Friday, August 1, 2025
Google search engine

Homeರಾಜ್ಯ“ಬಿಜೆಪಿ ಮತಗಳ್ಳತನ ಎಕ್ಸ್‌ಪೋಸ್ ಮಾಡುವುದು ನಮ್ಮ ಉದ್ದೇಶ” – ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ

“ಬಿಜೆಪಿ ಮತಗಳ್ಳತನ ಎಕ್ಸ್‌ಪೋಸ್ ಮಾಡುವುದು ನಮ್ಮ ಉದ್ದೇಶ” – ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: “ಬಿಜೆಪಿ ಮತಗಳ್ಳತನ ನಡೆಸಿದೆಯೆಂಬುದನ್ನು ಜನರ ಗಮನಕ್ಕೆ ತರಬೇಕು ಎಂಬುದೇ ನಮ್ಮ ಉದ್ದೇಶ. ಈ ಕುರಿತು ಪ್ರತಿಭಟನಾ ಸಭೆ ಅಥವಾ ರ್ಯಾಲಿ ನಡೆಸಬೇಕೆಂಬ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು,” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಹೋಟೆಲ್‌ನಲ್ಲಿ ನಡೆದ ಕ್ವಾಂಟಮ್ ಶೃಂಗಸಭೆ ಬಳಿಕ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, “ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ರಾಜ್ಯ ಮತ್ತು ದೇಶದ ಮಟ್ಟದಲ್ಲಿ ಅಕ್ರಮ ಎಸಗಿರುವ ವಿಷಯವನ್ನು ಬೆಳಕಿಗೆ ತರುತ್ತೇವೆ. ಪಕ್ಷದಿಂದ ಈ ಕುರಿತು ಸಂಶೋಧನೆಯೂ ನಡೆಯುತ್ತಿದೆ. ಆದರೆ, ಪ್ರತಿಭಟನೆಯ ಸ್ವರೂಪವನ್ನು ನ್ಯಾಯಾಲಯದ ನಿರ್ದೇಶನಗಳ ಆಧಾರದಲ್ಲಿ ನಿರ್ಧರಿಸಲಾಗುವುದು,” ಎಂದರು.

ಚುನಾವಣಾ ಅವ್ಯವಸ್ಥೆಯ ವಿರುದ್ಧ ನಗರದೊಳಗೆ ಪ್ರತಿಭಟನೆ ಏಕೆ ಎಂಬ ಪ್ರಶ್ನೆಗೆ ಅವರು, “ನಾವು ಕರ್ನಾಟಕದ ಜನತೆಗೆ ಮಾತ್ರ ಉತ್ತರದಾಯಿಗಳು. ಬಿಜೆಪಿ ಚಿಲುಮೆ ಸಂಸ್ಥೆ ಮೂಲಕ ಮತಗಳ್ಳತನ ಮಾಡಿದೆ ಎಂಬುದರ ಕುರಿತು ನಮ್ಮ ನಾಯಕರು ಸಮರ್ಥವಾಗಿ ಮಾತನಾಡುತ್ತಾರೆ,” ಎಂದರು. ರಾಹುಲ್ ಗಾಂಧಿಯವರು ಜನರನ್ನು ಎಚ್ಚರಿಸಲು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಐಟಿ ಕಂಪನಿಗಳಿಗೆ ಸ್ವಾಗತ:

ಮಹಾರಾಷ್ಟ್ರದಿಂದ ಬರುವ ಐಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. “ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪುಣೆಯಿಂದ ಐಟಿ ಕಂಪನಿಗಳು ಬೆಂಗಳೂರಿಗೆ ಹೋಗುತ್ತಿವೆ ಎಂದು ಹೇಳಿದ್ದಾರೆ. ಅವರಿಗೆ ಧನ್ಯವಾದಗಳು. ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆ,” ಎಂದರು ಡಿಸಿಎಂ.

ಹನಿಟ್ರ್ಯಾಪ್ ಬಗ್ಗೆ ಪ್ರತಿಕ್ರಿಯೆ ಇಲ್ಲ:

ರಾಜಣ್ಣ ಹನಿಟ್ರ್ಯಾಪ್ ಪ್ರಕರಣದ ಕುರಿತು, “ನನಗೆ ಇದರಿಂದ ಯಾವುದೇ ಸಂಬಂಧವಿಲ್ಲ. ಏನು ನಡೆದಿದೆ ಎನ್ನುವ ಮಾಹಿತಿಯೇ ಇಲ್ಲ,” ಎಂದು ಹೇಳಿದರು.

ಕೆಎಂಎಫ್ ಅಧ್ಯಕ್ಷ ಸ್ಥಾನದ ಕುರಿತು:

“ಈ ವಿಷಯ ಮಾಧ್ಯಮದ ಸೃಷ್ಟಿ. ಇದರ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಆಭರಣ ಮಳಿಗೆ ಉದ್ಘಾಟನೆ:

“ಈ ಕುಟುಂಬವು ನನ್ನ ಆತ್ಮೀಯ. ಇವರು 200 ಮಳಿಗೆಗಳತ್ತ ಬೆಳೆದು ನಿಲ್ಲಲಿ ಎಂಬುದು ನನ್ನ ಆಶಯ,” ಎಂದು ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular