Monday, November 24, 2025
Google search engine

Homeಸ್ಥಳೀಯಮೈಸೂರು ಅಪ್ರಾಪ್ತ ಬಾಲಕಿ ಅತ್ಯಾಚಾರ ಮತ್ತು ಕೊಲೆ ಕೇಸ್: ಸಿಸಿ ಕ್ಯಾಮೆರಾದಲ್ಲಿ ಶಂಕಿತ ಆರೋಪಿ ಸೆರೆ

ಮೈಸೂರು ಅಪ್ರಾಪ್ತ ಬಾಲಕಿ ಅತ್ಯಾಚಾರ ಮತ್ತು ಕೊಲೆ ಕೇಸ್: ಸಿಸಿ ಕ್ಯಾಮೆರಾದಲ್ಲಿ ಶಂಕಿತ ಆರೋಪಿ ಸೆರೆ

ಮೈಸೂರು : ಮೈಸೂರಲ್ಲಿ ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್ ನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆರೋಪಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪ್ರಾಪ್ತ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್ ನ ಶಂಕಿತ ಕೊಲೆ ಆರೋಪಿಯ ಸಿಸಿಟಿವಿ ಪೋಟೋ ಲಭ್ಯ‌ವಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ

ರೆಡ್ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿರುವ ಶಂಕಿತ ಆರೋಪಿ ಒಬ್ಬನೇ ರೋಡ್ ನಲ್ಲಿ ಕೃತ್ಯವೆಸಗಿ ಹೋಗಿದ್ದಾನೆ. ಕಾಲಿನಲ್ಲಿ ಚಪ್ಪಲಿ ಇಲ್ಲದೆ ನಡೆದುಕೊಂಡೇ ಬಂದಿರುವ ಆರೋಪಿಯ ಫೋಟೋ ಬೆನ್ನತ್ತಿ ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನಾ ಸ್ಥಳದಿಂದ ನೂರು ಮೀಟರ್ ದೂರದಲ್ಲಿರುವ ಹಾರ್ಡಿಂಗ್ ಸರ್ಕಲ್ ಬಳಿಯ ಸಿಸಿ ಕ್ಯಾಮೆರಾದಲ್ಲಿ ಆತನ ದೃಶ್ಯ ಸೆರೆಯಾಗಿದೆ. ಆರೋಪಿ ಸೆರೆಗೆ ಮೂರು ತಂಡ ರಚಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕೃತ್ಯ ನಡೆದ ಸ್ಥಳದ ಸುತ್ತಲೂ ಸೇರಿದಂತೆ ಕೊಲೆ ಆರೋಪಿ ಓಡಾಡಿರುವ ಸ್ಥಳದ ದೃಶ್ಯಗಳ ಸಿಸಿಟಿವಿ ಫುಟೇಜ್ ಕಲೆ ಹಾಕುತ್ತಿರುವ ಪೊಲೀಸರು ಅನುಮಾನ ಬಂದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಹಕ್ಕಿಪಿಕ್ಕಿ ಜನಾಂಗದ ಮಗು..!: ಇನ್ನು,9 ವರ್ಷದ ಬಾಲಕಿ ಮೇಲೆ ರೇಪ್ ಅಂಡ್ ಮರ್ಡರ್ ಆಗಿರೋ ಶಂಕೆ ವ್ಯಕ್ತವಾಗಿದೆ. ದೇಹದ ಮೇಲೆ ಒಂದಿಷ್ಟು ಬಟ್ಟೆಯ ಇಲ್ಲದೇ ಬಿದ್ದಿದ್ದ ಶವವನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದಾರೆ.

ದಸರಾ ವೇಳೆ ಊರಿಂದ ಊರಿಗೆ ಬಂದಿರುವ ಹಕ್ಕಿಪಿಕ್ಕಿ ಜನಾಂಗದ ಮಗು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಲೂನ್ ವ್ಯಾಪಾರಕ್ಕಾಗಿ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳ ಇಟ್ಟಿಗೆ ಗೂಡಲ್ಲಿ ನೆಲೆಸಿದ್ದರು.ಎಲ್ಲರು ಗುಲ್ಬರ್ಗದಿಂದ ಮೈಸೂರಿಗೆ ಬಂದಿದ್ದರು ಎನ್ನಲಾಗಿದೆ.

ಮೈಸೂರಿನ ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದ ಬಳಿ ನಿನ್ನೆ ಕುಟುಂಬಗಳು ವಾಸ್ತವ್ಯ ಹೂಡಿದ್ದರು.ಒಂದೇ ಕುಟುಂಬದ 8 ಜನರು ಒಟ್ಟಿಗೆ ಮಲಗಿದ್ದರು‌. ಮುಂಜಾನೆ 4 ಗಂಟೆಯಲ್ಲಿ ಮಳೆ ಬಂದಾಗ ಎಚ್ಚವಾಗಿದ್ದಾರೆ.ಆಗ ಪಕ್ಕದಲ್ಲಿ ಮಗು ಇಲ್ಲದ್ದನ್ನು ಗಮನಿಸಿ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.ಸದ್ಯ 50 ಕುಟುಂಬಗಳ ಸದಸ್ಯರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ನಜರ್ ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular