Tuesday, November 18, 2025
Google search engine

Homeಅಪರಾಧಬೆಂಗಳೂರಿನಲ್ಲಿ ಟೆಕ್ಕಿ ನಿಗೂಢ ನಾಪತ್ತೆ: ಹುಡುಕಿಕೊಡುವಂತೆ ಪೊಲೀಸ್ ಆಯುಕ್ತರಿಗೆ ಪತ್ನಿ ಮನವಿ

ಬೆಂಗಳೂರಿನಲ್ಲಿ ಟೆಕ್ಕಿ ನಿಗೂಢ ನಾಪತ್ತೆ: ಹುಡುಕಿಕೊಡುವಂತೆ ಪೊಲೀಸ್ ಆಯುಕ್ತರಿಗೆ ಪತ್ನಿ ಮನವಿ

ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್​ನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ವಿಪಿನ್ ಗುಪ್ತಾ (37) ಕಾಣೆಯಾಗಿದ್ದಾರೆ.

ಕೈಯಲ್ಲಿ ಟಿ ಶರ್ಟ್​ ಹಿಡಿದು ತನ್ನ ಕವಾಸಕಿ ಬೈಕ್​ ತೆಗೆದುಕೊಂಡು ಮನೆ ಬಿಟ್ಟಿದ್ದ ಪತಿ ಎಂಟು ದಿನ ಕಳೆದರೂ ಮನೆಗೆ ಬಂದಿಲ್ಲ, ಹುಡುಕಿಕೊಡಿ ಎಂದು ವಿಪಿನ್ ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ಎಕ್ಸ್​ ಖಾತೆ ಮೂಲಕ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

ಇನ್ನು ಮನೆ ಬಿಟ್ಟ ಕೆಲವೇ ನಿಮಿಷಗಳಲ್ಲಿ ಟೆಕ್ಕಿ 1 ಲಕ್ಷದ 80 ಸಾವಿರ ಹಣ ಡ್ರಾ ಮಾಡಿ ಕೊಂಡಿದ್ದು ಯಾರಾದರೂ ಬ್ಲಾಕ್ ಮೇಲ್ ಮಾಡಿ ಹಣ ಪಡೆದು ಕಿಡ್ನಾಪ್ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ಪತ್ನಿ, ಮಕ್ಕಳ ಜೊತೆ ವಾಸವಿದ್ದ ವಿಪಿನ್ ಲಕ್ನೋ ಮೂಲದವರು. ಕಳೆದ 8 ದಿನಗಳ ಹಿಂದೆ ಅಂದರೆ ಇದೇ ತಿಂಗಳ 04 ರಂದು ಮಧ್ಯಾಹ್ನ 12:44ಕ್ಕೆ ಏಕಾಏಕಿ ಪತ್ನಿಗೂ ಒಂದು ಮಾತು ತಿಳಿಸದೆ ಕೈಯಲ್ಲಿ ಟಿ ಶರ್ಟ್ ಹಿಡಿದು ಮನೆಯಿಂದ ಹೊರಗೆ ಹೆಜ್ಜೆ ಹಾಕಿದ ವಿಪಿನ್ ಬಳಿಕ ತನ್ನ ಕವಾಸಕಿ ಬೈಕ್ ತೆಗೆದುಕೊಂಡಿ ಆಚೆ ಹೋಗಿದ್ದರು. ನಿನ್ನೆ ಬರುತ್ತಾರೆ ಎಂದು ಎಷ್ಟೋ ಕಾದರೂ ಪತಿ ಹಿಂದಿರುಗಿಲ್ಲ. ಅಲ್ಲದೆ ವಿಪಿನ್ ಮನೆ ಬಿಟ್ಟ ಕೆಲವೇ ನಿಮಿಷಗಳಲ್ಲಿ 1 ಲಕ್ಷ 80 ಸಾವಿರ ಹಣ ಡ್ರಾ ಆಗಿದೆ. ಆ ಬಳಿಕ ಟೆಕ್ಕಿ ವಿಪಿನ್ ಮೊಬೈಲ್ ಸ್ವಿಚ್ ಆಫ್ ಆಗಿದೆ.

ವಿಪಿನ್ ಕಳೆದ ಎಂಟು ದಿನಗಳಿಂದ ಮನೆಗೆ ಬಂದಿಲ್ಲ. ಇದರಿಂದ ಪತ್ನಿ ಹಾಗೂ ಇಬ್ಬರು ಮಕ್ಕಳು ಕಂಗಾಲಾಗಿದ್ದಾರೆ. ಕಾಣೆಯಾದ ಪತಿ ಹುಡುಕಿಕೊಡುವಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದು ದೂರು ನೀಡಿದರೂ ಪೊಲೀಸರು ಬೇಜವಾಬ್ದಾರಿ ತೋರಿಸಿದ್ದಾರೆ. ಪತಿ ಕಾಣೆಯಾಗಿ 8 ದಿನಗಳೆದರೂ ಪೊಲೀಸರು ಯಾವುದೇ ಹುಡುಕುವ ಪ್ರಯತ್ನ ಮಾಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಸದ್ಯ ಈಗ ನಗರ ಪೊಲೀಸ್ ಆಯುಕ್ತರಿಗೆ ಎಕ್ಸ್​ ಖಾತೆ ಮೂಲಕ ಪತಿ ಹುಡುಕಿಕೊಂಡುವಂತೆ ಮನವಿ ಮಾಡಿದ್ದಾರೆ.

ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪತಿ ಕಾಣೆಯಾದ ಬಗ್ಗೆ ಮಾಹಿತಿ ಹಂಚಿಕೊಂಡು ಸಹಾಯ ಮಾಡುವಂತೆ ಅಂಗಲಾಚಿದ್ದಾರೆ.

RELATED ARTICLES
- Advertisment -
Google search engine

Most Popular