Monday, July 13, 2026
Google search engine

Homeರಾಜ್ಯತಿರುಮಲದಲ್ಲಿ ಕರ್ನಾಟಕದ ಗೌರವ ಹೆಚ್ಚಿಸಲು ಹೊಸ ಪ್ರೋಟೋಕಾಲ್ : ಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ

ತಿರುಮಲದಲ್ಲಿ ಕರ್ನಾಟಕದ ಗೌರವ ಹೆಚ್ಚಿಸಲು ಹೊಸ ಪ್ರೋಟೋಕಾಲ್ : ಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ

ಬೆಂಗಳೂರು : ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕದ ಹೆಸರಿನಲ್ಲಿ ಸಲ್ಲಿಸಲಾಗುವ ಮೊದಲ ಆರತಿ ಸ್ವೀಕರಿಸುವ ಅವಕಾಶವನ್ನು ರಾಜ್ಯದ ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಅರ್ಹ ಗಣ್ಯರಿಗೆ ನೀಡುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಹೊಸ ಪ್ರೋಟೋಕಾಲ್ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತು ಬನಶಂಕರಿ 6ನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಕರ್ನಾಟಕದ ಪರವಾಗಿ ತಿರುಮಲದಲ್ಲಿರುವ ಕರ್ನಾಟಕ ವಿಶೇಷಾಧಿಕಾರಿ ಮೊದಲ ಆರತಿಯನ್ನು ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದರು.

ಹೊಸ ಪ್ರೋಟೋಕಾಲ್ ಜಾರಿಗೆ ಬಂದ ಬಳಿಕ ಕರ್ನಾಟಕದ ಪರವಾಗಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ನ್ಯಾಯಮೂರ್ತಿಗಳು ಸೇರಿದಂತೆ ಅರ್ಹ ಗಣ್ಯರಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮೊದಲ ಆರತಿ ಸ್ವೀಕರಿಸುವ ಅವಕಾಶ ದೊರೆಯಲಿದೆ ಎಂದು ತಿಳಿಸಿದರು. ಪ್ರಸ್ತುತ ತಿರುಮಲ ದೇವಸ್ಥಾನದ ಒಳಗಿನ ಮುಖ್ಯ ಪ್ರವೇಶದ್ವಾರದ ಸಮೀಪ ನಿಂತು ವಿಶೇಷ ಪೂಜೆ ಸಲ್ಲಿಸುವ ಅವಕಾಶ ಮುಖ್ಯಮಂತ್ರಿಗೆ ಮಾತ್ರ ಇದೆ. ಹೊಸ ವ್ಯವಸ್ಥೆಯಿಂದ ರಾಜ್ಯವನ್ನು ಪ್ರತಿನಿಧಿಸಿ ಭೇಟಿ ನೀಡುವ ಗಣ್ಯರಿಗೂ ಇದೇ ರೀತಿಯ ಗೌರವ ದೊರೆಯಲಿದೆ ಎಂದು ಹೇಳಿದರು.

ರಾಜ್ಯದ ಸೇವೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇದೇ ವೇಳೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಆಧ್ಯಾತ್ಮಿಕ ಗುರು ದ್ವಾರಕಾನಾಥ್ ಅವರ ಸೇವೆಯನ್ನು ಸಿಎಂ ಶ್ಲಾಘಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು, ಎಸ್.ಎಂ.ಕೃಷ್ಣ ಹಾಗೂ ಧರ್ಮಸಿಂಗ್ ಅವರೂ ದ್ವಾರಕಾನಾಥ್ ಅವರ ಸಲಹೆಗಳನ್ನು ಪಡೆದಿದ್ದರು ಎಂದು ಸ್ಮರಿಸಿದರು.

RELATED ARTICLES
- Advertisment -
Google search engine

Most Popular