ಹುಣಸೂರು: ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕನಸು ಕಟ್ಟಿಕೊಂಡು. ಹತ್ತಾರು ಪೇಟೆಗಳು, ನೂರಾರು ಕೆರೆಗಳು ನಿರ್ಮಿಸಿ. ಬೆಂಗಳೂರು ವಿಶ್ವದಲ್ಲಿ ಗುರುತ್ತಿಸಲು ಶ್ರಮಿಸಿದ ನಾಡಪ್ರಭು ಕೆಂಪೇಗೌಡರು ನಮಗೆ ಆದರ್ಶ ಪುರುಷರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಮತ್ತು ಎಸ್ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ರಾಜ್ಯದ ಎರಡನೇ ದೊಡ್ಡ ಸಮುದಾಯವಾದ ಒಕ್ಕಲಿಗರು ಉಳಿಮೆ ಮಾಡಿ ದೇಶಕ್ಕೆ ಬರಿ ಅನ್ನದಾತನಾಗಿಲ್ಲ. ಜತೆ, ಜತೆಗೆ ವಿಧಾನ ಸೌಧ,ವಿಕಾಶ ಸೌಧ, ಬೆಳಗಾವಿ ಸೌಧ,ರೈತರಿಗೆ ನೀರಾವರಿ ಯೋಜನೆ, ಮಾನಸ ಗಂಗೋತ್ರಿ ಸ್ಥಾಪಾನೆ ಹೀಗೆ ನಮ್ಮ ಒಕ್ಕಲಿಗರ ಸಮುದಾಯದ ಮಹನೀಯರ ಸಾಧನೆ ಕಣ್ಣಮುಂದಿದೆ ಎಂದರು.
ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ,ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟ ಮಹನೀಯರನ್ನು ನಾವು ಗೌರವಿಸುವುದರ ಜತೆಗೆ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಕೊಳ್ಳಬೇಕು. ಸಮಾಜದಲ್ಲಿ ನೀವು ಮುಖ್ಯ ವಾಹಿನಿಗೆ ಬರಬೇಕಾದರೆ ನಿರ್ದಿಷ್ಟ ಗುರಿ ಇರಬೇಕು.ಉದ್ದೇಶ ಒಳ್ಳಯದು ಇದ್ದರೆ. ನಿಮ್ಮನ್ನು ಯಾರೂ ತಡೆಲು ಸಾಧ್ಯವಿಲ್ಲ. ನಿಮ್ಮ ನಡೆ ಓದಿನ ಕಡೆ ಮಾತ್ರವಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಾಡಪ್ರಭು ಕೆಂಪೇಗೌಡರು ಐದು ಶತಮಾನಗಳ ಹಿಂದನೇ ಮಾಡಿರುವ ಆಲೋಚನೆಗಳು, ಅವರು ರೂಪಿಸಿದ ಚಮತ್ಕಾರಗಳು,ಚಾಣಾಕ್ಷತೆ ಇಂದಿಗೂ ಪ್ರಸ್ತುತವಾಗಿದೆ. ಅವರು ಅಂದು ತೆಗದುಕೊಂಡ, ನಗರ ನಿರ್ಮಾಣದ ದಕ್ಷತೆಯನ್ನು ನಾವೂ ಕೂಡ ಅನುಸರಿಸುವ ಅಗತ್ಯವಿದೆ ಎಂದರು.
ಹುಣಸೂರಿನಲ್ಲಿ ಒಕ್ಕಲಿಗ ಸಮುದಾಯ ಅತಿ ಹೆಚ್ಚು ಜನಸಂಖ್ಯೆ ಇದ್ದರೂ ಒಂದು ಸಮುದಾಯವಿಲ್ಲವೆಂಬ ಕೊರಗು ಶೀಘ್ರದಲ್ಲೇ ಬಗ್ಗೆ ಅರಿಯಲಿದೆ. ಬೈಪಾಸ್ ರಸ್ತೆಯಲ್ಲಿ ಒಂದು ಎಕ್ಕರೆ ಭೂಮಿಯನ್ನು ನನ್ನ ಸ್ವಂತ ಖರ್ಚಿನಲ್ಲಿ ಖರೀದಿ ಮಾಡಲಿದ್ದು ಆ ಕನಸು ನೆರವೇರಲಿದೆ. ಹಾಗೆ ಪ್ರತಾಪ್ ಸಿಂಹ, ಅಶೋಕ, ಅವರ ಅವಧಿಯಲ್ಲಿ ಸಮುದಾಯಕ್ಕೆ ಕೊಡಿಸಿರುವ ಎರಡು ಎಕ್ಕರೆ ಭೂಮಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುವುದು ಎಂದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ನಿವೃತ್ತ ಪ್ರಾಂಶಪಾಲ ಹೆಚ್.ಆರ್.ಸಿದ್ದೇಗೌಡ ಮಾತನಾಡಿ, ವಿಜಯನಗರದ ಸಾಮ್ರಾಜ್ಯದ ಕೃಷ್ಣ ದೇವರಾಯರ ಆಡಳಿತಕ್ಕೆ ಬೆರಗಾಗಿದ್ದ ನಾಡಪ್ರಭು ಕೆಂಪೇಗೌಡರು ಬದುಕು ಕಟ್ಟಿಕೊಳ್ಳುವ ಬದಲು, ನಾಡಿನ ಎಲ್ಲಾ ಸಮುದಾಯದ ಜೀವನಕ್ಕೆ 64 ಪೇಟ್ ಗಳನ್ನು ಕಟ್ಟಿದರು, 650 ಕೆರೆ, ಕಟ್ಟೆಗಳನ್ನು ಕಟ್ಟಿದರು, ಗಿಡ, ಮರಗಳನ್ನು ನೆಟ್ಟಿ ಪೋಷಿಸಿದರು. ಅದಕ್ಕೆ ಅವರು ನಾಡಪ್ರಭು ಆಗಿ ಉಳಿದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮಿ ಆರ್ಶೀವಚನ ನೀಡೀದರು. ಕೆ.ಗಣೇಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಇದೇ ಸಂದರ್ಭದಲ್ಲಿ ಯುಪಿಎಸ್ ಪಾಸಾದ ಶ್ರೇಯಸ್ ಹಾಗೂ 110 ಪ್ರತಿನ್ಭಾವಿತ ವಿದ್ಯಾರ್ಥಿಗಳನ್ನು ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜೆ.ಗಂಗಾಧರ್, ಕೆ.ವಿ.ಶ್ರೀಧರ್, ಮಂಜೇಗೌಡ, ಉಧ್ಯಮಿ ರಾಜು ಶಿವರಾಜೇಗೌಡ,ಬಿಳಿಕೆರೆ ಗೌರಿಶಂಕರ್ (ಮಧು). ಸಂಘದ ನಿರ್ದೇಶಕರಾದ ದೇವರಹಳ್ಳಿ ಸೋಮಶೇಖರ್, ಗೋವಿಂದೇಗೌಡ, ಹಬ್ಬನಕುಪ್ಪೆ ಜಯರಾಂ, ಕಿರಂಗೂರು ಬಸವರಾಜು, ಸುರೇಶ್, ಸತೀಶ್ ಪಾಪಣ್ಣ, ರಾಮಕೃಷ್ಣೇಗೌಡ, ಡಾ.ಕೀರ್ತಿಕುಮಾರ್, ಸುನಿತಾ ಜಯರಾನೇಗೌಡ, ಕೆ.ವೆಂಕಟೇಶ, ರವೀಗೌಡ, ಸ್ವಾಮೀಗೌಡ,ರುದ್ರೇಗೌಡ, ಜಗದೀಶ್ , ಉದಯ್ ಕುಮಾರ್, ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದ್ ಕುಮಾರ್ ಇದ್ದರು.