ವರದಿ: ವಿನಯ್ ದೊಡ್ಡಕೊಪ್ಪಲು
ಕೆ. ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಗ್ರಾಮದಲ್ಲಿ ಬೆಂಗಳೂರಿಗೆ ಆರಂಭಿಸಲಾಗಿರುವ ನೂತನ ಬಸ್ ಸಂಚಾರಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಜಿಲ್ಲಾ ಜನಜಾಗೃತಿ ಸದಸ್ಯ ಸಿ.ಕೆ.ಬಾಲ ಮನೋಹರ್, ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿ.ಬಿ.ಬೀರೆಗೌಡ, ಹೊಸಕೋಟೆ ಪಂಚಾಯಿತಿ ಅಧ್ಯಕ್ಷರಾದ ಮಹದೇವ್ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಶುಭಕೋರಿದರು.
ಈ ಬಸ್ ಸಂಚಾರವು ಬೆಳಿಗ್ಗೆ 6.15ಕ್ಕೆ ಪಿರಿಯಾಪಟ್ಟಣದಿಂದ ಹೊರಟು ರಾವಂದೂರು, ಚಿಬುಕಹಳ್ಳಿ, ಮುದ್ದನಹಳ್ಳಿ,ಹೊಸೂರು ಕೆ. ಆರ್.ನಗರ ಮೈಸೂರು ಮೂಲಕ ಬೆಂಗಳೂರಿಗೆ ತಲುಪಲಿದೆ. ಈ ಬಸ್ ಸೌಲಭ್ಯಕ್ಕೆ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಎಚ್.ಡಿ.ಗಣೇಶ್ ಅವರ ಸೂಚನೆ ಮೇರೆಗೆ ಡಿಪೋ ದಿಂದ ಈ ಬಸ್ ಸಂಚಾರ ಆರಂಭಿಸಿದೆ
ಇದೇ ಸಂದರ್ಭದಲ್ಲಿ ಬಸ್ ನ ಚಾಲಕ ದರ್ಶನ್, ಮತ್ತು ನಿರ್ವಹಕ ನಾಡಪ್ಪನಹಳ್ಳಿ ಮಹೇಂದ್ರ ಅವರನ್ನು ಸನ್ಮಾನಿಸಿ ಕೆ.ಎಸ್.ಆರ್.ಟಿ.ಸಿ. ಮೈಸೂರು ಗ್ರಾಮಾಂತರ ವಿಭಾಗಾಧಿಕಾರಿ ವೆಂಕಟೇಶ್ ಬೀರಪ್ಪ ಮತ್ತು ಪಿರಿಯಾಪಟ್ಟಣ ಡಿಪೋ ಮ್ಯಾನೇಜರ್ ದರ್ಶನ್ ಈ ಭಾಗದ ಸಾರ್ವಜನಿಕರ ಪರವಾಗಿ ಧನ್ಯವಾದ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಬುಕಹಳ್ಳಿ ಡೈರಿ ಉಪಾಧ್ಯಕ್ಷರಾದ ಸಿ.ಆರ್. ರವೀಶ್, ಸಂಘದ ನಿರ್ದೇಶಕರಾದ ರಾಜು, ಶಿವರಾಜ್, ವೆಂಕಟೇಶ್, ಮೋಹನ್ ಕುಮಾರ್ , ಸೋಮಶೇಖರ್ ,ಅನುಪಮಾ, ರವಿ ಎಸ್, ಎಸ್ ಎನ್ ಅಧ್ಯಕ್ಷರಾದ ಶಿವಕುಮಾರ್ ನಿರ್ದೇಶಕ ಗಣೇಶ್ ಮಾಜಿ ಅಧ್ಯಕ್ಷ ಪಾಪಣ್ಣ, ರಾಮೇಗೌಡ, ಅಶೋಕ್ , ಮುದ್ದನಹಳ್ಳಿ ಕೃಷ್ಣೇಗೌಡ,
ಡೈರಿ ಕಾರ್ಯದರ್ಶಿಯಾದ ಲೋಕೇಶ್ ರವರು ಹಾಲುಪರೀಕ್ಷಕ ಮಂಜೇಶ್, ಸಹಾಯಕ ಜಗದೀಶ್ ರವರು ಗ್ರಾಮದ ಯಜಮಾನರು ಹಾಜರಿದ್ದರು.



