ವರದಿ : ಸ್ಟೀಫನ್ ಜೇಮ್ಸ್ ..ಬೆಳಗಾವಿ.
ನಿಪ್ಪಾಣಿ: ಹಾಲಸಿದ್ಧನಾಥ ದೇವರ ಜಾತ್ರೆ ಅಂಗವಾಗಿ ತಾಲ್ಲೂಕಿನ ಕುರ್ಲಿ ಗ್ರಾಮದ ಶಿಂತ್ರೆ ಕುಸ್ತಿ ಅಖಾಡದಲ್ಲಿ ನಡೆದ ಪ್ರಥಮ ಕ್ರಮಾಂಕದ ಕುಸ್ತಿ ಪಂದ್ಯದಲ್ಲಿ ಘೋಡಗೇರಿ ತಾಲಮಿಯ ಮಲ್ಲ ಪ್ರಕಾಶ ಪಾಟೀಲ ಅರ್ಜುನವಾಡಾದ ಮಲ್ಲ ಅಕ್ಷಯ ಚೌಗುಲೆ ಅವರನ್ನು ಸೋಲಿಸಿ ಬೆಳ್ಳಿಯ ಗದೆ ತಮ್ಮದಾಗಿಸಿಕೊಂಡರು. ಎರಡನೇಯ ಕ್ರಮಾಂಕದ ಕುಸ್ತಿಯಲ್ಲಿ ಡೋಣೆವಾಡಿ ತಾಲಮಿಯ ಪೃಥ್ವಿರಾಜ ಖರಾತ ಮತ್ತು ಬೆಳಗಾವಿಯ ದರ್ಗಾ ತಾಲಮಿಯ ಪವನ ಪಾಟೀಲ ಈ ಇಬ್ಬರ ಜಟ್ಟಿಗಳ ಮಧ್ಯೆ ಕುತೂಹಲಕಾರಿ ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಜಟ್ಟಿ ಪೃಥ್ವಿರಾಜ ಖರಾತ ಜಯಶಾಲಿಯಾದರು. ಕಾಳಗದಂತೆ ಕಾಣುತ್ತಿದ್ದ ನಂದಗಾವನ ಪೈಲ್ವಾನ್ ವಿವೇಕ ಚೌಗುಲೆ ಪೈಲ್ವಾನ್ ಮತ್ತು ಬಾಚಣಿಯ ಪೈಲ್ವಾನ್ ಪಾರ್ಥ ಕಳಂತ್ರೆ ಇವರ ಮಧ್ಯದ ಮೂರನೇಯ ಕ್ರಮಾಂಕದ ಕುಸ್ತಿ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.