ಮೈಸೂರು: ಇಂದು ಮೈಸೂರಿನಲ್ಲಿ ವಿಜಯದಶಮಿ ಸಂಭ್ರಮ ಕಳೆಕಟ್ಟಿದೆ. ಜಂಬೂಸವಾರಿ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಿದ್ದಾರೆ. ಇದೇ ಸಂದರ್ಭ ವ್ಯಕ್ತಿಯೊಬ್ಬ ನಕಲಿ ಪಾಸ್ ಪಡೆದು ಜಂಬೂ ಸವಾರಿ ನೋಡಲು ಬಂದು ಪೊಲೀಸರ ಕೈಯಲ್ಲಿ ತಗಲಾಕಿಕೊಂಡಿದ್ದಾನೆ.
ವ್ಯಕ್ತಿ ನಕಲಿ ಪಾಸ್ ತೋರಿಸಿ ಜಂಬೂ ಸವಾರಿ ವೀಕ್ಷಿಸಲು ಆವರಣಕ್ಕೆ ನುಗ್ಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಅದು ನಕಲಿ ಪಾಸ್ ಎಂಬುದನ್ನು ಪತ್ತೆ ಹಚ್ಚಿದ ತಕ್ಷಣ ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನನ್ನು ವಿಚಾರಣೆ ನಡೆಸಲಿದ್ದಾರೆ.