ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಅರ್. ನಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಂಠೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಚಿಕ್ಕಕೊಪ್ಪಲು C. N. ಸ್ವಾಮಿ ನೇಮಕಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಚೀರನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಸಂಗರ ಶೆಟ್ಟಹಳ್ಳಿ ಎಸ್.ಕೆ. ಸುರೇಶ್ ರವರನ್ನು ರಾಜ್ಯ ಪ್ರಾಥಶಾಲಾ ಶಿಕ್ಷಕರ ಸ೦ಘದ ಅಧ್ಯಕ್ಷರಾದ ಕೆ.ನಾಗೇಶ್ ರವರು ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ರವರು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ವಿಚಾರವಾಗಿ 4 ತಿಂಗಳ ಹಿಂದೆ ರಾಜ್ಯ ಸಂಘದಿಂದ ಕೆ.ಆರ್.ನಗರ ತಾಲೂಕು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರ ನೇಮಕಾತಿ ಬೈಲಾ ನಿಯಮದ ಪ್ರಕಾರ ನೇಮಕವಾಗಿಲ್ಲ ಎಂದು ನಿರ್ದೇಶಕರಾದ ಎಸ್.ಕೆ ಸುರೇಶ್, ಕೆ.ಜೆ. ಭೋಜೇಗೌಡ, ಎಸ್.ಎಲ್. ರವಿ, ಕೆ.ಜೆ. ವಿನೋಬಾ, ಮತ್ತು ರಮಾಮಣಿ ಅವರು ದೂರು ನೀಡಿದ ಹಿನ್ನಲೆಯಲ್ಲಿ ಅಧ್ಯಕ್ಷ -ಕಾರ್ಯದರ್ಶಿ ನೇಮಕ ತಡೆಹಿಡಿಯಲಾಗಿತ್ತು.
ಆಗ ಅಧ್ಯಕ್ಷ ರಾಗಿ ಸಿ.ಎನ್.ಸ್ವಾಮಿ ಮತ್ತು ಕಾರ್ಯದರ್ಶಿಯಾಗಿ ಸಿ.ಎನ್.ಪ್ರಭು ನೇಮಕ ಗೊಂಡಿದ್ದರು. ಇದೀಗ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸ೦ಘದ ಅಧ್ಯಕ್ಷರಾದ ಕೆ.ನಾಗೇಶ್ ರವರು ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತು & ರಾಜ್ಯ ಸಹ ಕಾರ್ಯದರ್ಶಿಯವರಾದ ಚೇತನ್ ಕೊಡಗು
ಅವರು ಹೊರಡಿಸಿರುವ ಅದೇಶ ದಿಂದ ಈ ಶಿಕ್ಷಕರ ಸಂಘದಲ್ಲಿ ಇದ್ದ ಗೊಂದಲ ನಿವಾರಣೆಯಾದಂತೆ ಅಗಿದೆ.