Tuesday, February 17, 2026
Google search engine

Homeಸ್ಥಳೀಯನವ ನಗರ ಬ್ಯಾಂಕ್ ರಾಜ್ಯದ ಮಾದರಿ : ಕೆ.ಎನ್. ಬಸಂತ್ ನಾಲ್ಕನೇ ಬಾರಿ ಅಧ್ಯಕ್ಷರಾಗಿ...

ನವ ನಗರ ಬ್ಯಾಂಕ್ ರಾಜ್ಯದ ಮಾದರಿ : ಕೆ.ಎನ್. ಬಸಂತ್ ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆ

ಕೆ.ಆರ್‌.ನಗರ : ಕಳೆದ 25 ವರ್ಷಗಳ ಹಿಂದೆ ಪಟ್ಟದಲ್ಲಿ ಆರಂಭವಾದ ನವ ನಗರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ರಾಜ್ಯದಲ್ಲಿಯೆ ಮಾದರಿಯಾಗಿದ್ದು ಇದಕ್ಕೆ ಸಂಸ್ಥಾಪಕ ಅಧ್ಯಕ್ಷ ದಿ. ಎಸ್.ನಂಜಪ್ಪ ನವರು‌ ಕಾರಣೀಭೂತರು ಎಂದು ಸಾ.ರಾ.ಸ್ನೇಹ ಬಳಗದ ಪ್ರಧಾನ ಕಾರ್ಯದರ್ಶಿ ಸಿ.ಜೆ.ಆನಂದ್ ಹೇಳಿದರು.

ಪಟ್ಟಣದ ಅರ್ಕನಾಥ ರಸ್ಥೆಯಲ್ಲಿರುವ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ‌ ಸತತವಾಗಿ ನಾಲ್ಕನೇ ಬಾರಿಗೆ ಆಯ್ಕೆಯಾದ ಕೆ.ಎನ್.ಬಸಂತ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು ಬ್ಯಾಂಕಿನ ವಹಿವಾಟು ಪ್ರಸ್ತುತ ಸಾವಿರ‌ ಕೋಟಿಗಳ ವ್ಯವಹಾರ ದಾಟಿದ್ದು ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದರು.

ರಸ್ತೆ ಬದಿ‌ ವ್ಯಾಪಾರಿಗಳು ಸೇರಿದಂತೆ ಸಣ್ಣ ಉದ್ದಿಮೆದಾರರಿಗೆ ಸಕಾಲದಲ್ಲಿ ಸಾಲ‌ ನೀಡುವ ಮೂಲಕ ಗ್ರಾಹಕ ಸ್ನೇಹಿಯಾಗಿರುವ ನಮ್ಮ ಬ್ಯಾಂಕ್ ಕೆ.ಆರ್.ನಗರದೊಂದಿಗೆ ಹುಣಸೂರು, ಪಿರಿಯಾಪಟ್ಟಣ ಮತ್ತು ಮೈಸೂರಿನ‌ ಹೂಟಗಳ್ಳಿಯಲ್ಲಿ ಶಾಖಾ ಕಛೇರಿ ಹೊಂದಿದ್ದು ನಂಜನಗೂಡಿನಲ್ಲೂ ಬ್ಯಾಂಕ್ ಆರಂಭಿಸಲು ಮುಂದಾಗಿರುವುದು ಸಂತಸ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಷ್ಟ್ರೀಕೃತ‌ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆದು ತಮ್ಮ‌ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ನವ ನಗರ ಅರ್ಬನ್ ಕೋ- ಅಪರೇಟಿವ್ ಬ್ಯಾಂಕ್ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಜತೆಗೆ ಈಗ ಸ್ವಂತ ಆಪ್‌ ಹೊಂದಿದ್ದು ಈಗ ಜನಸ್ನೇಹಿಯಾಗಿದೆ ಎಂದು‌ ಕೊಂಡಾಡಿದರು.
ಮುಖಂಡರಾದ ಎಸ್ ಎಲ್ ಡಿ ಶಂಕರ್, ತಂದ್ರೆಮಂಜು, ಬ್ಯಾಂಕ್ ನಿರ್ದೇಶಕ ರಂಗನಾಥ್ ಇದ್ದರು.

RELATED ARTICLES
- Advertisment -
Google search engine

Most Popular