ಮೈಸೂರು: ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಭಾಷ್ಯಂ ಸ್ವಾಮೀಜಿಗಳು ಎಂ ಲಕ್ಷ್ಮಣ ರವರನ್ನು ಆತ್ಮೀಯವಾಗಿ ಸ್ವಾಗತ ಕೋರಿ,ದೇವಾಲಯದಲ್ಲಿದ್ದ ಭಕ್ತಾದಿಗಳ ಬಳಿ ಎಂ ಲಕ್ಷ್ಮಣ ರವರಿಗೆ ಬೆಂಬಲಿಸುವಂತೆ ಕೇಳಿಕೊಂಡರು.
ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಯೋಗನರಸಿಂಹ ಸ್ವಾಮಿಯ ದರ್ಶನ ಪಡೆದುಕೊಂಡರು, ಲಕ್ಷ್ಮಣ್ ರವರಿಗೆ ದೇವಸ್ಥಾನ ಆಡಳಿತ ಮಂಡಳಿಯ ವತಿಯಿಂದ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸಾಂಪ್ರದಾಯಕವಾಗಿ ನಾದ ಸ್ವರದ ಮೂಲಕ ಸ್ವಾಗತಿಸಿದರು. ಸ್ವಾಮೀಜಿಗಳು ನೀವು ಈ ಬಾರಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಆಶೀರ್ವಾದ ಮಾಡಿ ಭಕ್ತಾದಿ ಗಳ ಬಳಿ ಬೆಂಬಲಿಸುವಂತೆ ಮನವಿ ಮಾಡಿಕೊಂಡು ಎಂ.ಲಕ್ಷ್ಮಣ ರವರಿಗೆ ಸಾಥ್ ನೀಡಿದ್ದರು.
ನಗರಾಧ್ಯಕ್ಷ ಆರ್ ಮೂರ್ತಿ ಡಿಸಿಸಿ ಸದಸ್ಯರು ಸಿ.ಎಸ್ ರಘು ಡಿಸಿಸಿ ವಕ್ತಾರ ಮಹೇಶ್ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ನಾಗೇಶ್,ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.