Tuesday, May 20, 2025
Google search engine

Homeರಾಜ್ಯಹೋಮ್ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್ ನಡೆಸಲು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ: ಡಾ. ಕೆ ವಿ...

ಹೋಮ್ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್ ನಡೆಸಲು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ: ಡಾ. ಕೆ ವಿ ರಾಜೇಂದ್ರ

ಮೈಸೂರು: ಜಿಲ್ಲೆಯಾದ್ಯಂತ ಇರುವ ಅಧಿಕೃತವಾಗಿ ನೊಂದಾಯಿಸಿರುವ ಹೋಮ್ ಸ್ಟೇಗಳನ್ನು ಪಟ್ಟಿಯನ್ನು ಪಡೆದು,ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಮ್ ಸ್ಟೇ ಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು  ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ. ಕೆ ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಜಿಲ್ಲಾಪಂಚಾಯಿತಿಯ ಡಿ. ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅನಧಿಕೃತ ಹೋಮ್ ಸ್ಟೇ ನಿರ್ಮಾಣ ಹೆಚ್ಚಾಗುತ್ತಿದ್ದು ಅದರ ಬಗ್ಗೆ ಅಧಿಕಾರಿಗಳು ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದರು.

ಮೈಸೂರು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಯನ್ನು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಸದಸ್ಯರನ್ನಾಗಿ ನೇಮಿಸಿ, ಹಾಗೂ ನೇರ ಪಾಲುದಾರರೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು,  ಕೆಲಸದ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡಬೇಕು ಎಂದರು.

ಮೈಸೂರು ಪ್ರವಾಸೋದ್ಯಮವನ್ನು ಹೆಚ್ಚಾಗಿ ಪ್ರಚಾರ ಮಾಡಲು ಇಲಾಖೆಯ ವೆಬ್ ಸೈಟ್ ಪ್ರಾರಂಭಿಸಿ ಅದರಲ್ಲಿ ಸಾರ್ವಜನಿಕರಿಗೆ ಎಲ್ಲಾ ಮಾಹಿತಿಯು ತಿಳಿಯುವಂತೆ ಮಾಡಬೇಕು. ಯಾವುದೇ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತ್ಯಾದಿಗಳನ್ನು ಪ್ರಾರಂಭಿಸಲು ಗ್ರಾಮಪಂಚಾಯಿತಿ ಅಥವಾ ಕಾರ್ಪೋರೇಶನ್ ಅವರು ಅನುಮತಿ ನೀಡುವ ಮೊದಲು ನಿಧಿ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು. ಇದರಿಂದ ಹೆಚ್ಚಿನ ಜನರಿಗೆ ನಿಧಿ ಪೋರ್ಟಲ್ ಬಗ್ಗೆ ಅವರ ಸೌಲಭ್ಯದ ಬಗ್ಗೆ  ತಿಳಿಯುತ್ತದೆ ಎಂದರು.

ಈಗಾಗಲೇ ಗುರುತಿಸಿರುವ ಪ್ರವಾಸಿತಾಣಗಳಲ್ಲಿನ  ಕುಂದು ಕೊರತೆಯನ್ನು ಗಮನಿಸಿ ಅದರ ಅಭಿವೃದ್ಧಿಗೆ ಬೇಕಾದ ಕಾಮಗಾರಿಗನ್ನು ಕೈಗೊಳ್ಳಬೇಕು.ಇದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ ಮಾಡಬೇಕು. ಅದಲ್ಲದೆ ಸಾರ್ವಜನಿಕರಿಂದ ಇತರೆ ಬಿಟ್ಟು ಹೋದಂತಹ ಪ್ರವಾಸಿ ತಾಣಗಳೇನಾದರೂ ಇದ್ದರೆ ಅದರ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಪಟ್ಟಿಯಲ್ಲಿ ಸೇರಿಸಬೇಕು ಎಂದರು.

ಪ್ರವಾಸಿಗರನ್ನು ಸೆಳೆಯಲು ಪುಟ್ಟ ವಿಡಿಯೋಗಳ ಮೂಲಕ ಪ್ರಚಾರ ಮಾಡಬೇಕು. ಅದಕ್ಕೆ  ಪ್ರಸಿದ್ಧ ಬ್ಲಾಗರ್ಸ್ ಹಾಗೂ ಛಾಯಾಚಿತ್ರಗಾರರಿಗೆ ಮೈಸೂರು ಪ್ರವಾಸಿ ತಾಣಗಳ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ ನಗದು ಬಹುಮಾನವನ್ನು ನೀಡಬೇಕು. ಇದರಿಂದ ಬಂದ ಉತ್ತಮ ವಿಡಿಯೋ ಮತ್ತು ಫೋಟೋವನ್ನು ಆಯ್ದುಕೊಂಡು ಕಾಫಿ ಟೇಬಲ್ ಬುಕ್ ಅನ್ನು ತಯಾರಿಸಬೇಕು ಎಂದರು.

ಪ್ರವಾಸೋದ್ಯಮ ಇಲಾಖೆಯಿಂದ ಬರುವಂತಹ ಪ್ರವಾಸಿಗರಿಗೆ ವಿವಿಧ ರೀತಿಯ ಪ್ಯಾಕೇಜ್ ಗಳನ್ನು ನೀಡಿ ಅವರನ್ನು ಸೆಳೆಯಬೇಕು ಎಂದರು.

ಬ್ರಾಂಡ್ ಮೈಸೂರು ಲೋಗೋ ವನ್ನು ಜಿಲ್ಲೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಹಾಕಿ ಅದರ ಪ್ರಚಾರ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಎಂ ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತರಾದ ಡಾ ಮಧು, ಪೊಲೀಸ್ ವರಿಷ್ಟಾಧಿಕಾರಿಗಳಾದ ಸೀಮಾ ಲಾಟ್ಕರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಸೇರಿದಂತೆ ವಿವಿಧ ಸಂಸ್ಥೆಯ ನೇರ ಪಾಲುದಾರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular