ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಕುಪ್ಪೆ ಗೋಡೆದಾಸಯ್ಯ, ಉಪಾಧ್ಯಕ್ಷ ಚಿಕ್ಕಕೊಪ್ಪಲು ಪಟಾಕಿ ಸತೀಶ್ ಅವಿರೋಧವಾಗಿ ಆಯ್ಕೆಯಾದರು.
ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗೋಡೆದಾಸಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪಟಾಕಿ ಸತೀಶ್ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಿಡಿಓ ಎಸ್.ರವಿ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಹಾಲಿ ಅಧ್ಯಕ್ಷರಾಗಿದ್ದ ಸಿ.ಬಿ.ಸಂತೋಷ್ ಮತ್ತು ಉಪಾಧ್ಯಕ್ಷ ಕಲ್ಯಾಣಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು ಚುನಾವಣೆಗೆ ಸಂಘದ ಸಿಇಓ ಮುದ್ದನಹಳ್ಳಿ ಪುನಿತ್ ಸಹಕಾರ ನೀಡಿದರು
ನಂತರ ಮಾತನಾಡಿದ ನೂತನ ಅಧ್ಯಕ್ಷ ಗೋಡೆ ದಾಸಯ್ಯ ಸಂಘಕ್ಕೆ ಶಾಸಕ ಡಿ.ರವಿ ಶಂಕರ್, ಜಿಲ್ಲಾ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಅವರ ಸಹಕಾರ ದಿಂದ ನೂತನ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುವುದಾಗಿ ತಿಳಿಸಿದರು. ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಕಾಂಗ್ರೇಸ್ ಮುಖಂಡ ಹಳಿಯೂರು ಬಡಾವಣೆ ಮಹಾಲಿಂಗಣ್ಣ, ಮಾಸ್ಟರ್ ಹಿರಣ್ಣಯ್ಯ ಮೊದಲಾದವರು ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸಿ.ಬಿ.ಸಂತೋಷ್, ಸಿ.ಡಿ.ಪುನೀತ್ ಧರ್ಮಪಾಲ್, ವಿಶ್ವೇಶ್ವರಯ್ಯ, ಸಿ.ಟಿ.ಸ್ವಾಮಿಗೌಡ, ಸೋಮಪ್ಪ, ಕೆ.ಅರ್.ಮಂಜುನಾಥ್, ವಡ್ಡರಕೊಪ್ಪಲು ಜಿ.ಕುಮಾರಸ್ವಾಮಿ, ಜವರನಾಯಕ, ಕಲ್ಯಾಣಮ್ಮ, ರುಕ್ಮಿಣಿ ಸಂಘದ ಗುಮಾಸ್ತ ಸಿ.ಜಿ.ಜಗನ್ನಾಥ್ ಇದ್ದರು