Wednesday, December 31, 2025
Google search engine

Homeಸ್ಥಳೀಯಹಣ್ಣು ಮತ್ತು ತರಕಾರಿ ಬಳಸಿ ಹನುಮಾನ್ ಟ್ರಸ್ಟ್‌ ವತಿಯಿಂದ ನೂತನ ವರ್ಷದ ಆಚರಣೆ

ಹಣ್ಣು ಮತ್ತು ತರಕಾರಿ ಬಳಸಿ ಹನುಮಾನ್ ಟ್ರಸ್ಟ್‌ ವತಿಯಿಂದ ನೂತನ ವರ್ಷದ ಆಚರಣೆ

ಯಾದಗಿರಿ: ಜಿಲ್ಲೆಯಲ್ಲಿ ಹೊಸ ವರ್ಷದ ಆಚರಣೆಯನ್ನು ಕೇಕ್ ಬದಲಿಗೆ ರೈತರು ಬೆಳೆದ ಹಣ್ಣು, ತರಕಾರಿ ಕತ್ತರಿಸಿ ವಿಭಿನ್ನವಾಗಿ ಆಚರಿಸಿದ್ದಾರೆ.

ಶ್ರೀ ಹನುಮಾನ್ ಟ್ರಸ್ಟ್‌ನಿಂದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದು ದಿನ ಮುಂಚಿತವಾಗಿ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ. ಎಣ್ಣೆ ಪಾರ್ಟಿ, ಪ್ರಾಣಿ ಬಲಿಯಂತಹ ದುಷ್ಕೃತ್ಯಕ್ಕೆ ಬಾಯ್ ಹೇಳಿ, ಈ ರೀತಿ ರೈತರು ಬೆಳೆದ ಹಣ್ಣು, ತರಕಾರಿ ಕತ್ತರಿಸಿ ಆಚರಿಸಿ ಎಂದು ತಿಳಿಸಿದ್ದಾರೆ.

ನ್ಯೂ ಇಯರ್ ಸೆಲೆಬ್ರೇಷನ್ ಹೆಸರಲ್ಲಿ ಯುವಕರು ದುಷ್ಚಟಕ್ಕೆ ದಾಸರಾಗುತ್ತಾರೆ. ಹೀಗಾಗಿ ಮದ್ಯಕ್ಕೆ ಬಾಯ್ ಹೇಳಿ, ಕಬ್ಬಿನ ಹಾಲು ಕುಡಿದು ಆಚರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಚಿಕನ್, ಮಟನ್ ಬದಲಿಗೆ ತರಕಾರಿ, ಹಣ್ಣು ಸೇವಿಸುವಂತೆ ಕೇಳಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular