Wednesday, May 21, 2025
Google search engine

HomeUncategorizedಐತಿಹಾಸಿಕ ಮೆರಗು ನೀಡುವಂತೆ ಕುಸ್ತಿ ಪಂದ್ಯಾವಳಿ ಆಯೋಜನೆ: ನಂದಿನಿ

ಐತಿಹಾಸಿಕ ಮೆರಗು ನೀಡುವಂತೆ ಕುಸ್ತಿ ಪಂದ್ಯಾವಳಿ ಆಯೋಜನೆ: ನಂದಿನಿ


ಮೈಸೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೈಸೂರು ದಸರಾಕ್ಕೆ ಮೆರಗು ನೀಡುವ ಕುಸ್ತಿ ಪಂದ್ಯಾವಳಿ ಆಯೋಜನೆಯನ್ನು ಮಾಡಲಾಗಿದೆ ಎಂದು ದಸರಾ ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ನಂದಿನಿ ತಿಳಿಸಿದರು.

ಇಂದು ನಗರದ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನೂ ಉದ್ದೇಶಿಸಿ ಮಾತನಾಡಿ, ಈ ಬಾರಿ ಮೈಸೂರು ದಸರಾದಲ್ಲಿ ವಿವಿಧ ರಾಜ್ಯಗಳ ಕುಸ್ತಿಪಟುಗಳು ಭಾಗವಹಿಸುತ್ತಿದ್ದು, ಮೈಸೂರು ದಸರಾದ ಮೆರಗು ಸಾರುವ ಕುಸ್ತಿ ಪಂದ್ಯವನ್ನು ನಡೆಸಲಾಗುವುದು ಎಂದು ಅಪರ ಪೊಲೀಸ್ ಅಧಿಕಾರಿ ನಂದಿನಿ ಅವರು ತಿಳಿಸಿದರು.

ಅಕ್ಟೋಬರ್ 15 ರಂದು ಸಂಜೆ 4 ಗಂಟೆಗೆ ವಸ್ತು ಪ್ರದರ್ಶನ ಪ್ರಾಧಿಕಾರದ ದೇವರಾಜ್ ಅರಸು ವಿಧೋದ್ದೇಶ ಸಂಘ ಆವರಣದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸುವರು ಮತ್ತು ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆ ಸಚಿವರು ಮತ್ತು ಮಂತ್ರಿಗಳು ಭಾಗವಹಿಸುವರು.

ಆರಂಭಿಕ ಕುಸ್ತಿ ಪಂದ್ಯಾವಳಿಯು ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ v/s ದೆಹಲಿಯ ಪೈಲ್ವಾನ್ವಿ ಕಿ, ಬೆಳಗಾಂ ನ ಸುನಿಲ್ ಪಡುತಾರೆ v/s ಪೈಲ್ವಾನ್ ರಾಹುಲ್ ರಾಟಿ ನಡುವೆ ನಡೆಯಲಿದ್ದು, ಬಾಲಕಿಯರ ವಿಭಾಗದಲ್ಲಿ ಬನ್ನೂರಿನ ಪೈಲ್ವಾನ್ ಜಾಹ್ನವಿ v/s ಮಂಡ್ಯದ ಪೈಲ್ವಾನ್ ಸ್ಫೂರ್ತಿ ಹಾಗೂ ರಮನಹಳ್ಳಿಯ ಪೈಲ್ವಾನ್ ಸಿಂಚನ v/s ಮಂಡ್ಯದ ಅಮೂಲ್ಯ ನಡುವೆ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ ಎಂದರು.
ನಾಳೆ ಒಟ್ಟು 30 ಕುಸ್ತಿ ಪಂದ್ಯಾವಳಿಗಳು ನಡೆಯಲಿದ್ದು , ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾರ್ವಜನಿಕರು ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿ ಯಲ್ಲಿ ದಸರಾ ಕುಸ್ತಿ ಉಪ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular