ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹುಣಸೂರು ವನ್ಯಜೀವಿ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಣೇಶ ಹಾಗೂ ಶ್ರೀರಂಗ ಸಾಕಾನೆಗಳ ಸಹಾಯದಿಂದ ಹುಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಶೆಟ್ಟಹಳ್ಳಿ-ನೇಗತ್ತೂರು ಅರಣ್ಯ ಪ್ರದೇಶದಲ್ಲಿ ನಡೆಸಿದರು.
ನೇಗತ್ತೂರು ಗ್ರಾಮದ ಲಕ್ಷ್ಮಮ್ಮ ಚಂದ್ರೇಗೌಡರಿಗೆ ಸೇರಿದ ಎರಡು ಜಾನುವಾರುಗಳ ಮೇಲೆ ಹಾಡು ಹಗಲೇ ಹುಲಿ ದಾಳಿ ನಡೆಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಹುಲಿ ಸೆರೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಪತ್ತೆಗೆ ಅರಣ್ಯ ಪ್ರದೇಶದ ಹತ್ತು ಕಡೆ ಸಿಸಿ ಕ್ಯಾಮೆರ ಅಳವಡಿಸಲಾಗಿದ್ದು, ಸಿ ಸಿ ಕ್ಯಾಮರದಲ್ಲಿ ಹುಲಿಯ ಚಲನ ವಲನ ಚಿತ್ರ ಸೆರಯಾಗಿದ್ದು ಹುಲಿ ಇರುವಿಕೆ ಖಚಿತವಾಗಿದ್ದು, ಬುಧವಾರದಂದು ಹುಲಿ ಸೆರೆಗೆ ಕಾರ್ಯಚರಣೆ ಕೈಗೊಂಡಿದ್ದು, ಸಾಕಾನೆಗಳಾದ ಗಣೇಶ ಹಾಗೂ ಶ್ರೀರಂಗ ಸಾಕಾನೆಗಳಿಂದ ಕೂಂಬಿಂಗ್ ನಡೆಸಲಾಗಿದ್ದು ಹುಲಿಯ ಯಾವುದೇ ಸುಳಿವು ಸಿಕ್ಕಿಲ್ಲವೆಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಾಕಾನೆಗಳಾದ ಗಣೇಶ, ಶ್ರೀರಂಗ, ಹುಣಸೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು , ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಡಿಆರ್ ಎಫ್ ಒ ಗಳಾದ ಸಿದ್ದರಾಜು, ವೀರಭದ್ರಯ್ಯ ಸೇರಿದಂತೆ , ವಿಶೇಷೆ ಹುಲಿ ಸಂರಕ್ಷಣಾ ದಳ ಹಾಗೂ ಸಿಬ್ಬಂದಿವರ್ಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.