Wednesday, May 21, 2025
Google search engine

Homeರಾಜ್ಯಸರ್ಕಾರದ ಯೋಜನೆಗಳು ಪ್ರತಿ ಮನೆಗೂ ತಲುಪಿಸುವುದು ನಮ್ಮ ಗುರಿ: ಸಚಿವ ನಾಗೇಂದ್ರ

ಸರ್ಕಾರದ ಯೋಜನೆಗಳು ಪ್ರತಿ ಮನೆಗೂ ತಲುಪಿಸುವುದು ನಮ್ಮ ಗುರಿ: ಸಚಿವ ನಾಗೇಂದ್ರ

ಬಳ್ಳಾರಿ: ನಗರದ  ಎನ್ ಸಿಸಿ ಮೈದಾನದಲ್ಲಿ, ಜಿಲ್ಲಾಡಳಿತದಿಂದ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ  ಯುವಜನ ಸಬಲಿಕರಣ ಕ್ರಿಡಾ ಹಾಗೂ ಪರಿಷಿಷ್ಟ ಕಲ್ಯಾಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಸಚಿವ ನಾಗೇಂದ್ರ, ರಾಜ್ಯದ ಜನತೆಗೆ 77ನೇ ಸ್ವಾತಂತ್ರ ದಿನಾಚರಣೆಯ ಶುಭಾಶಯ ಕೋರಿದರು.

ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು ಹಾಗೂ, ಸರ್ಕಾರದ ಯೋಜನೆಗಳನ್ನ ಪ್ರತಿ ಮನೆ ಮನೆಗೂ ತಲುಪಿಸುವಲ್ಲಿ ಜಿಲ್ಲೆಯ ಪ್ರತಿಯೊಬ್ಬ ಶಾಸಕರು ಕಾರ್ಯನಿರ್ವಹಿಸಲಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಥ ಸಂಚಲನ ನಡೆಸಿದ ವಿವಿಧ ಶಾಲಾ ಮಕ್ಕಳ ತಂಡಕ್ಕೆ ಬಹುಮಾನ ನೀಡಿ ಪ್ರಶಂಸಲಾಯಿತು.

ಮಹಾನಗರ ಪಾಲಿಕೆ ಮೇಯರ್ ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರ ಮತ್ತು ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ರಂಜಿತ್ ಬಂಡಾರು ಸೇರಿದಂತೆ  ಹಲವಾರು ಜನಪ್ರತಿ ನಿಧಿಗಳು ಹಾಗೂ ಸಾವಿರಾರು ಸಾರ್ವಜನಿಕರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular