Thursday, November 13, 2025
Google search engine

Homeರಾಜ್ಯಸುದ್ದಿಜಾಲಆನ್‌ಲೈನ್ ಮೂಲಕವೇ ಪ್ರಶ್ನೆಪತ್ರಿಕೆ ಸಿದ್ಧ: VTU ಮತ್ತೊಂದು ಪರಿಣಾಮಕಾರಿ ಹೆಜ್ಜೆ.

ಆನ್‌ಲೈನ್ ಮೂಲಕವೇ ಪ್ರಶ್ನೆಪತ್ರಿಕೆ ಸಿದ್ಧ: VTU ಮತ್ತೊಂದು ಪರಿಣಾಮಕಾರಿ ಹೆಜ್ಜೆ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆನ್‌ಲೈನ್‌ ಮೂಲಕವೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬಂದಿದೆ.

ಆನ್‌ಲೈನ್‌ ಪ್ರಶ್ನೆಪತ್ರಿಕೆಗಳ ರವಾನೆ, ಪರೀಕ್ಷೆ ನಡೆಸುವ, ಫಲಿತಾಂಶ ನೀಡುವ ಕ್ರಮ ದಶಕದಿಂದ ಇದೆ. ಈವರೆಗೆ ಪ್ರಶ್ನೆಪತ್ರಿಕೆಗಳನ್ನು ವಿಶ್ವವಿದ್ಯಾಲಯದಲ್ಲೇ ಭೌತಿಕವಾಗಿ ಸಿದ್ಧಪಡಿಸಲಾಗುತಿತ್ತು. ಈಗ ಅದನ್ನೂ ಆನ್‌ಲೈನ್‌ ಪ್ರಕ್ರಿಯೆಗೆ ಅಳವಡಿಸಿದ್ದು, ಪರೀಕ್ಷೆಯ ಎಲ್ಲ ಚಟುವಟಿಕೆಗಳನ್ನೂ ಕಾಗದರಹಿತ ಮಾಡಲಾಗುತ್ತಿದೆ.
ಬಿ.ಇ., ಬಿ.ಟೆಕ್, ಬಿ.ಫ್ಲ್ಯಾನ್, ಬಿ.ಎಸ್ಸಿ (ಆನರ್ಸ್), ಬಿ.ಆರ್ಕ್, ಎಂಬಿಎ, ಎಂಸಿಎ, ಎಂ.ಟೆಕ್, ಎಂ.ಆರ್ಕ್, ಎಂ.ಪ್ಲಾನ್, ಎಂ.ಎಸ್ಸಿ (ಎಂಜಿನಿಯರಿಂಗ್), ಪಿಎಚ್.ಡಿ, ಇಂಟಿಗ್ರೇಟೆಡ್‌ ಡ್ಯುಯಲ್ ಡಿಗ್ರಿ ಸೇರಿ ಎಲ್ಲ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೂ ಇದೇ ಪದ್ಧತಿ ಅಳವಡಿಕೆಯಾಗಲಿದೆ.
‘ಶೀಘ್ರವೇ ಪರೀಕ್ಷಾ ಮಂಡಳಿ ಸಭೆ ಕರೆದು, ರೂಪುರೇಷೆ ಅಂತಿಮಗೊಳಿಸುತ್ತೇವೆ. ಪೂರ್ವಸಿದ್ಧತೆ ನಡೆದಿದೆ. 50 ಲ್ಯಾಪ್‌ಟಾಪ್‌ಗಳು ಸಿದ್ದವಾಗಿವೆ. ಪ್ರಶ್ನೆಪತ್ರಿಕೆ ರಚನೆ, ಪಾಸ್‌ವರ್ಡ್ ರಕ್ಷಣೆ ಒದಗಿಸುವುದು ಸೇರಿ ಸಮಗ್ರ ತರಬೇತಿ ನೀಡಲಾಗುತ್ತದೆ’ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿ ಬಾರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಕಾಗದದ ಕವರ್‌ಗಳು, ಬಾಕ್ಸ್‌ಗಳು, ಸಾಗಣೆ ವಾಹನ, ಅದಕ್ಕೆ ಭದ್ರತೆ, ಅಧ್ಯಾಪಕರ ಖರ್ಚು ಒದಗಿಸಬೇಕಿತ್ತು. 130ಕ್ಕೂ ಹೆಚ್ಚು ಪ್ರೊಫೆಸರ್‌ಗಳು ವಿ.ವಿ ಆವರಣದಲ್ಲೇ ಉಳಿದು, ಧಾವಂತದಲ್ಲಿ ಪರಿಶೀಲಿಸುತ್ತಿದ್ದರು. ಈಗ ಅದಕ್ಕೆ ಅವಕಾಶವೇ ಇರುವುದಿಲ್ಲ. ಎಲ್ಲರ ಸಮಯದ ಜೊತೆಗೆ ಹಣದ ಉಳಿತಾಯ ಆಗುತ್ತದೆ. ಪ್ರಶ್ನೆಪತ್ರಿಕೆ ರಚನೆಯಲ್ಲಿ ಆಗಬಹುದಾದ ಅವಘಡಗಳೂ ತಪ್ಪುತ್ತವೆ’ ಎಂದರು.
ವಿಶ್ವದ ಉತ್ತಮ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ವಿಟುಯು ನಿಲ್ಲಬೇಕು ಎಂಬುದು ನಮ್ಮ ಗುರಿ. ಆಧುನಿಕ ಯುಗದಲ್ಲಿ ಸಾಧ್ಯವಿರುವ ಎಲ್ಲ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದೇವೆ ಎಂದು ಕುಲಪತಿ ಹೇಳಿದರು.

“ವರ್ಷಕ್ಕೆ ಎರಡು ಘಟಿಕೋತ್ಸವ ಪರೀಕ್ಷೆ ಬಳಿಕ ಒಂದೇ ತಾಸಿನಲ್ಲಿ ಫಲಿತಾಂಶ ಎ.ಐ ಬಳಕೆ ಸೇರಿ ಸುಧಾರಣೆಗೆ ಒತ್ತು ನೀಡಲಾಗಿದೆ. ಇದು ‘ಕಾಗದರಹಿತ ವಿ.ವಿ’ ಮಾಡುವತ್ತ ಮತ್ತೊಂದು ಹೆಜ್ಜೆಯಾಗಿದೆ.
-ಪ್ರೊ.ಎಸ್.ವಿದ್ಯಾಶಂಕರ, ಕುಲಪತಿ. ವಿಟಿಯು ಬೆಳಗಾವಿ

ವಿಟಿಯು ವಿಸ್ತಾರ
3.2: ಲಕ್ಷ ವಿಟಿಯು ಪರಿಧಿಯ ವಿದ್ಯಾರ್ಥಿಗಳು
215: ಎಂಜಿನಿಯರಿಂಗ್ ಆರ್ಕಿಟೆಕ್ಟರ್ ಕಾಲೇಜುಗಳು
39: ಸ್ವಾಯತ್ತ ಕಾಲೇಜುಗಳು
16: ಸರ್ಕಾರಿ ಕಾಲೇಜುಗಳು
25: ಆರ್ಕಿಟೆಕ್ಟರ್ ಸ್ಕೂಲ್
2: ಘಟಕ ಮಹಾ ವಿದ್ಯಾಲಯಗಳು

RELATED ARTICLES
- Advertisment -
Google search engine

Most Popular