ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಪ್ರತಿ ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು ಅವುಗಳ ಅನುಷ್ಠಾನಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4.05 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ನಿರಂತರವಾಗಿ ಅಭಿವೃದ್ಧಿಯನ್ನೇ ಕಾಣದ ಗ್ರಾಮಗಳು ಇದ್ದು ನನ್ನ ಅವಧಿಯಲ್ಲಿ ಈಗಾಗಲೇ ಹೊಸಕೋಟೆ , ಮಾಯಿಗೌಡನಹಳ್ಳಿ, ಗ್ರಾಪಂ ಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮ ಗಾರಿಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಹಳಿಯೂರು ಕುಪ್ಪೆ ಸೇರಿದಂತೆ ಇನ್ನುಳಿದ ಗ್ರಾಪಂ ಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಲಿದೆ ಎಂದರು.
ತಾಪಂ ಮಾಜಿ ಸದಸ್ಯ ಹಾಡ್ಯ ಮಹದೇವಸ್ವಾಮಿ ಮಾತನಾಡಿ ಹಾಡ್ಯ ಗ್ರಾಮದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ನಿರಂತರವಾಗಿ ಅಪಘಾತಗಳಾಗುತ್ತಿದ್ದ ಹಾಡ್ಯ ಕ್ರಾಸ್ ಬಳಿ ಶಾಶ್ವತವಾದ ಕಾಮಗಾರಿ ನಡೆಯುತ್ತಿದ್ದು ಶಾಸಕರ ಇನ್ನುಳಿದ ಅವಧಿಯಲ್ಲೂ ಕೂಡ ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮದ ಅಭಿವೃದ್ಧಿಗೆ ಶಾಸಕರು ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೊಲ್ಲರ ಕೊಪ್ಪಲು ಗ್ರಾಮದಲ್ಲಿ ಶನೇಶ್ವರ ದೇವಸ್ಥಾನ ಅಭಿವೃದ್ಧಿ 6 ಲಕ್ಷ, ಪರಿಶಿಷ್ಟ ಪಂಗಡದ ಕನ್ನಂಬಾಡಮ್ಮ ದೇವಸ್ಥಾನ ಅಭಿವೃದ್ಧಿ 5 ಲಕ್ಷ,ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ 30 ಲಕ್ಷ ,ಹಾಡ್ಯ ಗೇಟ್ ಬಳಿ ರಸ್ತೆ ಸುರಕ್ಷತಾ ಕಾಮಗಾರಿ 233 ಲಕ್ಷ ,ಹಾಡ್ಯ ಬಸವೇಶ್ವರ ದೇವಸ್ಥಾನ ಮತ್ತು ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿ ಕಾಮಗಾರಿ 30 ಲಕ್ಷ,ಈಶಾನೇಶ್ವರ ಮಠ ಸಮುದಾಯ ಭವನ ನಿರ್ಮಾಣ 25 ಲಕ್ಷ, ಗ್ರಾಮ ಪರಿಮಿತಿಯಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ 80 ಲಕ್ಷ ರೂ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ನಟರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ಕಾವ್ಯಬೀರೇಗೌಡ, ಹಾಡ್ಯ ಮಹೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಸಿ.ಪ್ರಸಾದ್, ಮುಖಂಡರಾದ ಡೈರಿ ಮಾದು, ಸಯ್ಯದ್ ಸಲೀಂ, ಆಶಿ ಮಲ್ಲಿಕಾ,ಅಂಕನಹಳ್ಳಿ ಷಣ್ಮುಖ, ಬ್ರಿಜೇಶ್ ಪಟೇಲ್, ನಾಡಪ್ಪನಹಳ್ಳಿ ನಾಗೇಶ್, ಡೈರಿ ಮಾದು, ಹೊಸೂರು ರಮೇಶ್, ಸುಂಡರವಿ, ಕರ್ತಾಳ್ ಹರೀಶ್, ತ್ರಿತಂಬಕಸ್ವಾಮಿ, ನಾಗಣ್ಣ, ರಘು, ಚಂದ್ರಶೇಖರ್, ನಾಡಪ್ಪನಹಳ್ಳಿ ಅಶ್ವತ್, ಜವರಪ್ಪ, ಸಕ್ಕರೆ ಗೌಡಯ್ಯ, ರವಿ, ಚೌಡನಾಯಕ, ಎಇಇ ಸುಮಿತಾ, ಆರ್.ಐ.ಚಿದನಂದ್, ಗ್ರಾಮಾಧಿಕಾರಿ ಸಯ್ಯದ್ ನೂರಲ್ಲ ಸೇರಿದಂತೆ ಮತ್ತಿತರರು ಹಾಜರಿದ್ದರು.



