ಮುಂದಿನ ದಿನಗಳಲ್ಲಿ ರಸ್ತೆ ಬದಿ ವ್ಯಾಪರಿಗಳ ಜೋತೆ ಮಾತಾನಾಡಿ ಅವರನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಮನವೊಲಿಸುತ್ತೇನೆ. ಇಂದಿನ ಯುವಕರು ಓದಿನ ಕಡೆ ಹೆಚ್ಚು ಗಮನ ಹರಿಸಬೇಕು ನಂತರದಲ್ಲಿ ರಾಜಕೀಯಕ್ಕೆ ಬರಬಹುದು ಅದರೆ ಯುವಕರು ರಾಜಕೀಯಕ್ಕೆ ಬರುವ ಅತುರದಲ್ಲಿ ಓದಿನ ಕಡೆ ಗಮನ ಹರಿಸುವುದಿಲ್ಲ ಶಿಕ್ಷಣ ಇಂದಿನ ಕಾಲದಲ್ಲಿ ಬಹಳ ಮುಖ್ಯವಾದುದು.ಹಲವು ಭಾಗಗಳಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಗಳು ಸರಿಯಾದ ಸಮಯದಲ್ಲಿ ಗ್ರಾಮಗಳಿಗೆ ತಲುಪುತ್ತಿಲ್ಲ ಹಾಗೂ ಬಸ್ಸುಗಳ ಸಂಖ್ಯೆ ತುಂಬಾ ಕಡಿಮೆ ಇದೆ ಕ್ಷೇತ್ರದ ಕೊನೆಯ ಭಾಗಗಳಿಗೆ ತಲುಪಲು ಆಗುತ್ತಿಲ್ಲ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ ಎಂಬ ದೂರು ನನಗೆ ಬಂದಿದೆ ನಾನು ಸದನದಲ್ಲಿ ಮಂತ್ರಿಗಳ ಜೊತೆ ಮಾತನಾಡಿ ಇದರ ಬಗ್ಗೆ ಗಮನಸೆಳೆಯುತ್ತೇನೆ ಮತ್ತು ನಂಜನಗೂಡಿಗೆ ಅಧಿಕ ಬಸ್ ಗಳನ್ನು ನೀಡುವಂತೆ ಒತ್ತಾಯ ಮಾಡುತ್ತೇನೆ ಅಲ್ಲಿಯವರೆಗೂ ನಮ್ಮ ಕೆಎಎಸ್ಆರ್ಟಿಸಿ ಸಿಬ್ಬಂದಿಗಳಿಗೆ ನೋಡಿಕೊಂಡು ಬಸ್ ಗಳನ್ನು ಬಿಡಬೇಕೆಂದು ಸೂಚನೆ ನೀಡುತ್ತೇನೆ.

ನನ್ನ ಕ್ಷೇತ್ರದಲ್ಲಿ ಅಧಿಕಾರಿಗಳು ಮೈ ಚಳಿ ಬಿಟ್ಟು ಕೆಲಸ ಅವರು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯುವುದಿಲ್ಲ ಅಧಿಕಾರಿಗಳು ಆಗಿಂದಾಗೆ ಗ್ರಾಮಗಳಿಗೆ ಭೇಟಿ ನೀಡಬೇಕು ಅಲ್ಲಿನ ಕುಂದು ಕೊರತೆಗಳನ್ನು ತಿಳಿದು ಪರಿಹಾರ ನೀಡಬೇಕು ಅಲ್ಲಿಯವರೆಗೂ ಸಮಸ್ಯೆಗಳು ಬಗೆಹರಿಯುವುದಿಲ್ಲ ಈಗಾಗಲೇ ತಿಳಿಸಿದಂತೆ ಕ್ಷೇತ್ರದಲ್ಲಿ ಲಂಚ ಗುಳಿತನ ನಿಲ್ಲಬೇಕು ಲಂಚ ನೀಡುವುದಾಗಲಿ ಪಡೆಯುವುದಾಗಲಿ ನನ್ನ ಗಮನಕ್ಕೆ ಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

RELATED ARTICLES
- Advertisment -
Google search engine

Most Popular