Thursday, May 22, 2025
Google search engine

Homeಸ್ಥಳೀಯಮೈಸೂರು: ಬನಶಂಕರಿ ಬೊಂಬೆ ಮನೆಯಲ್ಲಿ ಜಾನಪದ ಗೀತೆಗಳ ಗಾಯನ

ಮೈಸೂರು: ಬನಶಂಕರಿ ಬೊಂಬೆ ಮನೆಯಲ್ಲಿ ಜಾನಪದ ಗೀತೆಗಳ ಗಾಯನ

ಮೈಸೂರು: ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ಬನಶಂಕರಿ ಬೊಂಬೆ ಮನೆಯಲ್ಲಿ ಕ್ರಿಯಾ ಜಾನಪದ ಮಹಿಳಾ ತಂಡ ದಿಂದ ಸುಶ್ರಾವ್ಯವಾಗಿ ಜಾನಪದ ಗೀತೆಗಳನ್ನು ಹಾಡಿ ಎಲ್ಲರನ್ನೂ ಒಂದು ಗಂಟೆಗಳ ಕಾಲ ಮಂತ್ರ ಮುಗ್ದರನ್ನಾಗಿ ಮಾಡಿದರು.

ಸಿನಿಮಾ ಗೀತೆಗಳೇ ತುಂಬಿ‌ ತುಳುಕುವ ಈ ಸಮಯದಲ್ಲಿ ಜಾನಪದಗಳನ್ನು ಹಾಡಿ ಜಾನಪದದ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ರಿಯಾ ಜಾನಪದ ಮಹಿಳಾ ತಂಡದ ಶ್ರೀಮತಿ ಲಕ್ಷ್ಮೀ ಸುದರ್ಶನ್, ಜಾನಪದ ಗೀತೆಗಳು ನಮ್ಮ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಸರಳವಾಗಿ ಹೇಳುವ ವಿಧಾನವಾಗಿದೆ, ಸಂಗೀತ ಎಲ್ಲರನ್ನೂ ಆಕರ್ಷಿಸುತ್ತದೆ ಅಂತಹ ಸಂಗೀತದಲ್ಲಿ ಜಾನಪದದ ಮೂಲಕ ನಮ್ಮ ಪರಂಪರೆ ಪರಿಚಯಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಕ್ರಿಯಾ ಜಾನಪದ ಮಹಿಳಾ ತಂಡದ ಈ ಜಾನಪದ ಸೇವೆಯನ್ನು ಗುರುತಿಸಿ ಬನಶಂಕರಿ ಬೊಂಬೆ ಮನೆಯಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಬನಶಂಕರಿ ಬೊಂಬೆ ಮನೆಯ ಪೂಜಾ ಮಾತನಾಡಿ ನಮ್ಮ ಬನಶಂಕರಿ ಬೊಂಬೆ ಮನೆಯನ್ನು ಒಂದು ತಾಸು ಬೇರೆಯದೇ ಲೋಕಕ್ಕೆ ಕರೆದು ಹೋದರಿ, ಜಾನಪದದ ಮೂಲಕ ನಮ್ಮೆಲ್ಲರನ್ನೂ ನಮ್ಮ ಮೂಲ ಗಾಯನಕ್ಕೆ ಕರೆದೊಯ್ದು ನಮ್ಮ ಇತಿಹಾಸ ಪುರುಷರು, ಪವಾಡ ಪುರುಷರು, ದೇವರ ವಿವರಣೆ ನೀಡಿದಿರಿ ತಮಗೆ ಧನ್ಯವಾದಗಳು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಕ್ರಿಯಾ ಜಾನಪದ ಮಹಿಳಾ ತಂಡದ ಶ್ರೀಮತಿ ಸುಮಾ ಪ್ರಶಾಂತ್, ಲಕ್ಷ್ಮೀ ಸುದರ್ಶನ್,  ನೈಪುಣ್ಯ ಸ್ಕಂದನ್, ಸರಳ ನಟರಾಜನ್, ಶೃತಿ, ತೇಜಶ್ರೀ ಸುರೇಶ್, ಅಂಜನ,  ಬನಶಂಕರಿ ಬೊಂಬೆ ಮನೆಯ ಪೂಜಾ, ಸರಸ್ವತಿ, ಪೃಥು ಪಿ ಅದ್ವೈತ್, ಪುನೀತ್, ಶುಭಾ ಎನ್, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ರಾದ ಗಣೇಶ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular