Wednesday, May 21, 2025
Google search engine

Homeಸ್ಥಳೀಯನನ್ನ ತಂದೆ-ತಾಯಿಯೇ ನನಗೆ ಆದರ್ಶ: ದರ್ಶನ್ ಧ್ರುವನಾರಾಯಣ್

ನನ್ನ ತಂದೆ-ತಾಯಿಯೇ ನನಗೆ ಆದರ್ಶ: ದರ್ಶನ್ ಧ್ರುವನಾರಾಯಣ್


ನಂಜನಗೂಡು: ನನ್ನ ತಂದೆಯವರಾದ ಧ್ರುವನಾರಾಯಣ್ ರವರ ಕೊಡುಗೆ ಈ ಭಾಗಕ್ಕೆ ಅಪಾರವಾಗಿದೆ ಅವರ ಸೇವೆಯನ್ನು ಸ್ಮರಿಸಿಕೊಂಡು ಅವರು ನನಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕಲ್ಪಿಸಿಕೊಟ್ಟಿದ್ದಾರೆ. ಅದೇರೀತಿ ನನ್ನ ತಾಯಿಯವರು ಹಾಕಿಕೊಟ್ಟ ಅಡಿಪಾಯ ಮತ್ತು ಮಾರ್ಗದರ್ಶನ ನನಗೆ ಇಲ್ಲಿಯವರೆವಿಗೂ ಬರುವಂತಾಗಿದ್ದು ಎಂದು ಶಾಸಕ ದರ್ಶನ್ ದೃವನಾರಾಯಣ ಹೇಳಿದರು.
ನನ್ನ ತಂದೆ-ತಾಯಿ ಯವರು ನನಗೆ ನೀಡಿರುವ ಸಲಹೆ-ಸೂಚನೆಗಳು ನನ್ನ ಜೀವನದಲ್ಲಿ ಅತ್ಯಮೂಲ್ಯವಾದ ಆದರ್ಶಗಳಾಗಿವೆ ಎಂದು ಅಗಲಿರುವ ತಂದೆ-ತಾಯಿಯವರುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.ವಿದ್ಯಾರ್ಥಿಗಳು ತಂದೆ-ತಾಯಿಂದಿರಿಗೆ ಗೌರವನ್ನು ಕೊಡುವುದರ ಜೊತೆಗೆ ಅವರ ಮಾರ್ಗದರ್ಶನವನ್ನು ಪಡೆದು ಅದರಂತೆ ಕಾರ್ಯ ಪ್ರೌವೃತ್ತರಾಗಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಅವರು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೨-೨೩ ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತಮನಾಡುತ್ತಿದ್ದರು.
ವಿದ್ಯಾರ್ಥಿಗಳು ಸಮಯವನ್ನು ಪಾಲಿಸಬೇಕು, ಕಾಲೇಜಿನಲ್ಲಿ ತಮ್ಮ ಹಾಜರಾತಿಯನ್ನು ತಪ್ಪದೇ ಪಾಲಿಸಬೇಕು, ಕಾಲೇಜಿನಲ್ಲಿರುವ ಉತ್ತಮವಾದ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಂಡು ಓದಿ ಉತ್ತಮ ಜ್ಞಾನಾರ್ಜನೆ ಬಳಸಿಕೊಳ್ಳಿ ಜೊತೆಗೆ ಉತ್ತಮವಾದ ಸ್ನೇಹ ಮನೋಭಾವನೆಯನ್ನು ಬೆಳೆಸಿಕೊಂಡು ಮುಂದಿನ ದಿನಗಳಲ್ಲಿ ತಾವು ಕೂಡ ಜನಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ‘ಬಿ++’ ಗ್ರೇಡ್ ಮಾನ್ಯತೆ ಪಡೆದಿದ್ದು ಮುಂದಿನ ದಿನಗಳಲ್ಲಿ ‘ಎ’ ಗ್ರೇಡ್ ಪಡೆಯಬೇಕು ಎಂದ ಅವರು ಈ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದರ ಬಗ್ಗೆ ಇಲ್ಲಿನ ಪ್ರಾಚಾರ್ಯರು ನನಗೆ ತಿಳಿಸಿದ್ದು, ಕ್ರೀಡೆಗಳಿಂದ ಪ್ರತಿಯೊಬ್ಬರು ಉತ್ತಮವಾದ ಆರೋಗ್ಯ ಮತ್ತು ಮನಃಶಾಂತಿಯನ್ನು ಪಡೆಯುವುದರ ಜೊತೆಗೆ ವಿದ್ಯಾಭ್ಯಾಸದಲ್ಲೂ ಅನುಕೂಲಕರ ವಾತಾವರಣ ಉಂಟಾಗುತ್ತದೆ ಎಂದರು. ನನಗೆ ಪ್ರತಿದಿನ ವಿದ್ಯಾರ್ಥಿಗಳಿಂದ ಕರೆಗಳು ಬರುತ್ತಿದ್ದು ಮುಖ್ಯವಾಗಿ ಬಸ್‌ಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ದೂರುಗಳಿವೆ ಶೀಘ್ರದಲ್ಲೇ ನಂಜನಗೂಡಿಗೆ ೧೦೦ ಬಸ್‌ಗಳನ್ನು ಒದಗಿಸಿಕೊಡಲು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿದ್ದು, ವಿದ್ಯಾರ್ಥಿಗಳ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ ಎಂದರು.
ಸಮಾರಂಭ ಪ್ರಾರಂಭವಾಗುವುದಕ್ಕೂ ಮೊದಲು ಶಾಸಕರು ನೂತನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿದ್ದು ಕಾಲೇಜಿನ ಎಲ್ಲಾ ಕೊಠಡಿಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಸಮಾರಂಭದಲ್ಲಿ ಪ್ರಾಂಶುಪಾಲರಾದ ಪ್ರೊ.ವಿ.ರೇಣುಕಾ ಬಾಯಿ, ಚಲನಚಿತ್ರ ಹಿನ್ನಲೆಗಾಯಕರಾದ ನಿಶ್ಚಯ್ ಜೈನ್, ಭಾಗ್ಯಶ್ರೀ ಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಮಹದೇವಸ್ವಾಮಿ, ಪ್ರೊ ಮಂಜು, ಡಾ ಉಷಾ, ಡಾ.ಮಹದೇವಪ್ರಸಾದ್, ಪ್ರೊ.ಈಶಕುಮಾರ್, ಪ್ರೊ. ಶ್ರೀಧರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರುಗಳಾದ ದೊರೆಸ್ವಾಮಿ, ನಗರಸಭಾ ಸದಸ್ಯರಾದ ಸ್ವಾಮಿ, ಮಹೇಶ್, ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular