ಮೈಸೂರು: ತಾಲೊಕು ರೋಟರಿ ಸಂಸ್ಥೆಗೆ ಜಿಲ್ಲಾ ಗವರ್ನರ್ ಹೆಚ್ ಆರ್.ಕೇಶವ್ ರವರ ಅಧಿಕೃತ ಭೇಟಿ ನೀಡಿದ್ದು, ಈ ಸಂಧರ್ಭದಲ್ಲಿ ರೋಟರಿ ಶಾಲೆಯ ಮಕ್ಕಳು ಸಿದ್ದ ಪಡಿಸಿದ್ದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದರು.
ಬಳಿಕ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಅನಾವರಣ ಆಗಬೇಕಾದರೆ ಶಾಲೆಯ ದಿನಗಳಲ್ಲೆ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ,ಮಾತ್ರ ಅವರ ಸೂಕ್ಷ್ಮತೆಯ ಚಿಲುಮೆ ಜಗತ್ತಿಗೆ ಪರಿಚಯವಾಗಲಿದೆ ಎಂದರು.
ರೋಟರಿ ಎಜಿ. ಸತ್ಯನಾರಾಯಣ, ರೋಟರಿ ಅಧ್ಯಕ್ಷ ಚನ್ನಕೇಶವ್, ಕಾರ್ಯದರ್ಶಿ ಡಾ.ಪ್ರಸನ್ನ, ವಲಯ ಸೇನಾನಿ ಡಾ.ಬಸವರಾಜ್, ರೋಟರಿ ಸದಸ್ಯರಾದ ಆನಂದ್, ರಾಜಶೇಖರ್, ಧರ್ಮಾಪುರ ನಾರಾಯಣ್, ಪಿ.ಪಾಂಡುಕುಮಾರ್, ಹೆಚ್.ಆರ್.ಕೃಷ್ಣಕುಮಾರ್, ಗಿರೀಶ್, ಶ್ಯಾಮ್, ರವೀಶ್, ಇದ್ದರು.