ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾದ ಲಿಂಗಾಯತ ಸಮುದಾಯಕ್ಕೆ ಸೇರಿದ ನೇಹಾ ಹಿರೇಮಠ ಅವರ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣಪತ್ರ ವೈರಲ್ ಆಗಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ನಿರಂಜನ ಹಿರೇಮಠ ಅವರು ತಮ್ಮ ಪುತ್ರಿ ನೇಹಾ ಅವರಿಗೆ ಬೆಂಗಳೂರಿನ ವಿಳಾಸ ತೋರಿಸಿ ಎಸ್‌ಸಿ ಜಾತಿ ಪ್ರಮಾಣ ಪತ್ರ ಮಾಡಿಸಿದ್ದಾರೆ ಎಂದು ಸಮತಾ ಸೇನೆ ಗಂಭೀರ ಆರೋಪ ಮಾಡಿದೆ. ಸದ್ಯ ಈ ಜಾತಿ ಪ್ರಮಾಣ ಪತ್ರ ವೈರಲ್ ಆಗಿದ್ದು, ನೇಹಾ ಇದ್ದದ್ದು ಬೆಂಗಳೂರಿನಲ್ಲಾ ಅಥವಾ ಹುಬ್ಬಳ್ಳಿಯಲ್ಲಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.