Wednesday, May 21, 2025
Google search engine

Homeರಾಜಕೀಯಬಹಿರಂಗ ಪ್ರಚಾರಕ್ಕೆ ತೆರೆ: ಮಂಡ್ಯದಲ್ಲಿ ಕೈ -ದೋಸ್ತಿ ಪಡೆ ಶಕ್ತಿ ಪ್ರದರ್ಶನ.!

ಬಹಿರಂಗ ಪ್ರಚಾರಕ್ಕೆ ತೆರೆ: ಮಂಡ್ಯದಲ್ಲಿ ಕೈ -ದೋಸ್ತಿ ಪಡೆ ಶಕ್ತಿ ಪ್ರದರ್ಶನ.!

ಮಂಡ್ಯ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಹಿನ್ನೆಲೆ ಸಕ್ಕರೆನಾಡಲ್ಲಿ ಇಂದು ಅಭ್ಯರ್ಥಿಗಳಿಂದ ಪ್ರಚಾರದ ಅಬ್ಬರ ಜೋರಾಗಿದೆ.

ಇಂದು ಕಾಂಗ್ರೆಸ್  ಮತ್ತು ಮೈತ್ರಿ  ಅಭ್ಯರ್ಥಿಯ ರೋಡ್ ಷೋ

ಮಂಡ್ಯ ನಗರದಲ್ಲಿ ಇಂದು ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಬಹಿರಂಗ ಸಮಾವೇಶ ಹಮ್ಮಿಕೊಂಡಿದ್ದು, ಸಂಸದೆ ಸುಮಲತಾ ಪ್ರಚಾರ ಭಾಗಿಯಾಗಲಿದ್ದಾರೆ.

ಸಮಾವೇಶದಲ್ಲಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ

ಬೃಹತ್ ರ್ಯಾಲಿ ಮೂಲಕ ಭರ್ಜರಿ ಮತ ಬೇಟೆಗೆ ಪ್ಲಾನ್ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಕಡೇ ದಿನವೂ ನಟ ದರ್ಶನ್  ಮತ ಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ಚಾಲೆಂಜಿಂಗ್ ಸ್ಟಾರ್ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಿನ್ನೆಲೆಯಲ್ಲಿ ಅಬ್ಬರಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ.

ಬೆಳಿಗ್ಗೆ 10.30 ರಿಂದ ಮಧ್ಯಾಹ್ನದವರೆಗೂ ತೆರದ ವಾಹನದಲ್ಲಿ ಮತ ಯಾಚನೆ ಮಾಡಲಿದ್ದು, ಮಂಡ್ಯ ಸಿಟಿ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆ ಹಾಗೂ ಸರ್ಕಲ್ ಗಳಲ್ಲಿ ಸುಮಾರು 10 ಕಿಮೀ ವ್ಯಾಪ್ತಿಯಲ್ಲಿ ನಟ ದರ್ಶನ್ ಸಂಚರಿಸಲಿದ್ದಾರೆ.

ಕಾರಿಮನೆ ಗೇಟ್, ಹೊಳಲು ಸರ್ಕಲ್, ಸಂಜಯ ವೃತ್ತ, ನೂರಡಿ ರಸ್ತೆ, ಮೈಸೂರು-ಬೆಂಗಳೂರು ರಸ್ತೆ, ಫ್ಯಾಕ್ಟರಿ ಸರ್ಕಲ್, ಗುತ್ತಲು ರಸ್ತೆ ಹಾಗೂ ಅರ್ಕೇಶ್ವರ ನಗರದಲ್ಲಿ ದರ್ಶನ್ ಪ್ರಚಾರ ಮಾಡಲಿದ್ದಾರೆ.

ರೋಡ್ ಶೋ ವೇಳೆ ಸಾವಿರಾರು ಕಾರ್ಯಕರ್ತರಿಂದ ಬೈಕ್ ರ್ಯಾಲಿಗೂ ತಯಾರಿ ನಡೆಸಿದ್ದಾರೆ.

ಮತ್ತೊಂದೆಡೆ ಮಧ್ಯಾಹ್ನ 1 ಗಂಟೆಗೆ ಹೆಚ್.ಡಿ. ಕುಮಾರಸ್ವಾಮಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.

ರೋಡ್ ಶೋ ಮೂಲಕ ಬಹಿರಂಗ ಪ್ರಚಾರಕ್ಕೆ ದಳಪತಿ ತೆರೆ ಎಳೆಯಲಿದ್ದಾರೆ.

ಮಂಡ್ಯ ವಿವಿ ಮುಂಭಾಗದಿಂದ ಸಂಜಯ ವೃತ್ತದವರೆಗೆ ರ್ಯಾಲಿ ನಡೆಯಲಿದ್ದು, ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಭಾವನಾತ್ಮಕವಾಗಿ ಭಾಷಣದ ಮೂಲಕ ಮತ ಸೆಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾವೇರಿ, ಮೇಕೆದಾಟು ವಿಚಾರ ಮುಂದಿಟ್ಟು ಮತ ಕೇಳಲು ಪ್ಲಾನ್ ಮಾಡಿಕೊಂಡಿರುವ ಸಾಧ್ಯತೆ ಇದೆ.

ಅಭ್ಯರ್ಥಿ ಕುಮಾರಸ್ವಾಮಿಗೆ ಪುತ್ರ ನಿಖಿಲ್ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಸಾಥ್ ನೀಡಲಿದ್ದಾರೆ.

RELATED ARTICLES
- Advertisment -
Google search engine

Most Popular