Wednesday, November 19, 2025
Google search engine

Homeಸ್ಥಳೀಯಹೆಸರು ಪ್ರಧಾನ ಮಂತ್ರಿ ಆವಾಸ್ ಯೋಜನೆ: ಕೇಂದ್ರ ಕೊಡೋದು ಮಾತ್ರ ಬರೀ 12 ಸಾವಿರ ರೂಪಾಯಿ:...

ಹೆಸರು ಪ್ರಧಾನ ಮಂತ್ರಿ ಆವಾಸ್ ಯೋಜನೆ: ಕೇಂದ್ರ ಕೊಡೋದು ಮಾತ್ರ ಬರೀ 12 ಸಾವಿರ ರೂಪಾಯಿ: ಸಿಎಂ ಸಿದ್ದರಾಮಯ್ಯ

ತಿ.ನರಸೀಪುರ : ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಫಲಾನುಭವಿಗೆ ಕೊಡುವ ಹಣ, ಬಳಿಕ ಅದೇ ಫಲಾನುಭವಿಯಿಂದ GST ರೂಪದಲ್ಲಿ ವಸೂಲಿ ಮಾಡುವ ಹಣದ ಲೆಕ್ಕಾಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲಿ ಸಾರ್ವಜನಿಕರ ಮುಂದೆ ಸೊಗಸಾಗಿ ತಮ್ಮದೇ ಶೈಲಿಯಲ್ಲಿ ಮಂಡಿಸಿದರು.

ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರ ಒಂದೂವರೆ ಲಕ್ಷ ರೂಪಾಯಿ ಕೊಡುತ್ತದೆ. ರಾಜ್ಯ ಸರ್ಕಾರ ಒಂದು ಲಕ್ಷ 28 ಸಾವಿರ ಕೊಡುತ್ತಿತ್ತು. ಉಳಿದ 3.80 ಲಕ್ಷ ರೂಪಾಯಿಯನ್ನು ಫಲಾನುಭವಿ ಕೊಡಬೇಕು. ಆಗ ಅವರಿಗೆ ಮನೆ ಸಿಗುತ್ತದೆ.

ಆದರೆ ಕೇಂದ್ರ ಸರ್ಕಾರ ಪ್ರತಿ ಮನೆಗೆ 18% GST ವಸೂಲಿ ಮಾಡುತ್ತದೆ. ಅಂದರೆ ಪ್ರತಿ ಕೊಳೆಗೇರಿ ಮನೆಗೆ 1 ಲಕ್ಷದ 38 ಸಾವಿರ ರೂಪಾಯಿಯನ್ನು  GST ಹೆಸರಲ್ಲಿ ಕೇಂದ್ರ ಸರ್ಕಾರ ವಾಪಾಸ್ ಪಡೆದುಕೊಳ್ಳುತ್ತದೆ.

ಅಂದರೆ, ಒಂದೂವರೆ ಲಕ್ಷ ರೂಪಾಯಿ ಸಹಾಯಧನ ಕೊಟ್ಟು, ಅದರಲ್ಲಿ ಒಂದು ಲಕ್ಷದ 38 ಸಾವಿರ ರೂಪಾಯಿ ವಾಪಾಸ್ ವಸೂಲಿ ಮಾಡಿದರೆ ಕೇಂದ್ರ ಸರ್ಕಾರ ಎಷ್ಟು ಕೊಟ್ಟಂಗಾಯ್ತು? ಬರೀ 12 ಸಾವಿರ ರೂಪಾಯಿ ಮಾತ್ರ. ಬರೀ 12 ಸಾವಿರ ಕೊಟ್ಟು ಅದಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಹೆಸರಿಟ್ಟಿದ್ದಾರೆ.

ಕೊಳೆಗೇರಿ ನಿವಾಸಿಗಳಿಂದಲೂ 18% GST ಸುಲಿಗೆ ಮಾಡುವ ಈ ಕ್ರಮ ನನಗೆ ಬಹಳ ಬೇಸರ ಆಯಿತು. ಹೀಗಾಗಿ ಪ್ರತಿ ಫಲಾನುಭವಿಗಳು ಕಟ್ಟಬೇಕಿದ್ದ ಅವರ ಪಾಲಿನ  3 ಲಕ್ಷ 80 ಸಾವಿರ ರೂಪಾಯಿಯಲ್ಲಿ ಒಂದು ಲಕ್ಷ ಮಾತ್ರ ಅವರಿಂದ ಕಟ್ಟಿಸಿಕೊಂಡು ಉಳಿದ ಹಣವನ್ನು ನಮ್ಮ ಸರ್ಕಾರದಿಂದಲೇ ಕಟ್ಟಿಸಲು ನಾನು ನಿರ್ಧರಿಸಿದೆ.

ಹೀಗಾಗಿ ಪ್ರತಿ ಕೊಳೆಗೇರಿ ಮನೆಗೆ 4 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ನಮ್ಮ ರಾಜ್ಯ ಸರ್ಕಾರ ಕಟ್ಟತ್ತೆ. ಕೇಂದ್ರ ಸರ್ಕಾರದ ಪಾಲು ಕೇವಲ 12 ಸಾವಿರ ರೂಪಾಯಿ. ಆದರೆ ಹೆಸರು ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ.

ಇದು ವಂಚನೆ ಅಲ್ವಾ ? ಇದು ಅನ್ಯಾಯ ಅಲ್ವಾ ? ಈ ಅನ್ಯಾಯಕ್ಕೆ ಮೋದಿ ಸರ್ಕಾರಕ್ಕೆ ಮತ ಹಾಕಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಹಾಗೆಯೇ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಹಣ 4 ಲಕ್ಷ ಕೋಟಿ. ಇದರಲ್ಲಿ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 53 ಸಾವಿರ ಕೋಟಿ. ಇದು ಅನ್ಯಾಯ ಅಲ್ವಾ? ಈ ಅನ್ಯಾಯಕ್ಕೆ ಬಿಜೆಪಿಗೆ ಮತ ಹಾಕ್ಬೇಕಾ ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಪ್ರವಾಹ ಬಂದಾಗ ಮೋದಿ ಬರಲಿಲ್ಲ. ರಾಜ್ಯಕ್ಕೆ ಪ್ರವಾಹ ಬಂದಾಗ ಮೋದಿ ಬರಲಿಲ್ಲ. ಈಗ ಓಟು ಕೇಳೋಕೆ ಮಾತ್ರ ಬರುತ್ತಿದ್ದಾರೆ. ಈ ಚಂದಕ್ಕೆ ಮೋದಿಗೆ ಓಟು ಹಾಕ್ಬೇಕಾ ಎಂದು ವ್ಯಂಗ್ಯದಿಂದ ಪ್ರಶ್ನಿಸಿದರು.

ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಕೇಂದ್ರದ ಮೋದಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅನ್ನು ಬಲಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು.‌

RELATED ARTICLES
- Advertisment -
Google search engine

Most Popular