Wednesday, September 10, 2025
Google search engine

HomeUncategorizedರಾಷ್ಟ್ರೀಯಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಭಾರತ ದೇಶದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆ

ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಭಾರತ ದೇಶದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆ

ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರ ಉತ್ತರಾಧಿಕಾರಿಯಾಗಿ, ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ನಿರೀಕ್ಷೆಯಂತೆ ಭರ್ಜರಿ ಗೆಲುವು ಸಾಧಿಸಿ ಭಾರತದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಇಂದು ನಡೆದ ಚುನಾವಣೆಯಲ್ಲಿ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ವಿಪಕ್ಷಗಳ I.N.D.I.A ಕೂಟದಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರು ಸ್ಪರ್ಧೆಯಲ್ಲಿ ಇದ್ದರು. ಒಟ್ಟು 767 ಮತಗಳಲ್ಲಿ 752 ಮತಗಳು ಮಾನ್ಯವಾಗಿದ್ದು, 15 ಮತಗಳು ಅಮಾನ್ಯಗೊಂಡಿವೆ. ಆದರೆ ಸುದರ್ಶನ್ ರೆಡ್ಡಿಗೆ ಕೇವಲ 300 ಮತಗಳಷ್ಟೇ ಸಿಕ್ಕಿವೆ. 315 ಮತಗಳ ನಿರೀಕ್ಷೆಯಲ್ಲಿದ್ದ ವಿಪಕ್ಷಗಳಿಗೆ ಇದು ಮುಖಭಂಗವಾಯಿತು.
ಬಿಜೆಪಿ ಹೇಳಿಕೆಯ ಪ್ರಕಾರ, ವಿಪಕ್ಷ ಅಭ್ಯರ್ಥಿಗೆ ಬಂದಿರಬೇಕಾದ 15 ಮತಗಳು ರಾಧಾಕೃಷ್ಣನ್ ಅವರ ಪಾಲಿಗೆ ತಿರುಗಿವೆ. ಈ ಮೂಲಕ ಆರ್‌ಎಸ್‌ಎಸ್ ಕಟ್ಟಾಳು, ತಮಿಳುನಾಡಿನಲ್ಲಿ ‘ಮೋದಿ’ ಎಂದೇ ಪ್ರಸಿದ್ಧರಾಗಿರುವ ರಾಧಾಕೃಷ್ಣನ್ ದೇಶದ ಎರಡನೇ ಅತಿ ದೊಡ್ಡ ಹುದ್ದೆಯನ್ನಾಳಲಿದ್ದಾರೆ.

ಚುನಾವಣೆ ಫಲಿತಾಂಶದ ನಂತರ ಪ್ರತಿಕ್ರಿಯಿಸಿರುವ ಸುದರ್ಶನ್ ರೆಡ್ಡಿ, “ನಾನು ಸೋಲನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವವೆಂದರೆ ಗೆಲುವು ಮಾತ್ರವಲ್ಲ. ಸಂವಾದ, ಭಿನ್ನಾಭಿಪ್ರಾಯ, ಭಾಗವಹಿಸುವಿಕೆಗಳೂ ಅದರ ಬಲವಾಗಿದೆ,” ಎಂದು ಹೇಳಿದ್ದಾರೆ.

ರಾಧಾಕೃಷ್ಣನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವಾರು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಜಯದೊಂದಿಗೆ ಎನ್‌ಡಿಎ ತನ್ನ ರಾಜಕೀಯ ಪೈಪೋಟಿಯಲ್ಲಿ ಮತ್ತೊಂದು ನೈತಿಕ ಗೆಲುವು ಸಾಧಿಸಿರುವಂತಾಗಿದೆ.

RELATED ARTICLES
- Advertisment -
Google search engine

Most Popular