Wednesday, November 26, 2025
Google search engine

Homeಅಪರಾಧನಂದಿನಿ ತುಪ್ಪ ಕಲಬೆರಕೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ನಂದಿನಿ ತುಪ್ಪ ಕಲಬೆರಕೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು : ನಂದಿನಿ ತುಪ್ಪವನ್ನ ಕಲಬೆರಕೆ ಮಾಡುತ್ತಿದ್ದ, ಪ್ರಕರಣದಲ್ಲಿ ಪ್ರಮುಖ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‌ಶಿವಕುಮಾರ್ ಹಾಗೂ ರಮ್ಯಾ ಬಂಧಿತ ಆರೋಪಿ ದಂಪತಿ ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್‌ಗಳಿಗೆ ನಕಲಿ ತುಪ್ಪ ಸರಬರಾಜು ಮಾಡುತ್ತಿದ್ದರು. ತಮಿಳುನಾಡಿನಲ್ಲಿ ಘಟಕ ಹೊಂದಿದ್ದ ಕಿಂಗ್‌ ಪಿನ್‌ ದಂಪತಿ ರಾಜ್ಯದಲ್ಲಿ ಕಲಬೆರಕೆ ತುಪ್ಪ ತಯಾರಿಸಿ, ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್‌ ಬಾಟಲ್‌ನಲ್ಲಿ ಸಪ್ಲೈ ಮಾಡುತ್ತಿದ್ದರು.

ಸಿಸಿಬಿ ಪೊಲೀಸರ ದಾಳಿ ವೇಳೆ ತುಪ್ಪ ತಯಾರಿಸುವ ದೊಡ್ಡ ಅತ್ಯಾಧುನಿಕ ಮೆಷಿನ್‌ಗಳು ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮುನಿರಾಜು ಎಂಬುವರನ್ನು ಸಿಸಿಬಿ ಬಂಧಿಸಿತ್ತು.

ಅಲ್ಲದೇ ಬರೋಬ್ಬರಿ 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನ ಜಪ್ತಿ ಮಾಡಿತ್ತು. ಇದೀಗ ಕಿಂಗ್‌ಪಿನ್‌ ದಂಪತಿಯನ್ನ ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದೆ.

RELATED ARTICLES
- Advertisment -
Google search engine

Most Popular