ಮೈಸೂರು: ನಗರದ ಎಂ. ಎಂ. ಕೆ. ಮತ್ತು ಎಸ್. ಡಿ. ಎಂ. ಮಹಿಳಾ ಕಾಲೇಜಿನ ಸ್ನಾತಕೋತ್ತರ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ಒಂದು ದಿನದ ಯುಜಿಸಿ ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು, ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಸಾಯಿನಾಥ್ ಮಲ್ಲಿಗೆಮಡು ರವರು ಉದ್ಘಾಟಿಸಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳ ಮಹತ್ವವನ್ನು ತಿಳಿಸಿಕೊಟ್ಟರು. ಮಾತ್ರ ವಲ್ಲದೇ ನಾಲ್ಕನೇ ಸೆಮಿಸ್ಟರ್ ನಲ್ಲಿ ಓದುತಿರುವ ವಿದ್ಯಾರ್ಥಿನಿ ಕೆ-ಸೆಟ್ ಪರೀಕ್ಷೆ ಯಲ್ಲಿ ಪಾಸ್ ಆಗಿರುವುದು ಈ ಕಾರ್ಯಕ್ರಮದ ಫಲಿತಾಂಶ ವೆಂದು ತಿಳಿಸಿ, ಶುಭಕೋರಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾರತಿನಗರದ, ಕೆ. ಎಂ. ದೊಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಸಹಾಯಕ ಪ್ರಾಧ್ಯಾಪಕರಾದ ಡಾ. ಪಾರ್ಥ ಟಿ. ರವರು, ಪರೀಕ್ಷೆಯ ಸ್ವರೂಪ, ವಿಷಯವಾರು ಪ್ರಶ್ನೆಗಳು, ಪತ್ರಿಕೆ ೧ ಮತ್ತು ಪತ್ರಿಕೆ ೨ ರಲ್ಲಿನ ಪ್ರಮುಖ ಅಂಶಗಳ ಬಗ್ಗೆ ವಿಸ್ತೃತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ೫೮ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ. ಕೆ. ಎಸ್. ಸುಕೃತ, ಕಾರ್ಯಕ್ರಮ ಆಯೋಜಕ ಡಾ. ಎನ್. ದಿಲೀಪ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ದೇವಕಿ, ಸಹಾಯಕ ಪ್ರಾಧ್ಯಾಪಕ ಸೌಮ್ಯ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.