Wednesday, May 21, 2025
Google search engine

Homeರಾಜ್ಯಸುದ್ದಿಜಾಲರಜತ ಮಹೋತ್ಸವದ ಪ್ರಯುಕ್ತ: ಉತ್ತಮ ಗ್ರಾಹಕರಿಗೆ ಅಭಿನಂದನೆ

ರಜತ ಮಹೋತ್ಸವದ ಪ್ರಯುಕ್ತ: ಉತ್ತಮ ಗ್ರಾಹಕರಿಗೆ ಅಭಿನಂದನೆ

ಕೆ.ಆರ್.ನಗರ: ಅತಿ ಹೆಚ್ಚು ಠೇವಣೆಗಳೊಂದಿಗೆ ಗ್ರಾಹಕರ ಜತೆ ಯಶಸ್ವಿಯಾಗಿ ನಮ್ಮ ಬ್ಯಾಂಕ್ ಜಿಲ್ಲೆಯಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಈ ಯಶಸ್ಸಿಗೆ ಕಾರಣರಾದ ಎಲ್ಲಾ ಗ್ರಾಹಕರು, ಷೇರು ಸದಸ್ಯರು, ಠೇವಣಿದಾರರು ಹಾಗೂ ಆಡಳಿತ ಮಂಡಳಿಗೆ ನನ್ನ ಧನ್ಯವಾದಗಳು ಎಂದು ನವ ನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.

ಪಟ್ಟಣದ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕ್‌ನ ರಜತ ಮಹೋತ್ಸವದ ಪ್ರಯುಕ್ತ ಉತ್ತಮ ಗ್ರಾಹಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರ ಅನುಕೂಲಕ್ಕೆ ನಿಂತಿದೆ ಎಂದರು. ನಮ್ಮ ಬ್ಯಾಂಕ್ ಅನ್ನು ೧೯೯೮ರಲ್ಲಿ ಮಾಜಿ ಸಚಿವರಾದ ದಿ.ಎಸ್.ನಂಜಪ್ಪ ಅವರು ಸ್ಥಾಪಿಸಿದರು. ೨೫ನೇ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಇದಕ್ಕೆ ಕಾರಣರಾದ ಉತ್ತಮ ಗ್ರಾಹಕರಿಗೆ ಅಭಿನಂದಿಸಲಾಗುತ್ತಿದೆ. ಮೈಸೂರಿನ ಹೂಟಗಳ್ಳಿ ಸೇರಿದಂತೆ ಕೆ.ಆರ್.ನಗರ, ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿದ್ದು, ಕೆ.ಆರ್.ನಗರದಲ್ಲಿ ಕೇಂದ್ರ ಕಚೇರಿ ಹೊಂದಿದೆ ಎಂದು ಹೇಳಿದರು.


ಶಿಕ್ಷಣ ಸಾಲ, ಗೃಹ ನಿರ್ಮಾಣ, ಚಿನ್ನದ ಮೇಲೆ ಸಾಲ ಹಾಗೂ ಆಸ್ತಿ ಆಧಾರದ ಮೇಲೆ ಸಾಲ ನೀಡಲಾಗುತ್ತದೆ. ಸಣ್ಣ ವ್ಯಾಪಾರಿಗಳು, ಮಧ್ಯಮ ವ್ಯಾಪಾರಿಗಳಿಗೆ ಮತ್ತು ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಸಾಲು ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಕೇವಲ ಶೇ.೧ ರಂತೆ ೫೦ ಸಾವಿರ ರೂಪಾಯಿಗಳ ಸಾಲ ನೀಡಲಾಗುತ್ತಿದ್ದು ಈ ಮೂಲಕ ಸಣ್ಣ ವ್ಯಾಪಾರಿಗಳ ನೆರವಿಗೆ ನಮ್ಮ ಬ್ಯಾಂಕ್ನಿಂತಿದೆ ಎಂದರು. ಸಣ್ಣ ವ್ಯಾಪಾರಿಗಳು ಮಾತ್ರವಲ್ಲದೆ, ಹೈನುಗಾರಿಕೆ, ಕೋಳಿ ಫಾರಂ ಹಾಗೂ ಕುರಿಗಳ ಫಾರಂ ನಡೆಸುತ್ತಿರುವವರಿಗೂ ಸಾಲ ಕೊಡಲಾಗುತ್ತದೆ. ಬ್ಯಾಂಕ್‌ನಲ್ಲಿ ಕರೆಂಟ್, ಸೇವಿಂಗ್ಸ್ ಅಕೌಂಟ್ ಗಳನ್ನು ತೆರೆಯಬಹುದು ಹಾಗೂ ಎಟಿಎಂ ಬಳಕೆಗೂ ಅವಕಾಶವಿರುತ್ತದೆ. ಇದರ ಜೊತೆಗೆ ಆರ್‌ಟಿಜಿಎಸ್, ನೆಫ್ಟ್ ಸೌಲಭ್ಯಗಳು ೨೪ಗಂಟೆಯೂ ಇರುತ್ತದೆ. ಅತಿ ಶೀಘ್ರವಾಗಿ ಪೋನ್ ಪೇ, ಗೂಗಲ್ ಪೇ ಬಳಕೆಯ ಅನುಕೂಲವನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ತಿಳಿಸಿದರು.

ನಮ್ಮ ಬ್ಯಾಂಕ್ ಕೇವಲ ಠೇವಣಿ ಹಣದಿಂದ ಸಾಲವನ್ನು ಕೊಟ್ಟು ಅದರಿಂದ ಲಾಭಗಳಿಸುತ್ತಿದ್ದು ನಮ್ಮಲ್ಲಿ ಹಿರಿಯ ನಾಗರೀಕರಿಗೆ ಹೆಚ್ಚಿನ ಪ್ರೋತ್ಸಾಹ ನಿಡಲಾಗುತ್ತಿದ್ದು ಅವರ ಠೇವಣೆ ಹಣಕ್ಕೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತಿದೆ. ಇದರ ಅನುಕೂಲವನ್ನು ಬಳಸಿಕೊಳ್ಳಿ ಎಂದ ಅಧ್ಯಕ್ಷರು ಸಾಲ ಪಡೆದ ಸಾಲಗಾರರು ನಿಗದಿತ ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಮಾಡುವ ಮೂಲಕ ಇತರರಿಗೆ ಅದರ ಅನುಕೂಲವಾಗುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಬ್ಯಾಂಕ್‌ನಲ್ಲಿ ಹೆಚ್ಚು ಖಾತೆಗಳನ್ನು ತೆರೆಯುವ ಮೂಲಕ. ಠೇವಣಿಗಳನ್ನು ಇಟ್ಟು ಇದರ ಲಾಭ ಪಡೆಯುವ ಜತೆಗೆ ಬ್ಯಾಂಕ್ ಇನ್ನಷ್ಟು ಉತ್ತಮವಾಗಿ ನಡೆದು ಹೆಚ್ಚು ಶಾಖೆಗಳನ್ನು ತೆರೆದು ಅಧಿಕ ಲಾಭ ಗಳಿಸಲು ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ನೂರಾರು ಮಂದಿ ಉತ್ತಮ ಗ್ರಾಹಕರಿಗೆ ಉಡುಗರೆ ನೀಡುವ ಮೂಲಕ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ದಿ.ಎಸ್.ನಂಜಪ್ಪರವರ ಧರ್ಮಪತ್ನಿ ಲಲಿತಮ್ಮನಂಜಪ್ಪ, ಸುಪುತ್ರ ಕೆ.ಎನ್.ದಿನೇಶ್, ಬ್ಯಾಂಕ್‌ನ ಆಡಳಿತ ಮಂಡಳಿ ಉಪಾಧ್ಯಕ್ಷೆ ಸರೋಜಾ ನಾರಾಯಣ್, ನಿರ್ದೇಶಕರಾದ ವಿಜಯಕುಮಾರ್, ರಶ್ಮಿದಿನೇಶ್, ವೈ.ಎಸ್.ಕುಮಾರ್, ಕೇಶವ್, ಎಂ.ಕೆ.ಮಹದೇವ್, ಚಂದ್ರಕುಮಾರ್, ಎಸ್.ಮಹದೇವಯ್ಯ, ಎ.ಚಂದ್ರಶೇಖರ್, ಸುಬ್ಬನಾಯಕ, ಅಪ್ಸರಬಾಬು, ಕೆ.ಎನ್.ರಮೇಶ್ ರಾವ್, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಹೆಚ್.ಬಿ.ಅನಂತರಾಮಯ್ಯ, ಎನ್.ಎಸ್.ವಿಶ್ವನಾಥ್, ವಿ.ಶ್ರೀನಿವಾಸಮೂರ್ತಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್
ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular