ಹುಣಸೂರು : ಮನುಷ್ಯನ ಮೂಳೆಗಳು ಬಲಿಷ್ಠವಾಗಿರಬೇಕಾದರೆ ದಿನನಿತ್ಯ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮತ್ತು ಜೀವನ ಶೈಲಿಯಿಂದ ಮಾತ್ರ ಸಾಧ್ಯ ಎಂದು ಅಪೋಲೋ ಆಸ್ಪತ್ರೆಯ ಅರ್ಥೋಪೆಡಿಕ್ ಸರ್ಜನ್ ಡಾ.ಸಿಂಧು ಬಿ. ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಹುಣಸೂರು ರೋಟರಿ ಕ್ಲಬ್ ಮತ್ತು ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಬಿಎಂಡಿ ಆರೋಗ್ಯ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮಮೂಳೆಗಳಿಗೆ ಆಸ್ಟಿಯೊಪೊರೋಸಿಸ್ ಕಾಯಿಲೆ ಬರದಂತೆ ಕಾಪಾಡಿಕೊಂಡರೆ ನಿಮ್ಮ ಮೂಳೆ ಮುರಿಯುವುದು ಮತ್ತು ಬಿರುಕು ಬಿಡುವುದನ್ನು ತಪ್ಪಿಸಬಹುದು ಎಂದರು.
ಬಿಎಂಡಿ ಪರೀಕ್ಷೆಯ ಮೂಲಕ ನಿಮ್ಮ ಸಮಗ್ರ ಮೂಳೆಗಳ ಗುಣಮಟ್ಟ ತಿಳಿದರೆ ಆಹಾರ ಪದ್ದತಿ ಬದಲಾವಣೆಯ ಅವಶ್ಯಕತೆ ಇದ್ದು, ಪ್ರತಿ ದಿನ ಹಸಿ ತರಕಾರಿ, ಸೊಪ್ಪು, ಡ್ರೈಫ್ರೂಟ್ಸ್, ಕ್ಯಾಲ್ಸಿಯಂ ಇರುವ ಪದಾರ್ಥಗಳನ್ನು ಸೇವಿಸಿದರೆ ಮೂಳೆಗಳ ಸಾಂಧ್ರತೆಯನ್ನು ತಡೆದು ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಸಮಾಜದ ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ವಿದ್ಯೆ ಸಿಗಬೇಕು ಎಂಬ ಕಲ್ಪನೆಯೊಂದಿಗೆ ನಿರಂತರ ನಿಸ್ವಾರ್ಥ ಸೇವೆಯಲ್ಲಿರುವ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಬದುಕಿನ ಕಡೆಯ ವ್ಯಕ್ತಿಗೂ ಸಾಮಾಜಿಕ ಸೌಲಭ್ಯಗಳು ಸಿಗಬೇಕು ಎಂಬ ಧ್ಯೇಯಯೊಂದಿಗೆ ಮುನ್ನುಗ್ಗುತ್ತಿದೆ ಎಂದರು.
ಶಿಬಿರದಲ್ಲಿ ಸುಮಾರು 40 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಚಿಕಿತ್ಸೆ ಪಡೆದರು. ಶಿಬಿರದ ವೇದಿಕೆಯಲ್ಲಿ ರೋಟರಿ ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ, ರೊ.ಆನಂದ್, ರೊ.ಚನ್ನಕೇಶವ್, ಹುಣಸೂರು ಅಪೊಲೋ ಆಸ್ಪತ್ರೆಯ ವ್ಯವಸ್ಥಾಪಕ ಕೇಶವ್, ರೊ. ಚಿಲ್ಕುಂದ ಮಹೇಶ್, ಶ್ರೀನಿವಾಸ್ ಇದ್ದರು.