Monday, September 22, 2025
Google search engine

Homeಸ್ಥಳೀಯಮೈಸೂರು ದಸರಾ: ಸಂಸ್ಕೃತಿ, ಏಕತೆ ಮತ್ತು ಸರ್ವಜನರ ಉತ್ಸವ: ಬಾನು ಮುಷ್ತಾಕ್

ಮೈಸೂರು ದಸರಾ: ಸಂಸ್ಕೃತಿ, ಏಕತೆ ಮತ್ತು ಸರ್ವಜನರ ಉತ್ಸವ: ಬಾನು ಮುಷ್ತಾಕ್

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025ಕ್ಕೆ ಇಂದು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಿದರು. ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗಿ ಚಾಲನೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮೇಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾನು ಮುಷ್ತಾಕ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಗೌರವ ಸಲ್ಲಿಸಿದರು. ಸಿಎಂ ಹಾಗೂ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಾವಿರಾರು ಜನ ಸಾಕ್ಷಿಯಾದರು.

ಬಳಿಕ ಭಾಷಣದಲ್ಲಿ ಮಾತನಾಡಿದ ಅವರು, ಚಾಮುಂಡಿ ಸನ್ನಿಧಿ ಬಳಿ ಕರೆದೊಯ್ಯುವುದಾಗಿ ನನ್ನ ಸ್ನೇಹಿತೆ ಒಬ್ಬರು ಹೇಳಿದ್ದರು.ಈಗ ಸರ್ಕಾರ ನನ್ನನ್ನು ದಸರಾ ಉದ್ಘಾಟನೆಗೆ ಅಹ್ವಾನಿಸಿದದ ಬಳಿಕ ಬೇಕಾದಷ್ಟು ಏರುಪೇರು ಹಾಗೂ ಸನ್ನಿವೇಶಗಳು ನಡೆದರೂ ಕೂಡ, ತಾಯಿ ಚಾಮುಂಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ನಾನು ಈಗ ತಾನೆ ಹಾಗೆ ಸನ್ನಿಧಿಯಿಂದ ನಿಮ್ಮೆಲ್ಲರಿಗೆ ಬಂದು ನಿಂತಿದ್ದೇನೆ. ದಸರಾ ಅಂದರೆ ಇದು ಕೇವಲ ಹಬ್ಬ ಮಾತ್ರ ಅಲ್ಲ ಇದು ನಾಡಿನ ಒಂದು ನಾಡಿಮಿಡಿತ ಸಂಸ್ಕೃತಿಯ ಉತ್ಸವ ಎಲ್ಲರನ್ನೂ ಒಳಗೊಳ್ಳುವಂತಹ ಗಳಿಗೆ ಸಮನ್ವಯದ ಮೇಳವಾಗಿದೆ. ಹೆಸರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು ಕನ್ನಡ ಭಾಷೆಯ ಹೃದಯದ ಆಳದ ಸ್ಪಂದನದ ವರೆಗೆ ಈ ಹಬ್ಬವು ನಮಗೆ ನೆನಪಿಸುತ್ತದೆ.

ದಸರಾ: ಸಂಸ್ಕೃತಿಯ ನಾಡಿಮಿಡಿತ

“ದಸರಾ ಹಬ್ಬ ಕೇವಲ ಆಚರಣೆಯ ಹಬ್ಬವಲ್ಲ. ಇದು ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವ. ಇದು ಎಲ್ಲರನ್ನೂ ಒಳಗೊಂಡಿರುವ ಸಮನ್ವಯದ ಮೇಳ. ಮೈಸೂರು ಅರಸರ ಸಂಸ್ಕೃತಿಯ ಪರಂಪರೆ, ಕನ್ನಡ ಭಾಷೆಯ ಹೃದಯದ ಸ್ಪಂದನೆ – ಇವುಗಳೆಲ್ಲ ಈ ಹಬ್ಬದ ಅಡಿಪಾಯ,” ಎಂದು ಅವರು ಹೇಳಿದರು.

ಭಿನ್ನತೆಯಲ್ಲೇ ಏಕತೆ

ಬಾನು ಮುಷ್ತಾಕ್ ಅವರು ದಸರಾ ಹಬ್ಬದ ಒಳನೋಟವನ್ನು ತಮ್ಮ ನುಡಿಗಳಲ್ಲಿ ಹೀಗೆ ವಿವರಿಸಿದರು:
“ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ದಸರಾ ನಮ್ಮ ಸಮಗ್ರ ಸಂಸ್ಕೃತಿಯ ಪ್ರತೀಕವಾಗಿದೆ.” ಅವರು ವಿಶೇಷವಾಗಿ ಮೈಸೂರಿನ ಉರ್ದು ಭಾಷಿಕರ ಉತ್ಸವಪಾಲನೆಯನ್ನು ಉಲ್ಲೇಖಿಸಿ, “ನವರಾತ್ರಿಯ ಹತ್ತು ದಿನಗಳಿಗೂ ಮೈಸೂರಿನ ಉರ್ದು ಸಮುದಾಯ ತಮ್ಮದೇ ಆದ ರೀತಿಯಲ್ಲಿ ಉತ್ಸವ ಆಚರಿಸುತ್ತಾರೆ. ಅವರು ವಿಜಯದಶಮಿಗೆ ‘ಸಿಲಿಂಗನ್’ ಅಂತ ಹೆಸರಿಟ್ಟಿದ್ದಾರೆ. ಇದು ಅವರ ಸಾಹಿತ್ಯ, ಸಂಸ್ಕೃತಿಯ ಭಾಗವಾಗಿದೆ,” ಎಂದು ಹೇಳಿದರು.

RELATED ARTICLES
- Advertisment -
Google search engine

Most Popular