Wednesday, May 21, 2025
Google search engine

HomeUncategorizedರಾಷ್ಟ್ರೀಯನಾಗಾಲ್ಯಾಂಡ್: ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ

ನಾಗಾಲ್ಯಾಂಡ್: ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ

ಕೊಹಿಮಾ: ನಾಗಾಲ್ಯಾಂಡ್ ರಾಜ್ಯದ ಪೂರ್ವಭಾಗದ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ  ಮತದಾನವಾಗಿದೆ ಎಂದು ವರದಿಯಾಗಿದೆ.

ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ಇಎನ್​ ಪಿಒ) ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ಚುನಾವಣೆಯನ್ನು ಬಹಿಷ್ಕರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ 6 ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನಾಗಾಲ್ಯಾಂಡ್​ ಮುಖ್ಯ ಚುನಾವಣಾಧಿಕಾರಿಯು ಇಎನ್​ ಪಿಒಗೆ ಶೋಕಾಸ್ ನೊಟೀಸ್‌ ಜಾರಿ ಮಾಡಿದ್ದಾರೆ. ಚುನಾವಣೆ ಕಾರ್ಯಗಳಿಗೆ ಅಡ್ಡಿ ಪಡಿಸುವ ಸೆಕ್ಷನ್ 171ಸಿ ನಿಯಮದ ಅಡಿಯಲ್ಲಿ  ಇಎನ್ ​ಪಿಒ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಚುನಾವಣೆ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಗಾಲ್ಯಾಂಡ್‌ ರಾಜ್ಯದಲ್ಲಿ 16 ಜಿಲ್ಲೆಗಳಿವೆ. ರಾಜ್ಯದ ಪೂರ್ವ ಭಾಗದ 6 ಜಿಲ್ಲೆಗಳಲ್ಲಿ ಇಎನ್ ​ಪಿಒ ಸಂಘಟನೆ ಪ್ರಬಲವಾಗಿದ್ದು ಪ್ರತ್ಯೇಕ ಆಡಳಿತಕ್ಕಾಗಿ ಹೋರಾಟ ಮಾಡುತ್ತಿದೆ.

ಶೂನ್ಯ ಮತದಾನವಾದ ಜಿಲ್ಲೆಗಳ ವ್ಯಾಪ್ತಿಯಲ್ಲಿ 20 ಶಾಸಕರು ಇದ್ದಾರೆ. ಇವರೊಂದಿಗೆ ಹಾಗೂ ವಿವಿಧ ಸಂಘಟನೆಗಳ ಜೊತೆ ಸಮಾಲೋಚಿಸಿ ಮತದಾನ ಬಹಷ್ಕಾರದ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಇಎನ್ ಪಿಒ ಹೇಳಿದೆ.

ನಾಗಾಲ್ಯಾಂಡ್‌ ರಾಜ್ಯದಲ್ಲಿ 60 ವಿಧಾನಸಭೆ ಹಾಗೂ ಒಂದು ಲೋಕಸಭಾ ಸ್ಥಾನವಿದೆ.

RELATED ARTICLES
- Advertisment -
Google search engine

Most Popular