Wednesday, August 20, 2025
Google search engine

Homeಕ್ಯಾಂಪಸ್ ಕಲರವಪ್ರವೇಶಾತಿಗೆ ನವೀಕರಣ ಶುಲ್ಕ ಪಾವತಿಸಲು ಸೂಚನೆ

ಪ್ರವೇಶಾತಿಗೆ ನವೀಕರಣ ಶುಲ್ಕ ಪಾವತಿಸಲು ಸೂಚನೆ

ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2021-22, ರಿಂದ 2024-25ರ ಜುಲೈ ಆವೃತ್ತಿಗಳಲ್ಲಿ ಪ್ರಥಮ/ದ್ವಿತೀಯ ಸಾಲಿಗೆ ಪ್ರವೇಶಾತಿ ಪಡೆದ ಯುಜಿ ಪದವಿ ವಿದ್ಯಾರ್ಥಿಗಳು ಹಾಗೂ 2022-23 ರಿಂದ 2024-25ನೇ ಸಾಲಿನ ಜುಲೈ ಆವೃತ್ತಿಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆದ ಪಿಜಿ ಪದವಿ ವಿದ್ಯಾರ್ಥಿಗಳಿಗೆ, 2025-26ನೇ ಸಾಲಿನಲ್ಲಿ (ಜುಲೈ ಆವೃತ್ತಿ) ದ್ವಿತೀಯ, ತೃತೀಯ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಜನರಲ್/ಹೋಮ್ ಸೈನ್ಸ್/ಐಟಿ/ಬಿ.ಸಿ.ಎ/ಬಿ.ಬಿ.ಎ ಹಾಗೂ ಅಂತಿಮ ವರ್ಷದ ಎಂ.ಎ, ಎಂ.ಕಾಂ, ಎಂ.ಬಿ.ಎ ಮತ್ತು ಎಂ.ಎಸ್ಸಿ ಪದವಿಗಳಿಗೆ ಪ್ರವೇಶಾತಿ ನವೀಕರಣಕ್ಕಾಗಿ ಬೋಧನಾ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಈಗಾಗಲೇ ಪ್ರವೇಶಾತಿ ನವೀಕರಣ ಶುಲ್ಕವನ್ನು ಪಾವತಿಸಲು ಪ್ರಾರಂಭವಾಗಿದ್ದು, ದಂಡ ಶುಲ್ಕವಿಲ್ಲದೆ ಆ. 30ರವರೆಗೆ, 200 ರೂ.ಗಳ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 10ರವರೆಗೆ ಹಾಗೂ 400 ರೂ.ಗಳ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 26 ರೊಳಗೆ ಪ್ರವೇಶಾತಿ ನವೀಕರಣಕ್ಕೆ ಕಡೆ ದಿನಾಂಕವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ಅಧೀಕೃತ ಅಂತರ್ಜಾಲ www.ksoumysuru.ac.in ಅನ್ನು ವೀಕ್ಷಿಸುವುದು, ದೂ. ಸಂಖ್ಯೆ: 8690544544 ಅಥವಾ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ರಾಮನಗರ ಪ್ರಾದೇಶಿಕ ಕೇಂದ್ರ ನಂ.103, ಇ ಬ್ಲಾಕ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳು, ಬಿ.ಎಂ.ರಸ್ತೆ, ವಿವೇಕಾನಂದನಗರ, ರಾಮನಗರ-562159. ದೂ. ಸಂಖ್ಯೆ:-9448668880, 8861732487, 9743184848 9900356226 ಹಾಗೂ 8618501602 ಅನ್ನು ಸಂಪರ್ಕಿಸುವಂತೆ ಪ್ರಾದೇಶಿಕ ನಿರ್ದೇಶಕರಾದ ಗಿರೀಶ್ ಹೆಚ್. ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular