Wednesday, May 20, 2026
Google search engine

Homeಕ್ಯಾಂಪಸ್ ಕಲರವಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್

ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್

ಮೈಸೂರು: ರಾಜ್ಯದ ಅತಿದೊಡ್ಡ ಅಂತರ್-ವಿಶ್ವವಿದ್ಯಾಲಯ ಪತ್ರಿಕೋದ್ಯಮ ಉತ್ಸವಗಳಲ್ಲಿ ಒಂದೆಂದು ವಿವರಿಸಲಾದ ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಇಂಪ್ರೆಷನ್ 2026 ಮಾಧ್ಯಮಹಬ್ಬದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಉತ್ಸವದಲ್ಲಿ ರಾಜ್ಯಾದ್ಯಂತ ಸುಮಾರು 15 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ 300 ಕ್ಕೂ ಹೆಚ್ಚು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಂಗಳೂರು ಮತ್ತು ತುಮಕೂರು ಸೇರಿದಂತೆ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಚರ್ಚಾಸ್ಪರ್ಧೆಯಲ್ಲಿ ಬಸವರಾಜ್ ಬಿಂಗಿ ಮತ್ತು ಹಿತೇಶ್ ಪ್ರಥಮ ಸ್ಥಾನ, ರೇಡಿಯೋ ಜಾಕಿ ರೂಪ ದಿತ್ವೀಯ ಸ್ಥಾನ, ಫೋಟೋಗ್ರಫಿ ಹಿತೇಶ್ ಮತ್ತು ರಕ್ಷಿತಾ ಪ್ರಥಮ ಸ್ಥಾನ, ಪುಟ್ಟಕಥೆ ಮತ್ತು ಪಿ.ಟಿ.ಸಿ ಯಲ್ಲಿ ಇಂಚರ, ಗುಂಪು ಸ್ಪರ್ಧೆ ಮ್ಯಾಡ್ ಆಡ್ ನಲ್ಲಿ ಸ್ಪಂದನಾ, ರಮೇಶ್,ಶಶಿ, ರಾಹುಲ್,ಚರಣ್ ಪ್ರಥಮ ಸ್ಥಾನ ಪಡೆದು ಒಟ್ಟಾರೆಯಾಗಿ ಮೈಸೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಸಂಯೋಜಕ ಡಾ.ಸಂಜಯ್, ಸಂಶೋಧಕರಾದ ಅಭಿಷೇಕ್ ಪಾಳ್ಯಗಾರ್ ರನ್ನು ವಿಭಾಗದ ಮುಖ್ಯಸ್ಥ ಪ್ರೊ.ಎನ್.ಮಮತ, ಪ್ರಾಧ್ಯಾಪಕರಾದ ಪ್ರೊ.ಎಂ.ಎಸ್.ಸಪ್ನ ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular