Friday, December 5, 2025
Google search engine

Homeರಾಜ್ಯಸುದ್ದಿಜಾಲಉತ್ತರ ಕರ್ನಾಟಕ ಕನಸು ನಿರಾಶೆಗಳ ದೀರ್ಘ ಯಾನ.

ಉತ್ತರ ಕರ್ನಾಟಕ ಕನಸು ನಿರಾಶೆಗಳ ದೀರ್ಘ ಯಾನ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ ವಿಧಾನಸೌಧ ಅಧಿವೇಶನ:
ಉತ್ತರ ಕರ್ನಾಟಕದ ಕನಸು
ಬೆಳಗಾವಿಯಲ್ಲಿ ಪೂಣಾರ್‌ವಧಿ ಅಧಿವೇಶನ ನಡೆಯದ ಹೊರತು, ಉತ್ತರ ಕನಾರ್‌ಟಕದ ಅಭಿವೃದ್ಧಿಯ ಕನಸು ಸಾಕಾರವಾಗಲು
ಸಾಧ್ಯವಿಲ್ಲ ಎಂದು ಹಲವು ಬಾರಿ ಹೇ:ಳಿದ್ದೇನೆ.
ಶಾಸಕರ ಭವನಗಳ ನಿರ್ಮಾಣ, ಸಿಬ್ಬಂದಿ ವರ್ಗದ ಶಾಶ್ವತ ವಸತಿ, ಮುಖ್ಯ ಇಲಾಖೆಗಳ ಸ್ಥಳಾಂತರ ಇವುಗಳಿಲ್ಲದೆ 8-10 ದಿನಗಳ
ಅಧಿವೇಶನ ನಡೆಸುವುದು ಕೇವಲ ಕಾಟಾಚಾರ ಎನಿಸಬಹುದು,
ಪ್ರತಿ ಅಧಿವೇಶನಕ್ಕೆ 30 ಕೋಟಿಗೂ ಹೆಚ್ಚು ವೆಚ್ಚ, ಆದರೆ ಫಲಿತಾಂಶ?
ಇದಕ್ಕೆ ಬ್ರೇಕ್ ಹಾಕಬೇಕಾದರೆ ಶಾಶ್ವತ ವ್ಯವಸ್ಥೆಗಳು ಅವಶ್ಯಕ.
ಗರಿಷ್ಠ 20 ದಿನಗಳ ಪೂ ಅಧಿವೇಶನ ನಡೆಸಬೇಕು, ಇದನ್ನೇ ಜನತೆ ಬಯಸುವದು

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ. ಅದನ್ನು “ಪಿಕ್ನಿಕ್ ಅಧಿವೇಶನ” ಆಗಲು ಬಿಡಬಾರದು.
ಬೆಳಗಾವಿಯಲ್ಲಿ ಅಧಿವೇಶನಕ್ಕಾಗಿ ಹೋರಾಡಿದ ಅಂದಿನ ನಾಯಕರು, ಅಧಿಕಾರಿಗಳು, ಸಂಸ್ಥೆಗಳು ತೋರಿದ ಪರಿಶ್ರಮ ಅವು ವ್ಯರ್ಥವಾಗಬಾರದು. ಶಾಶ್ವತ, ಪರಿಣಾಮಕಾರಿ, ಪ್ರದೇಶಕ್ಕೆ ನ್ಯಾಯ ಮಾಡುವ ಅಧಿವೇಶನವೊಂದು ನಡೆಯಬೇಕು. ಇದು ಈ ಭಾಗದ ಜನತೆ ಹೊತ್ತಿರುವ ದೀರ್ಘಕಾಲದ ಆಶಯ.
ಉತ್ತರ ಕರ್ನಾಟಕದ ಅಭಿವೃದ್ಧಿಯ ಹಾದಿಯಲ್ಲಿ ಬೆಳಗಾವಿ ಅಧಿವೇಶನವೆಂಬ ಆ ಕಲ್ಪನೆ ಹುಟ್ಟಿದ ದಿನಗಳು ಈಗಲೂ ನನಗೆ ಜೀವಂತವಾಗಿ ನೆನಪಾಗುತ್ತವೆ. ನಂಜುಂಡಪ್ಪವರ ವರದಿ ನಾಡಿನ ಹಿಂದುಳಿದ ಪ್ರದೇಶಗಳಿಗೆ ಚಿಮ್ಮಿದ್ದ ಬೆಳಕು ಸ್ಪಷ್ಟವಾಗಿದ್ದರೂ, ಅದರ ಆಧಾರದ ಮೇಲೆ ಕಾರ್ಯಗತಗೊಳಿಸಬೇಕಿದ್ದ ಯೋಜನೆಗಳು ನಿಧಾನಗತಿಯಲ್ಲೇ ಸಾಗುತ್ತಿದ್ದವು.
ಆದ್ದರಿಂದಲೇ ಈ ದೇಶದ ಎರಡನೇ ವಿಧಾನಸೌಧವು ಬೆಳಗಾವಿಯಲ್ಲಿ ತಲೆ ಎತ್ತಬೇಕು, ಉತ್ತರ ಕನಾರ್‌ಟಕದ ಗಟ್ಟಿ ಧ್ವನಿಯನ್ನು ರಾಜ್ಯದ ಕೇಂದ್ರವಲಯಗಳು ಕೇಳಲೇಬೇಕು ಎಂಬ ನಿರ್ಧಾರ ನಮ್ಮೊಳಗೆ ಬಲವಾಗಿ ಮೊಳಕೆಯೊಡಗಿತು.
ಅದಕ್ಕಾಗಿ ನಾನು ಬಸವರಾಜ ಹೊರಟ್ಟಿ, ಎಂ.ಪಿ. ನಾಡಗೌಡ, ಎಂ.ಸಿ. ನಾಣಯ್ಯ, ಬಸವರಾಜ ಬೊಮ್ಮಾಯಿಯವರ ಜೊತೆಯಲ್ಲಿ ಅಂದಿನ ಮುಖ್ಯಮಂತೂರ್ಣಾವಧಿ ಧರಂಸಿಂಗರನ್ನು ಭೇಟಿಯಾದ ಕ್ಷಣಗಳು ಇತಿಹಾಸದ ಭಾಗವೇ ಆಗಿವೆ.
ಆದರೆ ಧರಂಸಿಂಗ ಅವರು ಕಲಬುರಗಿ ಜೇವರ್ಗಿಯಲ್ಲಿ ನಡೆಸುವ ಸಲಹೆ ನೀಡಿದರೂ, ಆ ಕಲ್ಪನೆಗೆ ಸ್ಪಷ್ಟ ರೂಪ ನೀಡಲು ಆಗಲಿಲ್ಲ.

ನಂತರ ರಚನೆಯಾದ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ಕಾಲದಲ್ಲಿ ನಮ್ಮ ಚರ್ಚೆಗಳು ವೇಗ ಪಡೆದವು. ಕುಮಾರಸ್ವಾಮಿ ಸಮ್ಮತಿಸಿದ ಕ್ಷಣ ಬೆಳಗಾವಿಯ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯಿತು.

12 ದಿನ
ಈ ಸಂದರ್ಭದಲ್ಲಿ ಕೇವಲ 12 ದಿನಗಳೊಳಗೆ ಕೆಎಲ್‌ಇ ಜೆಎನ್‌ಎಂಸಿ ವಸತಿಗೃಹಗಳನ್ನು ಪರಿಷ್ಕರಿಸಿ, ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರೊಂದಿಗೆ ಕೆಳಹಂತದಿಂದ ಸಿದ್ಧತೆ ನಡೆಸಿ ನಡೆದ ಮೊದಲ ಅಧಿವೇಶನ ಅದಾಗಿತ್ತು, ಅದು ಕೇವಲ ಕಾರ್ಯಕ್ರಮವಲ್ಲ, ಉತ್ತರ ಕರ್ನಾಟಕದ ಅಸಮತೋಲನದ ವಿರುದ್ಧದ ಘೋಷಣೆಯೇ ಆಗಿತ್ತು. 2009 ರಲ್ಲಿ ಮತ್ತೊಮ್ಮೆ ಯಶಸ್ವಿಯಾಗಿ ಜರುಗಿದ ಅಧಿವೇಶನವು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪ್ರಥಮ ಬಾರಿಗೆ ರಾಜ್ಯಮಟ್ಟದ ಗಮನ ಸೆಳೆಯಿತು.
ಇದನ್ನೆಲ್ಲಾ ಮುಂದುವರಿಸಿದಂತೆ, 2012ರಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಸುವರ್ಣ ವಿಧಾನಸೌಧ ಬೆಂಗಳೂರು ವಿಧಾನಸೌಧದ ಸಮಾನಗಾತ್ರದ ನವೀನ ವೈಭವ, ಉತ್ತರ ಕರ್ನಾಟಕದ ಅಭಿಮಾನಕ್ಕೆ ಅಮೃತದಾನ ಮಾಡಿದಂತಾಯಿತು

ಆದರೆ ಈ ಸೌಧಕ್ಕೆ ಇಂದು 13 ವರ್ಷವಾದರೂ, ಅದನ್ನು ನಿರ್ಮಿಸಿದ ಮೂಲ ಉದ್ದೇಶಗಳು ಮಾತ್ರ ಇನ್ನೂ ಕರಗುವ ಹಂತಕ್ಕೆ ಬಂದಿಲ್ಲ ಎಂಬುದು ನಿಜಕ್ಕೂ ನೋವಿನ ಸಂಗತಿ.
ಹುಸಿಯಾದ ನಿರೀಕ್ಷೆಗಳು.
ಬೆಳಗಾವಿ ಅಧಿವೇಶನವು ಪ್ರತೀ ವರ್ಷವೂ ಉತ್ತರ ಕರ್ನಾಟಕದ ಜನಸಾಮಾನ್ಯರಿಗೆ ಹಬ್ಬದ ನಿರೀಕ್ಷೆಗಳ ದಿನ. ಈ ಪ್ರದೇಶದ ದಶಕಗಳ ಸಮಸ್ಯೆಗಳು ರಾಜ್ಯದ ರಾಜಕೀಯ ಕೇಂದ್ರದಲ್ಲಿ ದುಂಬಿಸಬೇಕು, ಪರಿಹಾರಗಳು ಉದ್ಭವಿಸಬೇಕು ಎಂಬ ಉತ್ಸಾಹ ಜನಮನಗಳಲ್ಲಿರುತ್ತದೆ. ಆದರೆ, ಪ್ರತೀಬಾರಿ ಕಂಡದ್ದು ಆಶೆಗಳಿಗಿಂತ ನಿರಾಶೆಗಳೇ ಹೆಚ್ಚು.

ಉತ್ತರ ಕರ್ನಾಟಕವು ಕೃಷಿ-ಕೈಗಾರಿಕೆ-ಸಂಸ್ಕೃತಿ-ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯದ ಬಲಕಂಬ. ಆದರೂ ಅಭಿವೃದ್ಧಿಯ ಸೂಚ್ಯಾಂಕಗಳು ಸ್ಪಷ್ಟವಾಗಿ ದಕ್ಷಿಣ ಕರ್ನಾಟಕದ ಕೇಂದ್ರಿತವಾಗಿರುವುದು ಅನಿವಾರ್ಯ ಸತ್ಯ. ಈ ಅಸಮತೋಲನವನ್ನು ಸರಿಪಡಿಸಲುಲೇ ಬೆಳಗಾವಿ ಅಧಿವೇಶನ ಆರಂಭವಾಗಿದೆ. ಆದರೆ ಸದನದ ಚರ್ಚೆಗಳು ನೋಡುವಾಗ, ಸಮಸ್ಯೆಗಳ ತೂಕಕ್ಕೆ ತಕ್ಕ ಸಮಗ್ರತೆ, ದೃಢತೆ, ಮತ್ತು ಕಾರ್ಯಯೋಜನೆ ಇನ್ನೂ ಕಾಣುತ್ತಿಲ್ಲ.
ಅಧಿವೇಶನಕ್ಕೆ ಅರ್ಥವೇನು?
ಉತ್ತರ ಕರ್ನಾಟಕದ ಜನತೆ ವರ್ಷಗಳಿನಿಂದ ಬೇಡುತ್ತಿರುವ ಮೂಲ ಸಮಸ್ಯೆಗಳು
ಕೈಗಾರಿಕಾ ವಲಯಗಳ ಕುಸಿತ
ನೀರಾವರಿ ಯೋಜನೆಗಳ ನಿಧಾನಗತಿ
ಉದ್ಯೋಗಾವಕಾಶಗಳ ಕೊರತೆ
ಮೂಲಸೌಕರ್ಯ ಅಸಮತೋಲನ

ಇವೆಲ್ಲಕ್ಕೆ ದೀರ್ಘಕಾಲೀನ ಪರಿಹಾರ ದೊರೆಯಬೇಕಾದರೆ ಅಧಿವೇಶನವೇ ವೇದಿಕೆ. ಆದರೆ ಕಳೆದ ಅನೇಕ ಅಧಿವೇಶನಗಳು ಮುಖವಾಡದ ಕಾರ್ಯಕ್ರಮಗಳಾಗಿಯೇ ಉಳಿದುಕೊಂಡಿವೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಬೀದರ್ ಜಿಲ್ಲೆಗಳ ಕುಡಿಯುವ ನೀರು, ರೈತರ ಸಂಕಷ್ಟ, ಕೈಗಾರಿಕಾ ಹೂಡಿಕೆ,
ಆರೋಗ್ಯ ಸೇವೆಗಳ ಹಿನ್ನಡೆ ಎಲ್ಲರೂ ಸಮಸ್ಯೆಗಳ ದೊಡ್ಡ ದುಂಡುಗೋಲು.
ಆದರೂ ಸದನದಲ್ಲಿ ಗದ್ದಲಕ್ಕೆ ಹೆಚ್ಚು ಸಮಯ, ಪ್ರದೇಶದ ತುರ್ತು ಸಮಸ್ಯೆಗಳಿಗೆ ಕಡಿಮೆ ಸಮಯ.
ಇದು ಅಧಿವೇಶನದ ಆದ್ಯತೆಗಳ ಕ್ರಮವೇ ತಪ್ಪಾಗಿದೆ ಎಂಬ ಸೂಚನೆ.
ಚರ್ಚೆಗೆ ಬರಬೇಕಾದ ವಿಷಯಗಳಿಗೆ ಬ್ರೇಕ್..
ಕೃಷ್ಣಾ ಮೇಲ್ದಂಡೆ
ಮಹಾದಾಯಿ.
ತುಂಗಭದ್ರಾಭೀಮಾ ಜಲವಿನಿಯೋಗ
ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿ
ಕಲ್ಯಾಣ ಕರ್ನಾಟಕ ವಿಶೇಷ ಪ್ಯಾಕೇಜ್

ಇವುಗಳು ದಶಕಗಳಿಂದ ಪರಿಹಾರಕ್ಕಾಗಿ ಕಾಯುತ್ತಿರುವ ವಿಚಾರಗಳು.
ಆದರೆ ಸ್ಪಷ್ಟ ಚರ್ಚೆ ಯಾಗದೆ, ಘೋಷಣೆಗಳ ಮಟ್ಟದಲ್ಲಿ ಅಧಿವೇಶನ ಕೊನೆಗೊಳ್ಳುತ್ತದೆ.
ಉತ್ತರ ಕರ್ನಾಟಕದ ಜಿಲ್ಲಾ ಆಸ್ಪತ್ರೆಗಳ ಸ್ಥಿತಿ, ಗ್ರಾಮೀಣ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಕೊರತೆ, ವೈದ್ಯಕೀಯ ಕಾಲೇಜುಗಳ ಅಗತ್ಯ, ಸರ್ಕಾರಿ
ಶಾಲೆಗಳ ಮೂಲಸೌಕರ್ಯ ಹೀನಾಯತೆ..
ಇವೆಲ್ಲವೂ ಜನಜೀವನದ ಮೂಲದ ಸಮಸ್ಯೆಗಳು.
ಆದರೆ ಅಧಿವೇಶನದ ಗದ್ದಲದಲ್ಲಿ ಈ ಶಬ್ದಗಳು ಕೇಳಿಸಿಕೊಳ್ಳುವುದೇ ಇಲ್ಲ.

RELATED ARTICLES
- Advertisment -
Google search engine

Most Popular