Thursday, May 7, 2026
Google search engine

Homeದೇಶಮಮತಾ ಬ್ಯಾನರ್ಜಿ ಇನ್ನು ಮುಖ್ಯಮಂತ್ರಿಯಲ್ಲ : ಪಶ್ಚಿಮ ಬಂಗಾಳ ಸಚಿವ ಸಂಪುಟ ವಜಾಗೊಳಿಸಿದ ರಾಜ್ಯಪಾಲರು

ಮಮತಾ ಬ್ಯಾನರ್ಜಿ ಇನ್ನು ಮುಖ್ಯಮಂತ್ರಿಯಲ್ಲ : ಪಶ್ಚಿಮ ಬಂಗಾಳ ಸಚಿವ ಸಂಪುಟ ವಜಾಗೊಳಿಸಿದ ರಾಜ್ಯಪಾಲರು

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ ಕಾರಣ ರಾಜ್ಯಪಾಲರು ಮಮತಾ ನೇತೃತ್ವದ ಸಚಿವ ಸಂಪುಟವನ್ನು ವಜಾಗೊಳಿಸಿದ್ದಾರೆ.

ಸಾಂವಿಧಾನಿಕ ಪ್ರಕ್ರಿಯೆ ಮತ್ತು ವಿಧಾನಸಭೆ ವಿಸರ್ಜನೆ

ಸಂವಿಧಾನದ ನಿಯಮದಂತೆ ವಿಧಾನಸಭೆಯ ಅವಧಿಯು 5 ವರ್ಷಗಳಾಗಿರುತ್ತದೆ. 2021ರ ಮೇ 8 ರಂದು ಅಸ್ತಿತ್ವಕ್ಕೆ ಬಂದಿದ್ದ ಹಾಲಿ ವಿಧಾನಸಭೆಯ ಅವಧಿಯು 2026ರ ಮೇ 7ಕ್ಕೆ ಅಂತ್ಯಗೊಂಡಿದೆ. ಇದೀಗ ಹೊಸ ವಿಧಾನಸಭೆ ರಚನೆಯ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ, ಹಳೆಯ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ಈ ಸಾಂವಿಧಾನಿಕ ಕ್ರಮದಿಂದಾಗಿ ಮಮತಾ ಬ್ಯಾನರ್ಜಿ ಅವರು ಪ್ರತ್ಯೇಕವಾಗಿ ರಾಜೀನಾಮೆ ನೀಡುವ ಅಗತ್ಯವೇ ಇಲ್ಲದಂತಾಗಿದೆ.

ಮಮತಾ ಬ್ಯಾನರ್ಜಿ ಆರೋಪ: “ಇದು ಜನಾದೇಶವಲ್ಲ, ಪಿತೂರಿ”

ಮಂಗಳವಾರ (ಮೇ 6, 2026) ಸುದ್ದಿಗೋಷ್ಠಿ ನಡೆಸಿದ್ದ ಮಮತಾ ಬ್ಯಾನರ್ಜಿ ಅವರು, ಚುನಾವಣಾ ಫಲಿತಾಂಶವು ಜನರ ತೀರ್ಪಲ್ಲ ಬದಲಾಗಿ ದೊಡ್ಡ ‘ಪಿತೂರಿ’ ಎಂದು ಕಿಡಿಕಾರಿದ್ದರು. ನಾವು ಸ್ಪರ್ಧಿಸಿದ್ದು ಬಿಜೆಪಿಯೊಂದಿಗಲ್ಲ, ಬದಲಾಗಿ ಬಿಜೆಪಿ ಪರವಾಗಿ ಕೆಲಸ ಮಾಡಿದ ಚುನಾವಣಾ ಆಯೋಗದ ವಿರುದ್ಧ ಎಂದು ಅವರು ಆರೋಪಿಸಿದ್ದಾರೆ.

ಸುಮಾರು 100 ಕ್ಷೇತ್ರಗಳಲ್ಲಿ ಜನಾದೇಶವನ್ನು ಲೂಟಿ ಮಾಡಲಾಗಿದೆ ಮತ್ತು ಉದ್ದೇಶಪೂರ್ವಕವಾಗಿ ಮತ ಎಣಿಕೆಯನ್ನು ವಿಳಂಬಗೊಳಿಸಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸಲಾಗಿದೆ ಎಂದು ದೂರಿದ್ದಾರೆ. “ನಾನು ಸೋತಿಲ್ಲ, ನನ್ನನ್ನು ಸೋಲಿಸಲಾಗಿದೆ. ಇನ್ನು ಮುಂದೆ ನಾನು ಮುಕ್ತ ಹಕ್ಕಿ, ಬೀದಿಗೆ ಇಳಿದು ಜನರ ಪರವಾಗಿ ಹೋರಾಟ ಮಾಡುತ್ತೇನೆ ಮತ್ತು ‘ಇಂಡಿಯಾ’ (INDIA) ಒಕ್ಕೂಟವನ್ನು ರಾಷ್ಟ್ರಮಟ್ಟದಲ್ಲಿ ಬಲಪಡಿಸುತ್ತೇನೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.

ಮೇ 9ಕ್ಕೆ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಮೇ 9ರಂದು ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಅದ್ಧೂರಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ಸಾಧ್ಯತೆಯಿದೆ.

ಬಿಗಿ ಭದ್ರತೆ: ಸಮಾರಂಭದ ಹಿನ್ನೆಲೆಯಲ್ಲಿ ಸುಮಾರು 4,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಬಹುಸ್ತರದ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular